Virgo 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಕನ್ಯಾ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ಕನ್ಯಾ ರಾಶಿಯವರಿಗೆ ಸಹ ಹೊಸವರ್ಷ ಎಂಬುದು ಸಮಸ್ಯೆಗಳ ಸಾಗರವಾಗಲಿದ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಈ ಸಮಯದಲ್ಲಿ ತಾಳ್ಮೆ ಬಹಳ ಅಗತ್ಯವಾಗಿದ್ದು, ಜೊತೆಗೆ ಎಚ್ಚರಿಕೆ ಕೂಡ.
2/ 7
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಕನ್ಯಾ ರಾಶಿಯವರಿಗೆ ಅಶುಭ ಫಲ ಅನುಭವಕ್ಕೆ ಬರಲಿದೆ. ಅಷ್ಟಮ ಮನೆಯಲ್ಲಿ ಸೇರಿಕೊಂಡ ಗುರು ಮತ್ತು ರಾಹು ಗ್ರಹವು ಜೀವನವನ್ನು ಜಂಜಾಟದ ಗೂಡು ಮಾಡಲಿದ್ದಾರೆ.
3/ 7
ಇನ್ನು ವರ್ಷ ಆರಂಭದಲ್ಲೇ ಹಿರಿಯರ ಕಾರಣದಿಂದ ಸಮಸ್ಯೆಗಳು ಉಂಟಾಗಬಹುದು. ಹಾಗೆ ದುಃಖ ಸಹ ನಿಮಗಾಗಿ ಕಾದಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕೋರ್ಟು ಕಚೇರಿ ಅಲೆದಾಟ ಮಾಡಬೇಕಾಗಿ ಬರಬಹುದು.
4/ 7
ಈ ವರ್ಷದಲ್ಲಿ ನೀವು ದಾನ ಮಾಡುವ ಸಾಧ್ಯತೆ ಹೆಚ್ಚಿದೆ. ನಿರಂತರವಾದ ಶತ್ರುಪೀಡೆ ಇದ್ದರೂ ಕೂಡ ಶತ್ರುಗಳ ಸಂಹಾರವಾಗಲಿದೆ. ರಾಜಕಾರಣಿಗಳು ಅಧಿಕಾರಿಗಳು ನಿಮ್ಮ ಪರವಾಗಿದ್ದಾರೆ.
5/ 7
ಹಾಗೆಯೇ ನಿಮಗೂ ಸಹ ದೈಹಿಕವಾಗಿ ಕೆಲವೊಂದು ರೋಗಗಳು ಕಾಡಬಹುದು. ಜೊತೆಗೆ ಬಿಟ್ಟು ಬಿಟ್ಟು ಬರುವ ಕಾಯಿಲೆಗಳು ನಿರಂತರವಾಗಿ ಬಾಧಿಸುತ್ತದೆ. ಮರಣದ ಅಂಚಿನಲ್ಲಿರುವವರಿಗೆ ಸದ್ಗತಿ ಸಿಗುವ ಸಮಯ ಇದು.
6/ 7
ಹೈನುಗಾರರಿಗೆ, ಪಶುಸಂಗೋಪನೆಗೆ ಸಂಬಂಧಪಟ್ಟಂತೆ ವೃತ್ತಿ ಮಾಡುತ್ತಿರುವವರಿಗೆ ಈ ವರ್ಷ ಅನುಕೂಲಗಳಿವೆ. ಕೆಲವೊಮ್ಮೆ ಕಷ್ಟದ ಕಾರ್ಯಗಳು ಸುಲಭವಾಗಿ, ಸುಲಭದ ಕಾರ್ಯಗಳು ಕಷ್ಟಕರವಾಗಿ ಪರಿಣಮಿಸಬಹುದು.
7/ 7
ಬಂಧುಬಾಂಧವರು ನಿಮಗೆ ನಿರಂತರವಾಗಿ ಕಾಟ ಕೊಡುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯೂ ಕೂಡ ಸಮಾಧಾನಕರವಾಗಿರುವುದಿಲ್ಲ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಮಹಾಗಣಪತಿಯನ್ನು ಆರಾಧಿಸಿ, ಒಳ್ಳೆಯದಾಗುತ್ತದೆ.