ಮಿಥುನ: ಇಂದು ಆಫರ್ಗಳ ಸುರಿಮಳೆ ಆಗಲಿದೆ. ಆಫೀಸ್ನಲ್ಲಿ ಗೌರವ ಹೆಚ್ಚಾಗಲಿದೆ. ಆದಾಯ ಹೆಚ್ಚುತ್ತದೆ ಆದರೆ ಅದಕ್ಕೆ ತಕ್ಕಂತೆ ವೆಚ್ಚವೂ ಹೆಚ್ಚುತ್ತದೆ. ಒಂದು ಸಣ್ಣ ಪ್ರವಾಸ ಮಾಡಿದರೆ ರಿಲ್ಯಾಕ್ಸ್ ಆಗುತ್ತದೆ. ವ್ಯವಹಾರಗಳಲ್ಲಿ ಆರ್ಥಿಕ ಒತ್ತಡ ಹೆಚ್ಚಾಗಬಹುದು. ಸಾಲದ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನ್ಯಾಯಾಲಯದ ಪ್ರಕರಣವು ನಿಮ್ಮ ಪರವಾಗಿ ಇತ್ಯರ್ಥವಾಗಲಿದೆ.
ಸಿಂಹ: ವೃತ್ತಿಪರರು, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಇದು ಉತ್ತಮವಾದ ವಾರವಾಗಿದೆ. . ಕೆಲವು ಸ್ನೇಹಿತರು ತಪ್ಪು ತಿಳುವಳಿಕೆಯಿಂದ ದೂರ ಸರಿಯುವ ಸಾಧ್ಯತೆ ಇದೆ. ಸ್ವಲ್ಪ ತಾಳ್ಮೆಯಿಂದ ಇದ್ದರೆ ನಿಮ್ಮ ಗುರಿಗಳು ನನಸಾಗುವ ಸೂಚನೆಗಳಿವೆ. ಮನೆ ಖರೀದಿ ಪ್ರಯತ್ನ ಆರಂಭವಾಗಲಿದೆ. ನಿರೀಕ್ಷೆಯಂತೆ ಆದಾಯ ಹೆಚ್ಚಾಗಲಿದೆ. ಸಾಲದ ಸಮಸ್ಯೆಗಳು ಬಹಳ ಕಡಿಮೆಯಾಗುತ್ತವೆ.