ಕರ್ಕಾಟಕ: ಶುಕ್ರನು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಸಾಗುತ್ತಾನೆ. ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಪ್ರಯಾಣ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಅಲ್ಲದೇ, ನೀವು ಪ್ರಯಾಣಿಸುವಾಗ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಅವುಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸರ್ಕಾರಿ ಕೆಲಸದಲ್ಲಿರುವವರು ಯಾವುದೇ ಕಾನೂನು ಬಾಹಿರ ಕೆಲಸ ಮಾಡಬಾರದು, ಲಂಚ ಪಡೆಯಬಾರದು, ಇಲ್ಲದಿದ್ದರೆ ತೊಂದರೆಗೆ ಸಿಲುಕುವuದು ಗ್ಯಾರಂಟಿ. ನೀವು ಸಾಲವನ್ನು ತೆಗೆದುಕೊಂಡಿದ್ದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಅವರು ಮರಳಿ ಹಣ ಕೊಡಲು ಒತ್ತಾಯಿಸಬಹುದು. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಅಲುಗಾಡುತ್ತದೆ.
ತುಲಾ ರಾಶಿ: ಶುಕ್ರ ನಿಮ್ಮ ರಾಶಿಯ ಅಧಿಪತಿಯಾಗಿದ್ದು, ನಿಮ್ಮ ಐದನೇ ಮನೆಯಲ್ಲಿ ಈ ಸಂಯೋಗವಾಗಲಿದೆ. ಈ ಶುಕ್ರ ಸಂಚಾರ ನಿಮಗೆ ಮಿಶ್ರ ಫಲಗಳನ್ನು ನೀಡಲಿದೆ. ನಿಮ್ಮ ಕೆಲಸದಲ್ಲಿ ನೀವು ಅಸಡ್ಡೆ ತೋರಿಸಬಹುದು. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳೂ ಏಕಾಗ್ರತೆಯ ಕೊರತೆಯಿಂದ ಬಳಲಬೇಕಾಗುತ್ತದೆ. ಈ ರಾಶಿಯ ಜನರು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಸಹ ಹೊಂದಿರಬಹುದು.