ಸಂಖ್ಯೆ 2: ನಿಮ್ಮ ಬುದ್ದಿವಂತಿಕೆ ಕೈ ಹಿಡಿಯಲಿದೆ, ಬೇರೆಯವರ ಪ್ರಭಾವಕ್ಕೆ ಒಳಗಾಗದಿರಿ. ನಿಮ್ಮ ಬದ್ಧತೆಯೇ ನಿಮಗೆ ಆಧಾರ ನೆನಪಿರಲಿ. ಭವಿಷ್ಯದ ಸಂಬಂಧದ ಯೋಜನೆಯನ್ನು ಹಂಚಿಕೊಳ್ಳುವುದು ಈಗ ಕಡ್ಡಾಯ. ಸೋಮವಾರದಂದು ಶಿವನಿಗೆ ಹಾಲು ಅಭಿಷೇಕ ಮಾಡಿ. ಅನಗತ್ಯವಾಗಿ ಇತರರಿಗೆ ಸಹಾಯ ಮಾಡುವುದನ್ನು ನಿಲ್ಲಿಸಿ. ಕೆಲಸದಲ್ಲಿ ಹಿರಿಯರ ಸಹಾಯದಿಂದ ನೀವು ಯಶಸ್ವಿಯಾಗುತ್ತೀರಿ. ಬಣ್ಣ- ಪಿಂಕ್, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 2, ದೇಣಿಗೆ: ಇಂದು ಭಿಕ್ಷುಕರಿಗೆ ಮೊಸರನ್ನು ದಾನ ಮಾಡಿ.
ಸಂಖ್ಯೆ 3: ವೃತ್ತಿಯಲ್ಲಿ ಬೆಳವಣಿಗಗೆಯಾಗಲಿದೆ. ಕೆಲಸದಲ್ಲಿ ಲಾಭ ಸಹ ನಿಮ್ಮನ್ನ ಹುಡುಕಲಿ ಬರಲಿದೆ. ಸಲಹೆಗಳನ್ನು ಸ್ವೀಕರಿಸುವುದು ಉತ್ತಮ. ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ವಕೀಲರಿಗೆ ಹೆಚ್ಚು ಉತ್ತಮವಾದ ವಾರ. ದಯವಿಟ್ಟು ಅರಿಶಿನ ಅಥವಾ ತುಳಸಿಯ ಸೇವನೆಯೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ಬಣ್ಣ ಕಿತ್ತಳೆ, ಗುರುವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 3 ಮತ್ತು 9, ದೇಣಿಗೆ: ದೇವಸ್ಥಾನದಲ್ಲಿ ಚಂದನವನ್ನು ದಾನ ಮಾಡಿ.
ಸಂಖ್ಯೆ 4: ನಿಮ್ಮ ಬಾಸ್ ನಿಮ್ಮ ವಿರುದ್ಧವಾಗಿದ್ದಾರೆ, ರಿಸ್ಕ್ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಆದರೂ ಸ್ವಲ್ಪ ಜಾಗರೂಕರಾಗಿರಿ. ನೀವು ನಿಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಡುತ್ತೀರಿ ಬ್ಯಾಂಕ್, ವಿಮೆ, ಆರೋಗ್ಯ ಮತ್ತು ಆರೈಕೆ, ಹೀಲಿಂಗ್ ಕಲೆ, ಬಟ್ಟೆ ಮತ್ತು ವಾಣಿಜ್ಯ ಆಸ್ತಿಯಲ್ಲಿ ಕೆಲಸ ಮಾಡುವವರಿಗೆ ಇದು ಅನುಕೂಲಕರ ವಾರ. ಬಣ್ಣ: ನೇರಳೆ, ಮಂಗಳವಾರ ಅದೃಷ್ಟದ ದಿನ ,ಅದೃಷ್ಟ ಸಂಖ್ಯೆ 9, ಮನಿ ಪ್ಲಾಂಟ್ ಅನ್ನು ಸ್ನೇಹಿತರಿಗೆ ದಾನ ಮಾಡಿ.
ಸಂಖ್ಯೆ 5: ಈ ವಾರ ನೀವು ಸ್ವಲ್ಪ ಸಮಸ್ಯೆ ಅನುಭವಿಸುತ್ತೀರಿ, ನಿಮ್ಮ ಆಸೆಯಂತೆ ಬದುಕಲು ಆಗುವುದಿಲ್ಲ. ಗಣಪತಿಯ ಪೂಜೆ ಮಾಡಿ. ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ನೀವು ಕುಟುಂಬ ಮತ್ತು ಸ್ನೇಹಿತರ ಬೆಂಬಲವನ್ನು ಪಡೆಯುವುದು ಅಗತ್ಯ. ಆರ್ಥಿಕವಾಗಿ ಲಾಭವಾಗಲಿದೆ. ಆಸ್ತಿ ಮತ್ತು ರಫ್ತು ಆಮದುಗಳಲ್ಲಿನ ಹೂಡಿಕೆಯ ಮೇಲಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಬಣ್ಣ ಹಸಿರು ಮತ್ತು ಕಿತ್ತಳೆ, ಬುಧವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 5, ಪ್ರಾಣಿಗಳಿಗೆ ಅಥವಾ ಅನಾಥಾಶ್ರಮಕ್ಕೆ ಹಾಲನ್ನು ದಾನ ಮಾಡಿ.
