Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

Weekly Horoscope: ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ

First published:

  • 112

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಮೇಷ ರಾಶಿ: ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ನಿಮಗೆ ಅಧಿಕಾರ ಯೋಗ ಇದೆ. ಎಲ್ಲಾ ಕೆಲಸದಲ್ಲಿ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಬೆಂಬಲ ನೀಡುತ್ತಾರೆ. ಉತ್ತಮ ಕಂಪನಿಗಳಿಂದ ಆಫರ್‌ ಪಡೆಯುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಸಹ ಈ ವಾರ ಕೆಲಸ ಸಿಗಬಹುದು. ಆದಾಯ ಹೆಚ್ಚಾಗಲಿದೆ.

    MORE
    GALLERIES

  • 212

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ವೃಷಭ: ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿದೆ. ಈ ರಾಶಿಯವರಿಗೆ ಸಹ ಅಧಿಕಾರ ಯೋಗ ಇದೆ. ಅಧಿಕಾರಿಗಳು ನಿಮ್ಮ ಪ್ರತಿಭೆಯನ್ನು ಗುರುತಿಸುತ್ತಾರೆ. ಹಣಕಾಸಿನ ವ್ಯವಹಾರಗಳು ಲಾಭದಾಯಕವಾಗಿರಲಿದೆ. ಕುಟುಂದಲ್ಲಿ ಸಮಸ್ಯೆಗಳು ಬಂದಾಗ ಮಧ್ಯ ಪ್ರವೇಶಿಸುವುದು ಉತ್ತಮ. ಇತರರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ಆರೋಗ್ಯ ಸುಧಾರಿಸುತ್ತದೆ.

    MORE
    GALLERIES

  • 312

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಮಿಥುನ ರಾಶಿ: ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಆದರೆ ನಿಮಗೂ ವಿಶ್ರಾಂತಿ ಬೇಕು ಎಂಬುದು ನೆನಪಿರಲಿ. ಆರೋಗ್ಯದ ಚೆನ್ನಾಗಿರುತ್ತದೆ ಆದರೂ ಕಾಳಜಿ ಅಗತ್ಯ. ಆದಾಯ ನಿರೀಕ್ಷೆಯಂತೆ ಹೆಚ್ಚಾಗುತ್ತದೆ. ಕೆಲಸ ಬದಲಾಯಿಸಲು ಇದು ಸರಿಯಾದ ಸಮಯವಲ್ಲ. ನಿರುದ್ಯೋಗಿಗಳಿಗೆ ಸಣ್ಣ ಕೆಲಸ ಸಿಗುವ ಸಾಧ್ಯತೆ ಇದೆ.

    MORE
    GALLERIES

  • 412

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಕರ್ಕಾಟಕ ರಾಶಿ: ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಸ್ನೇಹಿತರ ಸಹಾಯದಿಂದ ಪರಿಹಾರ ಸಿಗುತ್ತದೆ. ಕೆಲಸದಲ್ಲಿ ಇದ್ದ ಸಮಸ್ಯೆಗಳು ಸಹ ಈಗ ಪರಿಹಾರವಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಈ ವಾರ ವೆಚ್ಚಗಳು ಸಹ ಕಡಿಮೆ ಆಗುತ್ತದೆ. ಆರೋಗ್ಯ ಸಹ ಚೆನ್ನಾಗಿರುತ್ತದೆ. ಹಣಕಾಸಿನ ವ್ಯವಹಾರದಿಂದ ದೂರವಿರುವುದು ಉತ್ತಮ.

    MORE
    GALLERIES

  • 512

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಸಿಂಹ: ಆದಾಯದ ಪರಿಸ್ಥಿತಿ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಹಣಕಾಸಿನ ವಹಿವಾಟು ಲಾಭ ನೀಡಲಿದೆ. ಅಧಿಕಾರ ಸಿಗುವ ಸಂಭವ ಇದೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಅಗತ್ಯ. ಸ್ವಂತ ಮನೆ ಕನಸು ನನಸಾಗುವ ಸಮಯ ಇದು. ಹಳೆಯ ಸ್ನೇಹಿತರ ಭೇಟಿ ನಿಮ್ಮ ಉತ್ಸಾಹ ಹೆಚ್ಚಿಸುತ್ತದೆ.

    MORE
    GALLERIES

  • 612

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಕನ್ಯಾ ರಾಶಿ: ಆದಾಯ ಸ್ಥಿರವಾಗಿರುತ್ತದೆ. ದುಂದುವೆಚ್ಚ ಕಡಿಮೆ ಮಾಡುವುದು ಬಹಳ ಉತ್ತಮ. ಅಧಿಕಾರಿಗಳ ಸಹಾಯದಿಂದ ಉನ್ನತ ಹುದ್ದೆಗೆ ಏರಬಹುದು. ಕುಟುಂದಲ್ಲಿ ಸಹ ನೆಮ್ಮದಿ ಇರುತ್ತದೆ. ಒಳ್ಳೆಯ ಕಂಪನಿಗಳಿಂದ ಆಫರ್‌ಗಳು ಬರುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಆದರೆ ಸ್ವಲ್ಪ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು.

