ಸಂಖ್ಯೆ 1: ನೀವು ಗಳಿಸಿದ ಜ್ಞಾನವನ್ನು ಪ್ರದರ್ಶಿಸಲು ಈ ವಾರ ಉತ್ತಮ ಸಮಯ. ನೀವು ಸ್ಪರ್ಧಾತ್ಮಕ ಪರೀಕ್ಷೆ, ಇಂಟರ್ ವ್ಯೂ ಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ನಿಮ್ಮ ಕೆಲಸದ ಶೈಲಿ ಮತ್ತು ಮಾತಿನ ಕಾರಣದಿಂದ ನಿಮ್ಮ ನಿಗದಿತ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ. ಕಲಾವಿದರು, ನರ್ತಕರು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಸಂಗೀತಗಾರರಿಗೆ ಜನಪ್ರಿಯತೆ ಹುಡುಕಿ ಬರಲಿದೆ. ಬಣ್ಣ: ಹಳದಿ, ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 1 ಮತ್ತು 3, ದೇಣಿಗೆ:ಹಳದಿ ಹಣ್ಣುಗಳನ್ನು ಬಡವರಿಗೆ ದಾನ ಮಾಡಿ
ಸಂಖ್ಯೆ 2: ನಿಮ್ಮ ನಿರ್ಧಾರಗಳು ಕಷ್ಟವನ್ನು ಕೊನೆಗಾಣಿಸಬೇಕು ಹೊರತು ಹೆಚ್ಚು ಮಾಡಬಾರದು ನೆನಪಿರಲಿ. ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ, ಇತರರಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ವಾರದ ಅರ್ಧದ ನಂತರ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಸೋಮವಾರದಂದು ಶಿವನಿಗೆ ಹಾಲು ಅಭಿಷೇಕ ಮಾಡಲು ಮರೆಯಬೇಡಿ. ಬಣ್ಣ: ಪೀಚ್, ಸೋಮವಾರ ಅದೃಷ್ಟದ ದಿನ ಅದೃಷ್ಟ ಸಂಖ್ಯೆ 2, ದೇಣಿಗೆ: ಇಂದು ಭಿಕ್ಷುಕರಿಗೆ ಮೊಸರನ್ನು ದಾನ ಮಾಡಿ
ಸಂಖ್ಯೆ 3: ನಿಮ್ಮ ವ್ಯಾಪಾರದ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡಲು ಇದು ಸೂಕ್ತವಾದ ವಾರ. ಮದುವೆಗೆ ಉತ್ತಮ ಆಫರ್ ಬರಲಿದೆ. ಸರಿಯಾಗಿ ಯೋಚಿಸಿ ನಿರ್ಧರಿಸಿ. ರಾಜಕಾರಣಿಗಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ವಿಜ್ಞಾನಿಗಳು, ಗಾಯಕರು, ತರಬೇತುದಾರರು, ಶಿಕ್ಷಣ ತಜ್ಞರಿಗೆ ಲಾಭದ ವಾರ ಇದು. ಬಣ್ಣ: ಕಿತ್ತಳೆ, ಗುರುವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 3 ಮತ್ತು 9 ದೇಣಿಗೆ: ದೇವಸ್ಥಾನಕ್ಕೆ ಚಂದನವನ್ನು ದಾನ ಮಾಡಿ
ಸಂಖ್ಯೆ 4: ಹಳೆಯ ಪ್ರೇಮ ಸಮಸ್ಯೆಗಳು ಅಥವಾ ವ್ಯಾಪಾರ ವಿವಾದಗಳನ್ನು ಪರಿಹರಿಸಲು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡುವುದು ಅನಿವಾರ್ಯ. ಈ ವಾರ ನಿಮ್ಮ ಮಕ್ಕಳ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ. ಬ್ಯಾಂಕ್, ವಿಮೆ, ಆರೋಗ್ಯ ಮತ್ತು ಆರೈಕೆ, ಕಲೆ, ಬಟ್ಟೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದು ಅನುಕೂಲಕರ ವಾರ. ಮಾಧ್ಯಮ, ಮಾರಾಟ, ಐಟಿ ಉದ್ಯೋಗಿಗಳು, ರಂಗಭೂಮಿ ಕಲಾವಿದರು ಅಥವಾ ನಟರು, ಟಿವಿ ನಿರೂಪಕರು ಮತ್ತು ನೃತ್ಯಗಾರರು ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಬೇಡಿ. ಬಣ್ಣಗಳು: ನೇರಳೆ, ಅದೃಷ್ಟದ ದಿನ ವೈಲೆಟ್ ಮತ್ತು ಬೂದು, ಅದೃಷ್ಟ ಸಂಖ್ಯೆ 9, ದೇಣಿಗೆಗಳು: ಮನಿ ಪ್ಲಾಂಟ್ ಅನ್ನು ಸ್ನೇಹಿತರಿಗೆ ದಾನ ಮಾಡಿ
