Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

Valentine's Day: ವ್ಯಾಲೆಂಟೈನ್ಸ್ ಡೇ ಹತ್ತಿರ ಬಂದಿದೆ. ಈಗಾಗಲೇ ವಿಶೇಷ ದಿನಗಳ ಆಚರಣೆ ಆರಂಭವಾಗಿದೆ. ಇನ್ನು ಹಲವಾರು ಜನ ವ್ಯಾಲೆಂಟೈನ್ಸ್ ಡೇ ದಿನ ಪ್ರೀತಿಸುತ್ತಿರುವ ವ್ಯಕ್ತಿಗೆ ಪ್ರಪೋಸ್ ಮಾಡಲು ಸಿದ್ದರಿದ್ದಾರೆ. ಆದರೆ ಅವರು ನಿರಾಕರಿಸಿದರೇ ಎನ್ನುವ ಭಯ ಸಹ ಕಾಡುತ್ತಿದೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರ ಸಹಾಯ ಮಾಡುತ್ತದೆ. ಪ್ರಪೋಸ್ ಮಾಡಲು ಹೋಗುವ ರಾಶಿ ಪ್ರಕಾರ ಬಟ್ಟೆ ಧರಿಸಿದರೆ, ಒಳ್ಳೆಯದಂತೆ. ಹಾಗಾದ್ರೆ ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಧರಿಸಬೇಕು ಎಂಬುದು ಇಲ್ಲಿದೆ.

First published:

 • 113

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಮೇಷ ರಾಶಿ: ನಿಮ್ಮ ರಾಶಿಯ ಅಧಿಪತಿ ಮಂಗಳ ಆಗಿರುವುದರಿಂದ ನೀವು ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಯಶಸ್ಸು ಗ್ಯಾರಂಟಿ. ಅಲ್ಲದೇ, ಇದರಿಂದ ನಿಮ್ಮ ಸಂಬಂಧ ಸಹ ಗಟ್ಟಿಯಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.

  MORE
  GALLERIES

 • 213

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ವೃಷಭ ರಾಶಿ: ವೃಷಭ ರಾಶಿಯವರು ವ್ಯಾಲೆಂಟೈನ್ಸ್ ಡೇಯಂದು ಗುಲಾಬಿ ಬಣ್ಣ ಅಥವಾ ಬಿಳಿ ಬಣ್ಣದ ಬಟ್ಟೆಯನ್ನು ಹಾಕಿದರೆ ಉತ್ತಮ. ಇದು ಅವರ ಸಂಬಂಧದಲ್ಲಿ ಯಾವುದೇ ಸಮಸ್ಯೆ ಬರದಂತೆ ತಡೆಯುತ್ತದೆ. ಮದುವೆಯಾಗಿದ್ದರೆ, ಸಣ್ಣ-ಪುಟ್ಟ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

  MORE
  GALLERIES

 • 313

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಮಿಥುನ ರಾಶಿ: ಈ ವಿಶೇಷ ದಿನದಂದು ಮಿಥುನ ರಾಶಿಯವರು ಹಸಿರು ಮತ್ತು ಹಳದಿ ಬಣ್ಣದ ಬಟ್ಟೆ ಧರಿಸಿದರೆ, ಲವ್ ಸಕ್ಸಸ್ ಗ್ಯಾರಂಟಿ. ಅದರಲ್ಲೂ ಹಸಿರು ಬಣ್ಣ ಹೆಚ್ಚು ಲಕ್ಕಿ, ಏಕೆಂದರೆ ಈ ರಾಶಿಯ ಅಧಿಪತಿ ಬುಧ.

  MORE
  GALLERIES

 • 413

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಕಟಕ ರಾಶಿ: ಕಟಕ ರಾಶಿಯವರು ಸಿಲ್ವರ್, ಕೆಂಪು ಹಾಗೂ ಹಳದಿ ಬಣ್ಣದ ಬಟ್ಟೆ ಧರಿಸಬಹುದು. ಅಲ್ಲದೇ ಕ್ರೀಮ್ ಬಣ್ಣದ ಬಟ್ಟೆ ಸಹ ನಿಮಗೆ ಲಕ್ಕಿ ಎನ್ನಲಾಗುತ್ತದೆ. ಈ ರಾಶಿಯ ಅಧಿಪತಿ ಚಂದ್ರ ಹಾಗಾಗಿ ಈ ದಿನ ಹೆಚ್ಚು ಗಾಢವಾದ ಬಣ್ಣದ ಬಟ್ಟೆಯನ್ನು ಧರಿಸಬಾರದು.

  MORE
  GALLERIES

 • 513

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಸಿಂಹ ರಾಶಿ: ಸಿಂಹ ರಾಶಿಯವರು ವ್ಯಾಲೆಂಟೈನ್ ಡೇ ದಿನ ಗೋಲ್ಡನ್ ಬಣ್ಣದ ಬಟ್ಟೆ ಹಾಕಿದರೆ ಲವ್ ಸಕ್ಸಸ್ ಗ್ಯಾರಂಟಿಯಂತೆ. ಗೋಲ್ಡನ್ ಆಗದಿದ್ದರೆ ನೀವು ಕಿತ್ತಳೆ ಬಣ್ಣದ ಬಟ್ಟೆಯನ್ನು ಸಹ ಹಾಕಿ ನಿಮ್ಮ ಲಕ್ ಪರೀಕ್ಷೆ ಮಾಡಬಹುದು.

