ದೇವಿ ಲಕ್ಷ್ಮಿಯು ರಾತ್ರಿಯಲ್ಲಿ ,ವಿಶೇಷವಾಗಿ ಹುಣ್ಣಿಮೆಯ ರಾತ್ರಿ ಮನೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಹಾಗಾಗಿ ಮಲಗುವ ಮುನ್ನ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಿ. ದೇವಿಯು ಮನೆಯೊಳಗೆ ಪ್ರವೇಶಿಸುವಾಗ ಯಾವುದೇ ಅಡ್ಡಿ ಅಥವಾ ಕೊಳಕು ಇರಬಾರದು. ಯಾರ ಮನೆ ಸ್ವಚ್ಛ ಮತ್ತು ಅಚ್ಚುಕಟ್ಟಾಗಿದೆಯೋ ಅವರಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.