ಸಂಖ್ಯೆ 5: ಕ್ರೀಡಾಪಟುಗಳು ಅಥವಾ ರಾಜಕಾರಣಿಗಳಿ ಇದು ವಿಶೇಷವಾದ ವಾರ ಎನ್ನಬಹುದು. ಈ ವಾರ ತಪ್ಪದೇ ಗಣೇಶನ ಪೂಜೆ ಮಾಡಿ. ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ಸ್ಟಾಕ್ ಮಾರುಕಟ್ಟೆ, ಕ್ರೀಡೆ, ಈವೆಂಟ್‌ಗಳು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನಗಳಲ್ಲಿ ಯಶಸ್ಸು ಸಿಗಲಿದೆ. ಬಣ್ಣಗಳು ಹಸಿರು ಮತ್ತು ಕಿತ್ತಳೆ, ಬುಧವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 5, ದೇಣಿಗೆ: ಪ್ರಾಣಿಗಳಿಗೆ ಅಥವಾ ಅನಾಥಾಶ್ರಮಕ್ಕೆ ಹಾಲನ್ನು ದಾನ ಮಾಡಿ
ಸಂಖ್ಯೆ 6: ಗ್ಲಾಮರ್ ಉದ್ಯಮ ಮತ್ತು ವೈದ್ಯಕೀಯ, ಬ್ರೋಕರ್‌ಗಳು, ಕಮಿಷನ್ ಏಜೆಂಟ್‌ಗಳು, ಕಾಸ್ಮೆಟಿಕ್ ಡೀಲರ್‌ಗಳು ಮತ್ತು ಬ್ಯೂಟಿಷಿಯನ್‌ಗಳಿಗೆ ಹೊಸ ಅವಕಾಶ ಸಿಗಲಿದೆ. ಅದನ್ನೂ ಸರಿಯಾಗಿ ಬಳಸಿಕೊಳ್ಳಬೇಕು. ಮಹಿಳೆಯರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಬಣ್ಣಗಳು ಪಿಂಕ್: ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6, ದೇಣಿಗೆ: ಭಿಕ್ಷುಕರಿಗೆ ಸಿಹಿತಿಂಡಿಗಳನ್ನು ದಾನ ಮಾಡಿ
ಸಂಖ್ಯೆ 7: ಕೆಲಸದ ಸ್ಥಳದ ಪೂರ್ವ ಅಥವಾ ಉತ್ತರ ಗೋಡೆಯಲ್ಲಿ ವಿಂಡ್ ಚೈಮ್ ಹಾಕಿಕೊಳ್ಳಿ. ಸಂಶೋಧನೆ, ವಿಶ್ಲೇಷಣೆ, ವಿಜ್ಞಾನ, ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರದ ಜನರಿಗೆ ಅದೃಷ್ಟ ಕೈ ಹಿಡಿಯಲಿದೆ. ಮದುವೆಗೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಉತ್ತಮ ವಾರ ಇದು. ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ. ಬಣ್ಣಗಳು: ಬೀಜ್, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 7 ಮತ್ತು 6, ದೇಣಿಗೆ: ಜಾನುವಾರುಗಳಿಗೆ ಅಥವಾ ಬಡವರಿಗೆ ಬಾಳೆಹಣ್ಣುಗಳನ್ನು ದಾನ ಮಾಡಿ
ಸಂಖ್ಯೆ 8: ಸಂಗಾತಿ ಜೊತೆ ಅಥವಾ ಆಫೀಸ್ ನಲ್ಲಿ ಸ್ವಲ್ಪ ಜಗಳ ಆಗಬಹುದು. ನೀವು ವಾದಗಳನ್ನು ಮಾಡುವುದು ಸಮಸ್ಯೆಗೆ ಕಾರಣವಾಗುತ್ತದೆ. ಶನಿ ಮಂತ್ರವನ್ನು ಪಠಿಸಿದರೆ ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಈ ವಾರ ದೈಹಿಕ ಕೆಲಸಗಳು ಜಾಸ್ತಿ ಆಗಬಹುದು. ಕೆಲ ನಿರ್ಧಾರಗಳು ನಿಮ್ಮ ಪರವಾಗಿ ಲಾಭ ನೀಡುತ್ತದೆ. ಬಣ್ಣ: ನೇರಳೆ, ಅದೃಷ್ಟದ ದಿನ: ಶುಕ್ರವಾರ, ಅದೃಷ್ಟ ಸಂಖ್ಯೆ: 6, ದೇಣಿಗೆ: ಅಗತ್ಯವಿರುವವರಿಗೆ ಚಪ್ಪಲಿ ದಾನ ಮಾಡಿ
ಸಂಖ್ಯೆ 9: ಈ ಇಡೀ ವಾರ ನಿಮ್ಮ ಸಂಗಾತಿಗೆ ನೀವು ಅದೃಷ್ಟಶಾಲಿ ಎಂದು ಸಾಬೀತಾಗುತ್ತದೆ. ಹಾಗಾಗಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಟ್ಟಿಗೆ ಇರುವುದು ಉತ್ತಮ. ಆಫೀಸ್ ನಲ್ಲಿ ಮೆಚ್ಚುಗೆಯನ್ನು ಪಡೆಯುವ ಸಾಧ್ಯತೆಯಿರುವುದರಿಂದ ಸ್ವಲ್ಪ ಆರಾಮಾಗಿ ಕೆಲಸ ಮಾಡಿ. ಹೂಡಿಕೆ ಮಾಡುವಾಗ ಸ್ವಲ್ಪ ಎಚ್ಚರ. ಗ್ಲಾಮರ್ ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ಬಣ್ಣ: ಕಂದು ಮತ್ತು ಬೀಜ್, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9, ದೇಣಿಗೆ: ಆಶ್ರಮಕ್ಕೆ ಗೋಧಿಯನ್ನು ದಾನ ಮಾಡಿ