    MORE
    GALLERIES

  • 712

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ತುಲಾ ರಾಶಿ: ವ್ಯವಹಾರದಲ್ಲಿ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಒಂದು ಸುಂದರ ಅವಕಾಶ ನಿಮಗೆ ಸಿಗಲಿದೆ. ಆರೋಗ್ಯದ ಬಗ್ಗೆ ಗಮನ ಕೊಡಿ. ಕೆಲವೊಂದು ಕೆಲಸಗಳನ್ನು ಮಾಡಲು ಬಹಳ ಕಷ್ಟಪಡಬೇಕಾಗುತ್ತದೆ. ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಿ. ಕುಟುಂಬದ ಹಿರಿಯರ ಸಲಹೆ ತೆಗೆದುಕೊಂಡರೆ ಬಹಳ ಉತ್ತಮ.

    MORE
    GALLERIES

  • 812

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ವೃಶ್ಚಿಕ ರಾಶಿ: ಹೆಚ್ಚುವರಿ ಆದಾಯಕ್ಕಾಗಿ ಮಾಡುವ ಪ್ರಯತ್ನಗಳು ಫಲ ನೀಡುತ್ತದೆ. ಉದ್ಯೋಗದ ವಿಷಯದಲ್ಲಿ ನಿಮಗೆ ಗುಡ್​ ನ್ಯೂಸ್​ ಸಿಗಲಿದೆ. ಅಧಿಕಾರಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಆರ್ಥಿಕ ಲಾಭ ಆಗುವ ಸಾಧ್ಯತೆ. ಬಾಕಿ ಇದ್ದ ಕೆಲಸಗಳು ಇಂದು ಪೂರ್ಣವಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಮಕ್ಕಳು ಯಶಸ್ಸನ್ನು ಸಾಧಿಸುತ್ತಾರೆ.

    MORE
    GALLERIES

  • 912

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಧನು ರಾಶಿ: ಶುಭ ಕಾರ್ಯವೊಂದು ಅನಿರೀಕ್ಷಿತವಾಗಿ ನೆರವೇರಲಿದೆ. ಒಳ್ಳೆಯ ಕಂಪನಿಯಿಂದ ಆಫರ್ ಬರಬಹುದು. ಹಣಕಾಸಿನ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದ ಲಾಭವಾಗಲಿದೆ. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ವಲ್ಪ ಎಚ್ಚರವಾಗಿರಿ. ಕೆಲವರಿಗೆ ಅನಾರೋಗ್ಯ ಕಾಡಬಹುದು. ಹಣದ ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ.

    MORE
    GALLERIES

  • 1012

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಮಕರ ರಾಶಿ: ಈ ವಾರ ಪೂರ್ತಿ ಮಿಶ್ರ ಫಲ ನಿಮಗೆ ಸಿಗಲಿದೆ.ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆದರೆ ವೈಯಕ್ತಿಕ ಜೀವನದಲ್ಲಿ ಕೆಲವು ಅನಿರೀಕ್ಷಿತ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ. ಪೋಷಕರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ನಿರುದ್ಯೋಗಿಗಳಿಗೆ ಸಣ್ಣ ಕೆಲಸ ಸಿಗುತ್ತದೆ.

    MORE
    GALLERIES

  • 1112

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಕುಂಭ ರಾಶಿ: ಈ ವಾರ ಪೂರ್ತಿ ಮನೆಯಲ್ಲಿ ಅತಿಥಿಗಳಿರುತ್ತಾರೆ. ಆದಾಯ ಹೆಚ್ಚಾಗುತ್ತದೆ ಜೊತೆಗೆ ವೆಚ್ಚವೂ ಸಹ. ಕೆಲವರ ನೆರವಿನಿಂದ ಪ್ರಮುಖ ಸಮಸ್ಯೆ ಬಗೆಹರಿಯುತ್ತದೆ. ಅನಗತ್ಯ ಸಂಪರ್ಕಗಳನ್ನು ತಪ್ಪಿಸುವುದು ಉತ್ತಮ. ಬಾಲ್ಯದ ಸ್ನೇಹಿತರು ಭೇಟಿಯಾಗುತ್ತಾರೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ.

    MORE
    GALLERIES

  • 1212

    Weekly Horoscope: ವಾರ ಪೂರ್ತಿ 3 ರಾಶಿಗಳಿಗೆ ಖುಷಿಯೋ ಖುಷಿ, ಕನಸು ನನಸಾಗೋದು ಗ್ಯಾರಂಟಿ

    ಮೀನ ರಾಶಿ: ಉತ್ತಮ ಬೆಳವಣಿಗೆಗಳು ನಿಮ್ಮ ಬದುಕನ್ನು ಬದಲಾಯಿಸಬಹುದು. ನಿರುದ್ಯೋಗಿಗಳು ಉತ್ತಮ ಉದ್ಯೋಗ ಪಡೆಯುವ ಸಾಧ್ಯತೆ ಇದೆ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಸರಿಯಾದ ಸಮಯ. ವೆಚ್ಚಗಳನ್ನು ಕಡಿಮೆ ಮಾಡಬೇಕು.

    MORE
    GALLERIES