Bad Omen: ಕನ್ನಡಿ ಒಡೆದರೆ, ಹಾಲು ಚೆಲ್ಲಿದರೆ ಅಪಶಕುನವೇ? ಅದಕ್ಕೆ ಏನು ಪರಿಹಾರ?
ಕೆಲವೊಮ್ಮೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳು ಒಳಿತು- ಕೆಡುಕುಗಳು ಶಕುನದ (Bad omen) ಸಂದೇಶವನ್ನೂ ನೀಡುತ್ತವೆ. ಕೆಲವೊಮ್ಮೆ ಅವುಗಳನ್ನು ನಿರ್ಲಕ್ಷಿಸುವುದು ತುಂಬಾ ಕಷ್ಟವಾಗುತ್ತದೆ. ಪ್ರಾಚೀನ ಕಾಲದಲ್ಲಿ, ಜನರು ತಮ್ಮ ಜ್ಞಾನ ಮತ್ತು ಅನುಭವದಿಂದ
ಈ ಶಕುನದ(Shakun) ಸೂಚನೆಗಳನ್ನು ಕೆಟ್ಟದು ಎಂದು ಭಾವಿಷಿ ಕೆಲವು ರೂಢಿಗಳು ನಡೆಸಿಕೊಂಡು ಬಂದಿದ್ದಾರೆ. ಒಂದು ವೇಳೆ ಆ ರೀತಿ ಕೆಡುಕಾದರೆ ಭಯ ಬೇಡ ಇದಕ್ಕೆ ಪರಿಹಾರವನ್ನು ಶಕುನ ಶಾಸ್ತ್ರ ದಲ್ಲಿ ತಿಳಿಸಲಾಗಿದೆ.
ಮದುವೆಯ ವಿಚಾರವನ್ನು ಇತ್ಯರ್ಥಪಡಿಸಲು ಮನೆಯಿಂದ ಹೊರಟಾಗ ಗಾಜು ಅಥವಾ ಕನ್ನಡಿ ಒಡೆದು ಹೋದರೆ, ಸ್ವಲ್ಪ ಹೊತ್ತು ಇದ್ದು ನಂತರ ಮನೆಯಿಂದ ಹೊರಡಬೇಕು. ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಹನುಮಂತನ ಪ್ರಾರ್ಥಿಸಿ ಮುನ್ನಡೆಯಿರಿ
2/ 6
ನೀವು ಯಾವುದಾದರೂ ಶುಭ ಕಾರ್ಯಕ್ಕಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ ಹಾಲು ತಪ್ಪಿ ನೆಲದ ಮೇಲೆ ಚೆಲ್ಲಿಸದರೆ ಅದನ್ನು ಶುಭ ಸಂಕೇತ ಎಂದು ಪರಿಗಣಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿ ತಾಯಿ ಪಾರ್ವತಿ ಪೂಜೆಯ ನಂತರ ಮನೆಯಿಂದ ಹೊರಡಬೇಕು.
3/ 6
ಮನೆಯಲ್ಲಿ ಚಾಕು ಬೀಳುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ಯಾವುದೇ ವಿಶೇಷ ಕೆಲಸಕ್ಕಾಗಿ ಹೊರಗೆ ಹೋಗುವಾಗ ಚಾಕು ನೆಲದ ಮೇಲೆ ಬಿದ್ದರೆ, ನೀವು ಹನುಮಂತನ ಯನ್ನು ಪೂಜಿಸಿದ ನಂತರವೇ ಮನೆಯಿಂದ ಹೊರಡಬೇಕು
4/ 6
ನಮುಖ್ಯವಾದ ಅಗತ್ಯ ಕೆಲಸಕ್ಕಾಗಿ ಮನೆಯಿಂದ ಹೊರಡುತ್ತಿದ್ದರೆ ಖಾಲಿ ಬಕೆಟ್ ಅನ್ನು ನೋಡಿದರೆ, ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಈ ಸ್ಥಿತಿಯಲ್ಲಿ ಸ್ವಲ್ಪ ಸಮಯ ನಿಂತು ನಂತರ ಮಾತ್ರ ಮನೆಯಿಂದ ಹೊರಡಿ. ಇದಕ್ಕೂ ಮುನ್ನ ಗಣೇಶನ ಪೂಜೆ ಮಾಡಿ.
5/ 6
ಹಠಾತ್ ಸೀನುವಿಕೆಗೆ ಮಾತ್ರ ಗಮನ ನೀಡಬೇಕು ಎಂದು ಶಗುನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಒಬ್ಬ ವ್ಯಕ್ತಿಯು ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವನ ಸೀನುವಿಕೆಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಸೀನುವಿಕೆಯ ನಂತರ ಸ್ವಲ್ಪ ನಿಂತು ನೀರು ಕುಡಿದು ಸಾಗಬೇಕು. ಈ ವೇಳೆ ಸರಸ್ವತಿಯ ಪ್ರಾರ್ಥಿಸಿ
6/ 6
ಕಪ್ಪು ಬೆಕ್ಕು ಮಾರ್ಗವನ್ನು ದಾಟಿದರೆ, ಅದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಆಂಜನೇಯನನ್ನು ಸ್ಮರಿಸಿ ಮನೆಯಿಂದ ಹೊರಡಬೇಕು. ((ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ))