Vastu Tips: ಅಡುಗೆ ಮನೆಯಲ್ಲಿರುವ ಮಸಾಲೆಯಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ, ಹೀಗೆ ಯೂಸ್ ಮಾಡಿ ಸಾಕು
Attain Wealth Through Spices: ನಾವು ಅಡುಗೆ ಮನೆಯಲ್ಲಿ ಬಳಸುವ ಮಸಾಲೆಗಳಿಗೂ ಜ್ಯೋತಿಷ್ಯಕ್ಕೂ ಸಂಬಂಧವಿದೆ ಎಂದರೆ ತಪ್ಪಲ್ಲ. ಅವುಗಳನ್ನು ಬಳಸಿಕೊಂಡು ನಾವು ನಮ್ಮ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಹಾಗಾದ್ರೆ ಮಸಾಲೆ ಪದಾರ್ಥಗಳನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ.
ಜೀವನದಲ್ಲಿ ಯಶಸ್ಸು ಪಡೆಯಲು ನಾವು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಎಲ್ಲರಿಗೂ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ಅಡೆ-ತಡೆಗಳು ಸಾವಿರಾರು. ಇದಕ್ಕೆ ಮನೆಯಲ್ಲಿರುವ ಕೆಲವು ಮಸಾಲೆಗಳು ಸಹಾಯ ಮಾಡುತ್ತವೆ.
2/ 7
ಅರಿಶಿನ: ಅರಿಶಿನವನ್ನು ಅನೇಕ ಪೂಜೆಗಳಲ್ಲಿ ಆಚರಣೆಗಳಲ್ಲಿ ಬಳಸಲಾಗುತ್ತದೆ. ನಂಬಿಕೆಗಳ ಪ್ರಕಾರ ಇದು ನಮ್ಮ ಜೀವನದ ಸಮಸ್ಯೆಗಳನ್ನು ನಿವಾರಿಸುತ್ತದೆ. ಅರಿಶಿನವು ಗುರುಗ್ರಹದ ನೆಚ್ಚಿನ ವಸ್ತುವಾಗಿದ್ದು, ಜೊತೆಗೆ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಸಹ ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಇದನ್ನು ಬಳಸುವುದರಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.
3/ 7
ಏಲಕ್ಕಿ: ಉದ್ಯೋಗ ಬದಲಾವಣೆಗೆ ಈ ಏಲಕ್ಕಿ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ನೀವು ಕೆಲಸ ಬದಲಾಯಿಸಲು ಪ್ರಯತ್ನಿಸಿ ಸೋತಿದ್ದರೆ ಇದನ್ನು ಬಳಕೆ ಮಾಡಬೇಕು, ರಾತ್ರಿ ಮಲಗುವ ಮೊದಲು, ನಿಮ್ಮ ದಿಂಬಿನ ಕೆಳಗೆ ಸ್ವಲ್ಪ ಏಲಕ್ಕಿಯನ್ನು ಇಟ್ಟುಕೊಂಡು ಮಲಗುವ ಅಭ್ಯಾಸ ಮಾಡಿಕೊಳ್ಳಿ.
4/ 7
ಲವಂಗ: ಕೆಲವೊಮ್ಮೆ ನಾವು ಅದೆಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಸಹ ಯಶಸ್ಸು ಸಿಗುವುದಿಲ್ಲ. ದುಡಿದ ಹಣ ಕೈನಲ್ಲಿ ಉಳಿಯುವುದಿಲ್ಲ. ಅದಕ್ಕೆ ಕಾರಣ ಕೆಲವರ ದೃಷ್ಟಿ ಬಿದ್ದಿರಬಹುದು ಎನ್ನಲಾಗುತ್ತದೆ. ಅದಕ್ಕೆ ನಿಮಗೆ ಲವಂಗ ಸಹಾಯ ಮಾಡುತ್ತದೆ. ನೀವು ಸ್ವಲ್ಪ ಲವಂಗವನ್ನು ಹಣ ಇಡುವ ಜಾಗದಲ್ಲಿ ಇಟ್ಟರೆ ಆರ್ಥಿಕವಾಗಿ ಲಾಭ ಹೆಚ್ಚಾಗುತ್ತದೆ.
5/ 7
ದಾಲ್ಚಿನ್ನಿ; ನೀವು ನಿಮ್ಮ ಬ್ಯಾಗ್ನಲ್ಲಿ ದಾಲ್ಚಿನ್ನಿ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲದೇ ನೀವು ಒಳ್ಳೆಯ ಕೆಲಸಗಳಿಗೆ ಹೋಗುವಾಗ ಸಹ ನಿಮ್ಮ ಜೊತೆ ದಾಲ್ಚಿನ್ನಿ ಇಟ್ಟುಕೊಂಡು ಹೋದರೆ, ಲಾಭ ಸಿಗುತ್ತದೆ,
6/ 7
ಬಿರಿಯಾನಿ ಎಲೆ: ಬಿರಿಯಾನಿ ಎಲೆಯ ಮೇಲೆ ನಮಗೆ ಅನಿಸಿದ್ದನ್ನು ಅಥವಾ ನಿಮ್ಮ ಕನಸನ್ನು ಬರೆಯುವುದರಿಂದ ನೀವು ಅಂದುಕೊಂಡಿದ್ದೇ ಆಗುತ್ತದೆ. ಈ ಎಲೆಯ ಮೇಲೆ ನಿಮಗೆ ಬೇಕಾದುದನ್ನು ಬರೆದು ಅದನ್ನು ಸುಟ್ಟರೆ ನಿಮ್ಮ ಕನಸು ನನಸಾಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)