ನವಿಲು ಗರಿ : ವಾಸ್ತು ಸಲಹೆಗಳ ಪ್ರಕಾರ, ನವಿಲು ಗರಿಯನ್ನು ಇಟ್ಟುಕೊಳ್ಳುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ವ್ಯಕ್ತಿಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಎಂದಿಗೂ ಸಂಪತ್ತಿನ ಕೊರತೆಯನ್ನು ಎದುರಿಸುವ ಸಂಭವ ಬರುವುದಿಲ್ಲ. ವಾಸ್ತು ಪ್ರಕಾರ ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ನವಿಲು ಗರಿಯನ್ನು ಇಟ್ಟುಕೊಂಡರೆ, ನಿಮ್ಮ ಜೀವನದಲ್ಲಿ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಿಮ್ಮ ಅದೃಷ್ಟವು ಬದಲಾಗುತ್ತದೆ.
ತುಳಸಿ ಎಲೆಗಳು: ತುಳಸಿಯನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಪೂಜೆಯಲ್ಲಿ ಮತ್ತು ಔಷಧೀಯವಾಗಿ ಬಳಸಲಾಗುತ್ತದೆ. ವಾಸ್ತು ಪ್ರಕಾರ, ಮಲಗುವಾಗ ತುಳಸಿ ಎಲೆಗಳನ್ನು ದಿಂಬಿನ ಕೆಳಗೆ ಇಟ್ಟುಕೊಂಡರೆ, ಜೀವನದಲ್ಲಿ ಧನಾತ್ಮಕತೆ ಬರುತ್ತದೆ ಮತ್ತು ನಕಾರಾತ್ಮಕತೆ ದೂರವಾಗುತ್ತದೆ. ತಲೆದಿಂಬಿನ ಕೆಳಗೆ ಇಡುವ ತುಳಸಿ ಎಲೆಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಸಂಪತ್ತು ಕೂಡ ಹೆಚ್ಚಾಗುತ್ತದೆ.
ಅರಿಶಿನದ ಗಂಟು: ಅರಿಶಿನವನ್ನು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಜ್ಯೋತಿಷ್ಯದಲ್ಲಿ ಇದನ್ನು ಗುರು ಗ್ರಹದ ಕಾರಕ ಎಂದು ಹೇಳಲಾಗುತ್ತದೆ. ಮಲಗುವಾಗ ದಿಂಬಿನ ಕೆಳಗೆ ಅರಿಶಿನದ ಉಂಡೆಯನ್ನು ಇಟ್ಟುಕೊಂಡರೆ ಗೌರವ ಹೆಚ್ಚುತ್ತದೆ. ವ್ಯಕ್ತಿಯ ಜಾತಕದಲ್ಲಿ ಗುರು ಬಲಹೀನನಾಗಿದ್ದರೆ ಹಳದಿ ಬಟ್ಟೆಯಲ್ಲಿ ಅರಿಶಿನದ ಉಂಡೆಯನ್ನು ಹಾಕಿ ದಿಂಬಿನ ಕೆಳಗೆ ಇಟ್ಟು ಮಲಗಬೇಕು.