  MORE
  GALLERIES

 • 613

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಕನ್ಯಾ ರಾಶಿ: ಕನ್ಯಾ ರಾಶಿಯವರು ಪ್ರಪೋಸ್ ಮಾಡಲು ಹೋಗುವಾಗ ಹಸಿರು, ನೀಲಿ ಬಣ್ಣದ ಬಟ್ಟೆ ಹಾಕಿದರೆ ಒಳ್ಳೆಯದಂತೆ. ಇದರಿಂದ ಸಂಬಂಧ ಗಟ್ಟಿಯಾಗುತ್ತದೆ ಮಾತ್ರವಲ್ಲದೇ, ನಿಮ್ಮ ಪ್ರೇಮಿಯ ಜೊತೆ ಮದುವೆ ಗ್ಯಾರಂಟಿ.

  MORE
  GALLERIES

 • 713

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ತುಲಾ ರಾಶಿ: ತುಲಾ ರಾಶಿಯವರು ಈ ದಿನ ಬಿಳಿ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ. ಅಲ್ಲದೇ, ಇವರಿಗೆ ಆರೆಂಜ್ ಬಣ್ಣದ ಬಟ್ಟೆ ಸಹ ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಉತ್ತಮ ಸಂಬಂಧ ಇರುತ್ತದೆ.

  MORE
  GALLERIES

 • 813

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ವೃಶ್ಚಿಕ ರಾಶಿ: ಈ ವೃಶ್ಚಿಕ ರಾಶಿಯವರು ಈ ವಿಶೇಷ ದಿನದಂದು ಕೆಂಪು, ಕಂದು, ಆರೆಂಜ್ ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿದರೆ ಸಕ್ಸಸ್ ಗ್ಯಾರಂಟಿಯಂತೆ. ಈ ರಾಶಿಯ ಅಧಿಪತಿ ಸಹ ಮಂಗಳ ಆಗಿರುವುದರಿಂದ ಕಪ್ಪಿ ಹಾಗೂ ಕಪ್ಪು ಹಾಗೂ ನೀಲಿ ಬಣ್ಣವನ್ನು ಧರಿಸಬಾರದು.

  MORE
  GALLERIES

 • 913

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಧನು ರಾಶಿ: ಧನಸ್ಸು ರಾಶಿಯವರಿಗೆ ಆರೆಂಜ್ ಬಣ್ಣದ ಬಟ್ಟೆಯನ್ನು ಧರಿಸಿದರೆ ಸೂಕ್ತ. ಇದರ ಜೊತೆಗೆ ನೀವು ಹಳದಿ ಬಣ್ಣದ ಬಟ್ಟೆ ಸಹ ಟ್ರೈ ಮಾಡಬಹುದು. ಇದರಿಂದ ನಿಮ್ಮ ಪ್ರೀತಿಗೆ ಒಪ್ಪಿಗೆ ಸಿಗುತ್ತದೆ ಮಾತ್ರವಲ್ಲದೇ, ಸಂಬಂಧ ಸಹ ಗಟ್ಟಿಯಾಗುತ್ತದೆ. ಆದರೆ ನೀಲಿ ಬಣ್ಣದ ಬಟ್ಟೆ ಧರಿಸಬೇಡಿ.

  MORE
  GALLERIES

 • 1013

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಮಕರ ರಾಶಿ: ಈ ರಾಶಿಯ ಅಧಿಪತಿ ಶನಿ, ಹಾಗಾಗಿ ಈ ರಾಶಿಯವರು ಯಾವುದೇ ಶುಭಕಾರ್ಯ ಆರಂಭ ಮಾಡುವಾಗ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಇದರಿಂದ ಅಂದುಕೊಂಡ ಕೆಲಸ ಆಗುತ್ತದೆ. ಅದರಲ್ಲೂ ವ್ಯಾಲೆಂಟೈನ್ಸ್ ಡೇ ದಿನ ಈ ಬಣ್ಣದ ಬಟ್ಟೆ ಹಾಕಿದರೆ ಉತ್ತಮ.

  MORE
  GALLERIES

 • 1113

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಕುಂಭ ರಾಶಿ: ಕುಂಭ ರಾಶಿಯವರು ನೀಲಿ ಬಣ್ಣದ ಬಟ್ಟೆ ಹಾಕಿದರೆ, ನಿಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಇದರಿಂದ ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಹಾಗೆಯೇ ಈ ದಿನ ಬಿಳಿ ಬಣ್ಣವನ್ನು ಸಹ ಆಯ್ಕೆ ಮಾಡಬಹುದು.

  MORE
  GALLERIES

 • 1213

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  ಮೀನ ರಾಶಿ: ಮೀನ ರಾಶಿಯವರು ಹಳದಿ ಮತ್ತು ಆರೆಂಜ್ ಬಣ್ಣದ ಬಟ್ಟೆಯನ್ನು ಹಾಕಬೇಕಂತೆ. ಇದರಿಂದ ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಗುತ್ತದೆ. ಇದು ನಿಮ್ಮ ಜೀವನದಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

  MORE
  GALLERIES

 • 1313

  Valentine's Day: ರಾಶಿ ಪ್ರಕಾರ ಈ ಬಣ್ಣದ ಬಟ್ಟೆ ಧರಿಸಿ ಪ್ರಪೋಸ್ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES