ವಾಸ್ತವವಾಗಿ, ಮನೆಯ ಮುಖ್ಯ ಬಾಗಿಲು ಸೇರಿದಂತೆ ಮನೆಯ ವಾಸ್ತು ದೋಷಗಳನ್ನು ತೆಗೆದುಹಾಕಲು ಅರಿಶಿನ ನೀರಿನ ಪರಿಹಾರವನ್ನು ತೆಗೆದುಕೊಳ್ಳುವುದು ತುಂಬಾ ಪ್ರಯೋಜನಕಾರಿಯಾಗಿದೆ. ಅರಿಶಿನದ ನೀರನ್ನು ಬಳಸೋದ್ರಿಂದ ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಹೌದು, ವಾಸ್ತವವಾಗಿ ಅರಿಶಿನವು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅದೇ ರೀತಿ ಜ್ಯೋತಿಷ್ಯದಲ್ಲೂ ಇದರ ಗುಣಲಕ್ಷಣಗಳನ್ನು ಸಹ ಚರ್ಚಿಸಲಾಗಿದೆ.