ಹಿಂದೂ ಶಾಸ್ತ್ರಗಳ ಪ್ರಕಾರ ಲಕ್ಷ್ಮಿಯನ್ನು ಸಂಪತ್ತಿನ ದೇವತೆಯಾಗಿ ಪರಿಗಣಿಸುತ್ತೇವೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಕೀರ್ತಿ ಹೆಚ್ಚಾಗುತ್ತದೆ ಎಂದು ಹಲವರು ನಂಬುತ್ತಾರೆ. ಲಕ್ಷ್ಮೀದೇವಿ ನೆಲೆಸಿದರೆ ಕುಟುಂಬಕ್ಕೆ ಯಾವತ್ತೂ ಆರ್ಥಿಕ ಸಮಸ್ಯೆ ಬರುವುದಿಲ್ಲ.
2/ 8
ಪುರಾಣದ ಪ್ರಕಾರ ಲಕ್ಷ್ಮಿ ಚಂಚಲೆ. ಆಕೆ ಮನೆಯಲ್ಲಿ ನಿಲ್ಲಬೇಕು ಎಂದರೆ ಅಲ್ಲಿ ಶುಚಿತ್ವದ ಜೊತೆಗೆ ಆಕೆಯ ಆರಾಧನೆ ಕೂಡ ಅಚ್ಚುಕಟ್ಟಾಗಿ ನಡೆಯಬೇಕು. ಇಲ್ಲವಾದಲ್ಲಿ ಆಕೆ ಮನೆಯಿಂದ ಹೊರಡುತ್ತಾಳೆ ಎಂಬ ನಂಬಿಕೆ ಇದೆ.
3/ 8
ಲಕ್ಷ್ಮಿ ದೇವಿಯು ಹಣದ ಸ್ವರೂಪಿಯಾಗಿ ವಾಸಿಸುತ್ತಾಳೆ. ಆದ್ದರಿಂದಲೇ ನೆಲದ ಮೇಲೆ ಬಿದ್ದ ಹಣವನ್ನು ತೆಗೆದುಕೊಳ್ಳುವಾಗ ಮೊದಲು ಅದನ್ನು ಹಣೆಗೆ ನಮಸ್ಕರಿಸಿ ಎತ್ತಿಕೊಳ್ಳಬೇಕು.
4/ 8
ಹಣ ಕೈಯಲ್ಲಿ ಇಲ್ಲದಿರಲು ಹಲವಾರು ಕಾರಣಗಳಿವೆ. ಹಣ ಏಣಿಕೆ ಸಂದರ್ಭದಲ್ಲಿ ಮಾಡುವ ತಪ್ಪುಗಳು ಕೂಡ ಹಣದ ನಷ್ಟಕ್ಕೆ ಕಾರಣವಾಗುತ್ತದೆ. ಲಕ್ಷ್ಮಿ ಸ್ವರೂಪದ ಹಣವನ್ನು ನಿರ್ಲಕ್ಷ್ಯದಿಂದ ನೋಡಬಾರದು ಎಂಬುದು ಇದೇ ಕಾರಣಕ್ಕೆ
5/ 8
ಪರ್ಸ್ನಲ್ಲಿ ನೋಟುಗಳು ಮತ್ತು ನಾಣ್ಯಗಳ ಜೊತೆಗೆ ಯಾವುದೇ ಆಹಾರ ಪದಾರ್ಥಗಳನ್ನು ಇಡಬೇಡಿ. ಕೆಲವರು ಆಹಾರಗಳನ್ನು ಜೋತೆಯಲ್ಲಿ ಇರಿಸುತ್ತಾರೆ. ಹಾಗೆ ಮಾಡಿದರೆ ಹಣಕ್ಕೆ ಅಪಮಾನವಾಗುತ್ತದೆ.
6/ 8
ನೀವು ಯಾರಿಗಾದರೂ ಬಡವರಿಗೆ, ಭಿಕ್ಷುಕರಿಗೆ ಹಣವನ್ನು ದಾನ ಮಾಡುವಾಗ.. ನೋಟುಗಳು ಅಥವಾ ನಾಣ್ಯಗಳನ್ನು ಎಸೆಯಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಅಪಮಾನ ಮಾಡಿದಂತೆ, ಯಾರಿಗಾದರೂ ಹಣ ಕೊಡುವಾಗ ಬಿಸಾಡಬೇಡಿ. ಅವರ ಕೈಗೆ ಕೊಡಬೇಕು.
7/ 8
ಕೆಲವರು ನೋಟುಗಳನ್ನು ಎಣಿಸುವಾಗ ಬೆರಳುಗಳನ್ನು ಬಾಯಿ ಎಂಜಲಿನಲ್ಲಿ ಒದ್ದೆ ಮಾಡಿ . ನಂತರ ಎಣಿಸುತ್ತಾರೆ ಆದರೆ ಇದನ್ನು ಮಾಡಬಾರದು. ನೋಟು ಎಣಿಕೆ ಮಾಡುವಾಗ ನೀರು ಅಥವಾ ಯಾವುದಾದರೂ ಪೌಡರ್ ಬಳಸುವುದು ಉತ್ತಮ.
8/ 8
ರಾತ್ರಿ ಮಲಗುವಾಗ ಹಾಸಿಗೆಯ ಮೇಲೆ ಹಣ ಇಡಬೇಡಿ. ಹಣವನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು. ಹಣವನ್ನು ಬೀಳುವ ಜಾಗದಲ್ಲಿ ಇಡಬಾರದು