Vastu Tips: ಮದುವೆ ಆಗ್ತಿಲ್ವಾ, ಅಡೆತಡೆ ಉಂಟಾಗಿದೆಯಾ? ಮನೆಯಲ್ಲಿ ಈ ಹೂವು ಇರಿಸಿದ್ರೆ ಸಮಸ್ಯೆ ಮಾಯ
Marriage Delay: ಎರಡ್ಮೂರು ದಶಕಗಳ ಹಿಂದೆ 20 ರಿಂದ 22ನೇ ವಯಸ್ಸಿಗೆ ಬಹುತೇಕರು ಸಾಂಸರಿಕ ಜೀವನಕ್ಕೆ ಕಾಲಿಡುತ್ತಿದ್ದರು. ಇನ್ನೂ ಕೆಲವು ಕಡೆ ಇದಕ್ಕಿಂತಲೂ ಬೇಗ ಮದುವೆ ಆಗುತ್ತಿದ್ದರು. ಆದ್ರೆ ಇಂದು ಕಾಲ ಬದಲಾಗಿದೆ. ಈಗ ಮದುವೆ ವಯಸ್ಸು ಸಹ ಬದಲಾಗಿದೆ.
ಇಂದಿನ ಯುವ ಜನತೆ ವೃತ್ತಿ ಜೀವನದಲ್ಲಿ ಭದ್ರವಾಗಿ ನೆಲೆಯೂರಿದ ಬಳಿಕವೇ ಮದುವೆ ಬಗ್ಗೆ ನಿರ್ಧರಿಸುತ್ತಾರೆ. ಈ ಕಾರಣದಿಂದ ಮದುವೆಯನ್ನು ಮುಂದೂಡುತ್ತಾ ಹೋಗುತ್ತಾರೆ. (ಸಾಂದರ್ಭಿಕ ಚಿತ್ರ)
2/ 9
ಕೆಲವೊಮ್ಮೆ ಮದುವೆ ಸಿದ್ಧವಾದ್ರೂ ಹಲವು ಕಾರಣಗಳಿಂದ ಮುಂದೂಡಿಕೆಯಾಗುತ್ತಿರುತ್ತದೆ. ಎಲ್ಲವೂ ಸರಿಯಾಗಿದ್ರೂ ಸಂಗಾತಿ ಆಯ್ಕೆ ವಿಳಂಬವಾಗಿರುತ್ತದೆ. ಕೆಲವೊಮ್ಮೆ ಮದುವೆ ನಿಶ್ಚಯವಾಗಿದ್ರೂ ಅನೇಕ ಅಡೆತಡೆಗಳು ಉಂಟಾಗುತ್ತಿರುತ್ತವೆ. (ಸಾಂದರ್ಭಿಕ ಚಿತ್ರ)
3/ 9
ಈ ಎಲ್ಲಾ ಸಮಸ್ಯೆಗಳಿಗೆ ನಾವು ವಾಸವಾಗಿರುವ ಮನೆಯ ವಾಸ್ತು ದೋಷವೂ ಕಾರಣ ಆಗಿರಬಹುದು ಎಂದು ಹೇಳಲಾಗುತ್ತದೆ. ಈ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವೂ ಸಹ ಇದೆಯಂತೆ. ವಾಸ್ತು ಶಾಸ್ತ್ರದಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಹೂವಿನ ಗಿಡವೊಂದು ಮದ್ದು ಎಂದು ಪರಿಗಣಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 9
ಪಿಯೋನಿ ಹೂವುಗಳು
ವಾಸ್ತು ಶಾಸ್ತ್ರದಲ್ಲಿ ಪಿಯೋನಿ ಹೂವುಗಳನ್ನು ಸೌಂದರ್ಯ ಮತ್ತು ಪ್ರಣಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ಇದನ್ನ ಹೂವುಗಳ ರಾಣಿ ಎಂದು ಸಹ ಕರೆಯಲಾಗುತ್ತದೆ. (ಸಾಂದರ್ಭಿಕ ಚಿತ್ರ)
5/ 9
ಪಿಯೋನಿ ಹೂವಿನ ಗಿಡಗಳನ್ನು ನೆಡುವದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ. ಇದರಿಂದ ಮದುವೆಯಲ್ಲಿನ ಅಡೆತಡೆಗಳು ನಿವಾರಣೆ ಆಗುತ್ತೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. (ಸಾಂದರ್ಭಿಕ ಚಿತ್ರ)
6/ 9
ಮದುವೆ ಅಥವಾ ಸಾಂಸರಿಕ ಜೀವನದಲ್ಲಿ ಸಮಸ್ಯೆಗಳಿದ್ರೂ ಮನೆಯಲ್ಲಿ ಪಿಯೋನಿ ಹೂ ಇರಿಸೋದರಿಂದ ಮಂಗಳಕರವಾಗುತ್ತೆ ಎಂದು ನಂಬಲಾಗುತ್ತದೆ. (ಸಾಂದರ್ಭಿಕ ಚಿತ್ರ)
7/ 9
ಯಾವ ದಿಕ್ಕಿನಲ್ಲಿ ಇರಿಸಬೇಕು?
ಆದ್ರೆ ಪಿಯೋನಿ ಹೂವುಗಳು ಎಲ್ಲಾ ಕಡೆಯೂ ಸಿಗಲ್ಲ. ಆದ್ದರಿಂದ ಪಿಯೋನಿ ಹೂವಿನ ಪೇಟಿಂಗ್ ಆಥವಾ ಫೋಟೋವನ್ನು ಮನೆಯ ನೈಋತ್ಯ ಭಾಗದಲ್ಲಿ ಇರಿಸಬೇಕು. ಹೂವಿನ ಗಿಡ ಸಹ ನೈಋತ್ಯ ಭಾಗದಲ್ಲಿರುವಂತೆ ನೋಡಿಕೊಳ್ಳಬೇಕು. (ಸಾಂದರ್ಭಿಕ ಚಿತ್ರ)
8/ 9
ನೀವು ಪಿಯೋನಿ ಹೂವನ್ನು ಮನೆ ಅಂಗಳದಲ್ಲಿ ನಡೆಲು ಪ್ಲಾನ್ ಮಾಡಿದ್ರೆ, ಅದು ಪ್ರವೇಶ ದ್ವಾರದ ಬಲ ಭಾಗಕ್ಕೆ ಇರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. (ಸಾಂದರ್ಭಿಕ ಚಿತ್ರ)
9/ 9
(Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ) (ಸಾಂದರ್ಭಿಕ ಚಿತ್ರ)