Vastu Tips: ಬೆಳಗ್ಗೆ ಎದ್ದಾಕ್ಷಣ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ನೋಡಬೇಡಿ
Vastu Tips: ಬೆಳಗ್ಗೆ (Morning) ಎದ್ದ ತಕ್ಷಣ ದೇವರ ಮತ್ತು ಮಕ್ಕಳ ಮುಖ ನೋಡಿದರೆ ಆ ದಿನ ಶುಭ ವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಕೆಲವರು ಇವುಗಳನ್ನು ನಂಬುವುದಿಲ್ಲ. ಆದರೆ, ಆ ದಿನ ಕೆಟ್ಟಾದಾದರೆ ಮನಸು ಇರಿಸು ಮುರಿಸಾಗಿ ಎದ್ದೊಡನೆ ಯಾರ ಮುಖ ನೋಡಿದೇನು ಎಂದು ಶಪಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ವಾಸ್ತುಶಾಸ್ತ್ರದಲ್ಲಿ (Vastu Shastra) ದಿನ ಉತ್ತಮವಾಗಿ ಕಳೆಯಬೇಕು ಎಂದರೆ ಬೆಳಗ್ಗೆ ಎದ್ದಾಕ್ಷಣ ಈ ವಸ್ತುಗಳನ್ನು ನೋಡಬೇಡಿ ಎನ್ನಲಾಗಿದೆ.
ನಮ್ಮ ಇಡೀ ದಿನ ಚೆನ್ನಾಗಿ ಇರಬೇಕು ಎಂದರೆ ನಾವು ಎದ್ದಾಕ್ಷಣ ಮನಸಿಗೆ ಹಿತ ಎನ್ನಿಸುವಂತೆ ಇರಬೇಕು. ಇದೇ ಕಾರಣಕ್ಕೆ ಬೆಳಗ್ಗೆ ಕಣ್ಣು ಬಿಟ್ಟಾಕ್ಷಣ ಈ ವಸ್ತುಗಳನ್ನು ನೋಡದೇ ಒಳ್ಳೆಯ ವಸ್ತುಗಳನ್ನು ನೋಡಬೇಕು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ
2/ 6
ಬೆಳಗ್ಗೆ ಎದ್ದಾಕ್ಷಣ ಹಾಳಾದ ಅಥವಾ ನಿಂತು ಹೋದ ಗಡಿಯಾರವನ್ನು ನೋಡಬಾರದು. ಇದರಿಂದ ದಿನ ಕಷ್ಟಕರವಾಗಲಿದೆ ಎಂಬ ನಂಬಿಕೆ ಇದೆ, ವಾಸ್ತುಶಾಸ್ತ್ರದ ಪ್ರಕಾರ, ಗಡಿಯಾರ ಚಲನಶೀಲತೆ ಪ್ರತೀಕ ಇದು ನಿಂತರೆ ಅಶುಭ ಎನ್ನಲಾಗಿದೆ.
3/ 6
ಬೆಳಗ್ಗೆ ಎದ್ದಾಕ್ಷಣ ಒಡೆದ ಕನ್ನಡಿಯಲ್ಲಿ ಮುಖ ನೋಡಬಾರದು. ಇದರಿಂದ ಇಡೀ ದಿನ ಹಾಳಾಗುತ್ತದೆ ಎನನಲಾಗಿದೆ. ಒಡೆದ ವಸ್ತುಗಳು ಅಶುಭದ ಸಂಕೇತ ಇದೇ ಕಾರಣಕ್ಕೆ ಇಂತಹ ವಸ್ತುಗಳನ್ನು ಬೆಳಗಿನ ಸಂದರ್ಭದಲ್ಲಿ ನೋಡಬಾರದು
4/ 6
ತೊಳೆಯದ ಪಾತ್ರೆ ನೋಡಬಾರದು. ಇದೇ ಉದ್ದೇಶಕ್ಕಾಗಿ ರಾತ್ರಿ ಮಲಗುವ ಮುನ್ನವೇ ಊಟ ಮಾಡಿದ ಪಾತ್ರೆಗಳನ್ನು ಶುಚಿಗೊಳಿಸಬೇಕು ಎನ್ನವುದು. ರಾತ್ರಿ ಎಲ್ಲಾ ತಿಂದ ಪಾತ್ರೆ ಹಾಗೇ ಬಿಡುವುದರಿಂದ ಕತ್ತಲ ಸಮಯದಲ್ಲಿ ಮನೆಯಲ್ಲಿ ಅಡಗಿದ ಜಿರಳೆ, ಹುಳುಗಳು ಅವುಗಳ ಮೇಲೆ ಆಕ್ರಮಣ ಮಾಡುವುದರಿಂದ ಅವು ಆರೋಗ್ಯಕ್ಕೆ ಹಾಳು ಎಂಬುದು ಇದರ ಹಿಂದಿನ ಉದ್ದೇಶ.
5/ 6
ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕಾಡು ಪ್ರಾಣಿಗಳನ್ನು ನೋಡುವುದು ಅಶುಭ. ಹಾಗೆಯೇ ಎದ್ದ ತಕ್ಷಣ ಸಾಕು ಪ್ರಾಣಿಗಳನ್ನು ಕಂಡರೂ ತೊಂದರೆಯಾಗುವ ಅಪಾಯವಿದೆ.
6/ 6
ನೆರಳನ್ನು ನೋಡಬಾರದು: ಬೆಳಹ್ಹೆ ಎದ್ದಾಕ್ಷಣ ನೆರಳುಗಳನ್ನು ನೋಡಬಾರದು ಎಂಬ ನಂಬಿಕೆ ಇದೆ, ಈ ನೆರಳು ಗಳು ಭಯ, ಆತಂಕ ಮತ್ತು ಗೊಂದಲದ ಸಂಕೇತವಾಗಿದೆ. (ಮೇಲಿನ ಲೇಖನವೂ ಊಹೆ ಆಧಾರಿತವಾಗಿದ್ದು, ನ್ಯೂಸ್ 18 ಕನ್ನಡ ಇದನ್ನು ಖಚಿತಪಡಿಸುವುದಿಲ್ಲ)