ಸಂಖ್ಯೆ 6: ಕಷ್ಟಪಡುತ್ತಿದ್ದ T V ಕಲಾವಿದರಿಗೆ ಅದ್ಭುತವಾದ ಅವಕಾಶ ಸಿಗಲಿದೆ. ಎಲ್ಲಾ ಅವಕಾಶಗಳನ್ನು ಬಳಸದರೆ ಲಾಭ ಸಿಗಲಿದೆ. ಗೃಹಿಣಿಯರು, ಕ್ರೀಡಾಪಟುಗಳು, ಚರ್ಮರೋಗ ತಜ್ಞರು ಗಾಯಕರು, ವಿನ್ಯಾಸಕರು, ಈವೆಂಟ್ ಮ್ಯಾನೇಜ್ಮೆಂಟ್, ದಲ್ಲಾಳಿಗಳು, ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಿರುತ್ತದೆ. ಬಣ್ಣ ವೈಲೆಟ್, ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6, ಭಿಕ್ಷುಕರಿಗೆ ಸಿಹಿತಿಂಡಿಗಳನ್ನು ದಾನ ಮಾಡಿ.
ಸಂಖ್ಯೆ 7: ಸಂಶೋಧನೆ, ವಿಶ್ಲೇಷಣೆ, ವಿಜ್ಞಾನ, ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರದ ಜನರಿಗೆ ಉತ್ತಮವಾದ ದಿನ. ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಕಡೆ ಗೆಲ್ಲುವ ಅವಕಾಶವಿದೆ. ದೊಡ್ಡದಾಗಿ ಬರುವ ಸಮಸ್ಯೆಯು ಶೀಘ್ರದಲ್ಲೇ ಪರಿಹಾರವಾಗುತ್ತದೆ. ಆರೋಗ್ಯವನ್ನು ನೋಡಿಕೊಳ್ಳಲು ಮತ್ತು ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನ ಮಾಡಿ. ಬಣ್ಣ: ಬೀಜ್, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 7 ಮತ್ತು 6, ಜಾನುವಾರುಗಳಿಗೆ ಅಥವಾ ಬಡವರಿಗೆ ಬಾಳೆಹಣ್ಣುಗಳನ್ನು ದಾನ ಮಾಡಿ.
ಸಂಖ್ಯೆ 8: ಪ್ರತಿದಿನ ಶನಿ ಮಂತ್ರವನ್ನು ಪಠಿಸಿ. ಈ ವಾರ ಮಾಡುವ ಹೂಡಿಕೆ ಭವಿಷ್ಯದಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ಆದ್ದರಿಂದ ತಾಳ್ಮೆಯಿಂದಿರಿ. ಹಣಕಾಸಿನ ಲಾಭ ಹೆಚ್ಚಾಗಲಿದೆ. ವಿವಾದಗಳು ಶೀಘ್ರದಲ್ಲೇ ಇತ್ಯರ್ಥಗೊಳ್ಳುತ್ತವೆ . ಧಾನ್ಯಗಳನ್ನು ದಾನ ಮಾಡಿ. ಬಣ್ಣ: ನೇರಳೆ, ಅದೃಷ್ಟದ ದಿನ: ಶುಕ್ರವಾರ, ಅದೃಷ್ಟ ಸಂಖ್ಯೆ: 6, ಅಗತ್ಯವಿರುವವರಿಗೆ ಚಪ್ಪಲಿ ದಾನ ಮಾಡಿ.
ಸಂಖ್ಯೆ 9: ದಂಪತಿಗಳು ಗೊಂದಲವನ್ನು ನಿವಾರಿಸಲು ಮಾತನಾಡುವುದು ಸೂಕ್ತ. ವ್ಯಾಪಾರ ಸಂಬಂಧಗಳು ಮತ್ತು ಒಪ್ಪಂದಗಳು ಲಾಭ ನೀಡಲಿದೆ. ವಿದ್ಯಾರ್ಥಿಗಳು ಪ್ರಗತಿಯನ್ನು ಸಾಧಿಸಲು ಈ ದಿನವನ್ನು ಬಳಸಬೇಕು. ವಿದ್ಯಾರ್ಥಿಗಳು, ತರಬೇತುದಾರರು, ಸಂಗೀತಗಾರರು, ಬರಹಗಾರರು, ವಿನ್ಯಾಸಕರು, ವೈದ್ಯರು, ವಕೀಲರು, ಎಂಜಿನಿಯರ್ಗಳು ಮತ್ತು ನಟರಿಗೆ ಲಾಭದ ವಾರ ಇದು. ಬಣ್ಣ: ಕಂದು, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9, ಆಶ್ರಮಕ್ಕೆ ಗೋಧಿಯನ್ನು ದಾನ ಮಾಡಿ