Vastu Tips: ಕಸದ ಬುಟ್ಟಿಯನ್ನು ಈ ದಿಕ್ಕಿನಲ್ಲಿಟ್ಟರೆ ಮನೆಯಲ್ಲಿ ಜಗಳಗಳು ಜಾಸ್ತಿ ಆಗುತ್ತವೆ, ಎಚ್ಚರ!
Vastu Tips For Mental Peace: ಮಾನಸಿಕ ಶಾಂತಿ ಎಂಬುವುದು ಮನೆಯ ವಾತಾವರಣದ ಮೇಲೆ ಅವಲಂಬಿಸಿರುವಂತದ್ದು. ಮನೆಯಲ್ಲಿ ಸದಾ ಕಿರಿಕಿರಿ, ಜಗಳಗಳು, ಮನಸ್ತಾಪಗಳು ಇದ್ದರೆ ಜೀವನದಲ್ಲಿ ಜಿಗುಪ್ಸೆ ಎದುರಾಗುತ್ತದೆ. ಮನೆಯಲ್ಲಿ, ಮನದಲ್ಲಿ ಶಾಂತಿ ನೆಲಸಲು ವಾಸ್ತುಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ.
ವಾಸ್ತು ಪ್ರಕಾರ, ಮನೆಯಲ್ಲಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ಮನೆಯ ಶಾಂತಿಯನ್ನು ಹಾಳು ಮಾಡುತ್ತವೆ. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ. ಸಾಂದರ್ಭಿಕ ಚಿತ್ರ
2/ 7
ಮಾನಸಿಕ ಶಾಂತಿಯನ್ನು ಪಡೆಯಲು ಮನೆಯ ಈಶಾನ್ಯ ದಿಕ್ಕಿನಲ್ಲಿ ಕೆಂಪು ಬಣ್ಣದ ವಸ್ತುಗಳನ್ನು ಇಡಬೇಡಿ. ಕಸದ ಬುಟ್ಟಿಗಳು ಮತ್ತು ಹಳೆಯ ದಿನಪತ್ರಿಕೆಗಳನ್ನು ಸಹ ಈ ದಿಕ್ಕಿನಲ್ಲಿ ಇಡಬಾರದು.
3/ 7
ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲು, ಈಶಾನ್ಯದಲ್ಲಿ ಓಂಕಾರ ಅಥವಾ ಸ್ವಸ್ತಿಕ್ ಅನ್ನು ರಚಿಸಿ. ರಂಗೋಲಿ ಅಥವಾ ಸ್ಟಿಕರ್ ಅನ್ನು ಅಂಟಿಸಿದರು ಸಾಕು.
4/ 7
ನಿಮ್ಮ ಮಲಗುವ ಕೋಣೆ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿರಬಾರದು. ಈ ದಿಕ್ಕಿನಲ್ಲಿ ಹೆಚ್ಚು ಕಾಲ ಉಳಿಯುವುದು ನಿಮ್ಮನ್ನು ಚಂಚಲಗೊಳಿಸಬಹುದು.
5/ 7
ಮನೆಯ ಪೂರ್ವ ದಿಕ್ಕಿನಲ್ಲಿ ಹೆಚ್ಚು ಗಿಡಗಳನ್ನು ಇಡುವುದರಿಂದ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಹಸಿರು ಮನೆಯ ಸುತ್ತ ಇರುವುದು ಮನಸ್ಸಿಗೂ ಒಳ್ಳೆಯದು.
6/ 7
ಮುರಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. ಗಾಜು ಅಥವಾ ಕಿಟಕಿ ಅಥವಾ ಪೀಠೋಪಕರಣಗಳೇ ಆಗಿರಲಿ.. ಮುರಿದ ವಸ್ತುಗಳನ್ನು ಮನೆಯಿಂದ ಸಾಧ್ಯವಾದಷ್ಟು ಬೇಗ ಹೊರಗೆ ಎಸೆಯಿರಿ. ಮುರಿದ ವಸ್ತುಗಳು ಧನಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತವೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)