Shukra Gochara: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ ತಿಂಗಳ ಮೊದಲ ವಾರದಲ್ಲಿ ಶುಕ್ರನು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ಇದು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮುಖ್ಯವಾಗಿ ಕೆಲ ರಾಶಿಯವರ ಅದೃಷ್ಟ ಇದರಿಂದ ಬದಲಾಗಲಿದೆ, ಆ ಲಕ್ಕಿ ರಾಶಿಯವರು ಯಾರು ಎಂಬುದು ಇಲ್ಲಿದೆ.
ನವಗ್ರಹಗಳಲ್ಲಿ ಶುಕ್ರನನ್ನು ಸಂಪತ್ತು ನೀಡುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಇನ್ನು ಈ ಶುಕ್ರ ವೃಷಭ ಮತ್ತು ತುಲಾ ರಾಶಿಯ ಅಧಿಪತಿ. ಹಾಗೆಯೇ ಯಾರ ಜಾತಕದಲ್ಲಿ ಶುಕ್ರನ ಸ್ಥಾನವು ಬಲವಾಗಿದ್ದರೆ ಅವರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
2/ 8
ಇನ್ನು ಮಂಗಳವಾರ, ಮೇ 2 ರಂದು ಮಧ್ಯಾಹ್ನ 1:46 ಕ್ಕೆ ಶುಕ್ರ ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಮೇ 30 ರಂದು ಸಂಜೆ 7.30 ರ ತನಕ ಈ ರಾಶಿಯಲ್ಲಿ ಇರಲಿದ್ದು, ನಂತರ ಕರ್ಕಾಟಕ ರಾಶಿಗೆ ಹೋಗುತ್ತದೆ. ಈ ಸಂಚಾರ ಯಾವೆಲ್ಲಾ ರಾಶಿಗೆ ಲಾಭದಾಯಕವಾಗಿರಲಿದೆ ಎಂಬುದು ಇಲ್ಲಿದೆ.
3/ 8
ಮೇಷ: ಶುಕ್ರನ ಈ ಸಂಚಾರದಿಂದ ಮೇಷ ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ. ಇದರಿಂದ ಈ ರಾಶಿಯವರ ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿದ್ದು, ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ ಇದೆ. ಹಾಗೆಯೇ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
4/ 8
ಮಿಥುನ: ಶುಕ್ರನ ಕಾರಣದಿಂದ ಮಿಥುನ ರಾಶಿಯವರ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಅವರ ವೈವಾಹಿಕ ಬದುಕಿನಲ್ಲಿ ಖುಷಿ ಹೆಚ್ಚಾಗಲಿದೆ. ಅಲ್ಲದೇ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದ್ದು, ಆರ್ಥಿಕವಾಗಿ ಸಹ ಲಾಭವಾಗಲಿದೆ.
5/ 8
ಸಿಂಹ: ಬಹಳ ಅದೃಷ್ಟವಂತ ರಾಶಿ ಎಂದರೆ ಅದು ಸಿಂಹ. ಇವರಿಗೆ ಶುಕ್ರನ ಕಾರಣದಿಂದ ಅಪಾರವಾದ ಸಂಪತ್ತು ಸಿಗುವುದರ ಜೊತೆಗೆ ಅಂದುಕೊಂಡ ಕೆಲಸಗಳು ಲಾಭ ನೀಡುತ್ತದೆ. ಇದರ ಜೊತೆಗೆ ಹೊಸ ಹೊಸ ಅವಕಾಶಗಳು ಹುಡುಕಿ ಬರುತ್ತದೆ.
6/ 8
ತುಲಾ: ತುಲಾ ರಾಶಿಯ ಅಧಿಪತಿ ಶುಕ್ರ ಆಗಿರುವುದರಿಂದ ಈ ಸಂಚಾರ ಬಹಳ ಲಾಭದಾಯಕವಾಗಿರಲಿದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಅಲ್ಲದೇ, ಇಷ್ಟು ದಿನ ಕಾಡಿದ್ದ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
7/ 8
ಮೀನ: ಶುಕ್ರ ಸಂಚಾರದಿಂದ ಮೀನ ರಾಶಿಯವರಿಗೆ ಸಹ ಉತ್ತಮ ಫಲಿತಾಂಶ ಸಿಗಲಿದೆ. ಹಳೆಯ ಹೂಡಿಕೆಯಿಂದ ಲಾಭ ಈಗ ಬರಲಿದೆ. ಅಲ್ಲದೇ, ನಿಮ್ಮ ಕುಟುಂಬದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗಲಿದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)