ನೆಲ ಸ್ವಚ್ಛ ಮಾಡುವಾಗ ಉಪ್ಪನ್ನು ಬಳಸಿ: ವಾಸ್ತು ಶಾಸ್ತ್ರದ ಪ್ರಕಾರ, ಕಲ್ಲು ಉಪ್ಪನ್ನು ನೀರಿನಲ್ಲಿ ಬೆರೆಸಿ ಮನೆಯನ್ನು ಪ್ರತಿದಿನ ಸ್ವಚ್ಛ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಓಡಿಹೋಗುತ್ತದೆ ಮತ್ತು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೇ ಇದರಿಂದ ನಿಮ್ಮನ್ನು ನಿರಂತರವಾಗಿ ಕಾಡುವ ಅನಗತ್ಯ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು 2023 ರಲ್ಲಿ ಹಣ ಉಳಿಸಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಭಾನುವಾರ, ಮಂಗಳವಾರ ಮತ್ತು ಗುರುವಾರ ಮನೆ ಸ್ವಚ್ಛಗೊಳಿಸುವಾಗ ಉಪ್ಪು ನೀರು ಬಳಸಬೇಡಿ.