Vastu Tips: ಮನೆಯ ಈ ದಿಕ್ಕಿನಲ್ಲಿ ಅಪ್ಪಿ ತಪ್ಪಿ ಗಡಿಯಾರ ಇಡಬೇಡಿ
ಜೀವನದ ಸುಖ ಸಮೃದ್ಧಿ ವಾಸ್ತು ಶಾಸ್ತ್ರ (Vastu Shastra) ಮಹತ್ವದ್ದಾಗಿದೆ. ಮನೆಯಲ್ಲಿನ ಕೆಲವು ದಿಕ್ಕುಗಳಲ್ಲಿನ (Direction) ಬದಲಾವಣೆಯಿಂದ ಯಾವ ರೀತಿ ಸುಖ ಉಂಟಾಗುತ್ತದೆ ಎಂಬುದನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. ಅದರಂತೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಗಡಿಯಾರ (Wall Clock) ಇಡಬೇಕು. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಸಿಗುವ ಲಾಭ ಏನು. ಒಂದು ವೇಳೆ ತಪ್ಪು ದಿಕ್ಕಿನಲ್ಲಿ ಇರಿಸಿದರೆ, ಅದು ನಿಮಗೆ ನಕಾರಾತ್ಮಕ (Negativity) ಫಲಿತಾಂಶಗಳನ್ನು ತರಬಹುದು ಎಂಬುದನ್ನು ವಿವರಿಸುತ್ತದೆ.
ಗಡಿಯಾರವನ್ನು ಮನೆ ಅಥವಾ ಕಚೇರಿಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇಡಬಾರದು, ಏಕೆಂದರೆ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ ಯಮನನ್ನು ಸಾವಿನ ದೇವರು ಎಂದು ಪರಿಗಣಿಸಲಾಗುತ್ತದೆ.
2/ 7
ಈ ದಿಕ್ಕಿನಲ್ಲಿ ಗಡಿಯಾರವನ್ನು ಹಾಕುವುದರಿಂದ ವ್ಯಾಪಾರದಲ್ಲಿ ಅಡೆತಡೆಗಳು ಬರಲು ಪ್ರಾರಂಭಿಸುತ್ತವೆ. ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ಮನೆ ಮಂದಿ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
3/ 7
ಹಾಗೇಯೇ, ಮನೆಯ ಮುಖ್ಯ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಬಾರದು. ಇದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ.
4/ 7
ಬಹುತೇಕರಿಗೆ ವಾಚ್ ಅನ್ನು ಕಟ್ಟಿಕೊಂಡು ಮಲಗುವ ಅಭ್ಯಾಸ. ಆದರೆ, ಈ ರೀತಿ ಕೈಯನ ಮಣಿಕಟ್ಟಿಗೆ ವಾಚ್ ಕಟ್ಟಿ ಮಲಗುವುದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ವಾಸ್ತು ಪ್ರಕಾರ ಇದು ನಕಾರತ್ಮಕತೆಯನ್ನು ಹೆಚ್ಚಿಸುತ್ತದೆ.
5/ 7
ಎದ್ದ ತಕ್ಷಣಕ್ಕೆ ಸಮಯ ನೋಡುವ ಅಭ್ಯಾಸದಿಂದ, ಕೆಲವೊಮ್ಮೆ ಮರೆತು ಕೈಯಲ್ಲಿ ವಾಚ್ ಕಟ್ಟಿ ಮಲಗುವ ಅನೇಕರಿಗೆ. ಇನ್ನು ಕೆಲವರಿಗೆ ಮೊಬೈಲ್ನಿಂದ ತರಂಗಾಂತರ ಹಾನಿ ಆಗುತ್ತದೆ ಎಂದು ದಿಂಬಿನ ಅಡಿ ವಾಚ್ ಅನ್ನು ಸಮಯ ನೋಡಲು ಇಟ್ಟುಕೊಂಡು ಮಲಗುತ್ತಾರೆ.
6/ 7
ಆದರೆ, ವಾಸ್ತು ಪ್ರಕಾರ ಈ ರೀತಿಯ ಅಭ್ಯಾಸ ಒಳ್ಳೆಯದಲ್ಲ. ವಾಸ್ತು ಪ್ರಕಾರ ಈ ರೀತಿ ದಿಂಬಿನ ಅಡಿ ಅಥವಾ ಕೈಯಲ್ಲಿ ವಾಚ್ ಕಟ್ಟಿ ಮಲಗುವುದರಿಂದ ನಿದ್ದೆಗೆ ಮಾತ್ರವಲ್ಲ. ಇದು ವ್ಯಕ್ತಿಗೂ ಕೂಡ ಕೆಟ್ಟದ್ದು.
7/ 7
ವಾಚ್ನಲ್ಲಿನ ಎಲೆಕ್ಟ್ರೋ ಮ್ಯಾಕ್ನೆಟಿಕ್ ವೆವ್ಸ್ ನಕಾರತ್ಮಕತೆಯನ್ನು ಮೂಡಿಸುತ್ತದೆ. ಇದು ಮನಸಿಗೆ ಮತ್ತು ಹೃದಯಕ್ಕೆ ಎರಡು ಅಪಾಯ ಎನ್ನುತ್ತಾರೆ. ಅಷ್ಟೇ ಅಲ್ಲದೇ ಈ ತರಂಗದಿಂದ ನಕರಾತ್ಮಕ ಶಕ್ತಿ ಹೊರ ಹೊಮ್ಮುತ್ತದೆ. ಮಾನಸಿಕ ಆತಂಕ ಹೆಚ್ಚುತ್ತದೆ.