ಮನೆಯಲ್ಲಿ ಯಾವಾಗಲೂ ಮುಖ್ಯ ಆಕರ್ಷಣೆ ಅಂದ್ರೆ ಅದುವೇ ಮನೆಯ ಮುಖ್ಯ ದ್ವಾರ. ನಿಮ್ಮ ಮನೆಯ ಮುಖ್ಯ ಬಾಗಿಲು ನಿಮಗೆ ಮತ್ತು ನಿಮ್ಮ ಅತಿಥಿಗಳಿಗೆ ಮಾತ್ರವಲ್ಲದೆ ಧನಾತ್ಮಕ ಶಕ್ತಿಗಳು ಮತ್ತು ಸಮೃದ್ಧಿಯ ಸಂಕೇತವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ದ್ವಾರವನ್ನು ಇರಿಸಬೇಕಾದ ಮತ್ತು ಇರಬಾರದ ಅನೇಕ ದಿಕ್ಕುಗಳಿವೆ. ಉದಾಹರಣೆಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಮುಖ್ಯ ದ್ವಾರವನ್ನು ಇರಿಸುವುದಿಲ್ಲ. ಪೂರ್ವ ದಿಕ್ಕಿಗೆ ಮುಖ ಮಾಡಿ ಮುಖ್ಯ ದ್ವಾರವನ್ನು ಇರಿಸುತ್ತಾರೆ. ಇದು ಮನೆಗೆ ಬಹಳ ಮುಖ್ಯ ಎಂಬುದು ಹಲವರ ವಾದ.
ಓಂ: ಓಂ ಎಂಬುದು ಹಿಂದೂ ಧರ್ಮದ ಅನುಯಾಯಿಗಳು ಪ್ರತಿ ಮಂಗಳಕರ ಸಭೆಯ ಸಮಯದಲ್ಲಿ ಬಳಕೆ ಮಾಡುವ ಸಂಕೇತ, ಮಂತ್ರ ಮತ್ತು ಉಚ್ಚಾರಾಂಶವಾಗಿದೆ. ಇದು ದೈವಿಕ ಧ್ವನಿಯ ನಿರೂಪಣೆ ಎಂದು ಹೇಳಲಾಗುತ್ತದೆ. ಇದು ಸರ್ವೋಚ್ಚ, ಕಾಸ್ಮಿಕ್ ಪ್ರಪಂಚ ಮತ್ತು ಪ್ರಜ್ಞೆಯ ಸಾರವನ್ನು ಸೂಚಿಸುತ್ತದೆ. ನೀವು ಈ ಚಿಹ್ನೆಯ ಚಿತ್ರವನ್ನು ಮನೆಯ ಮುಖ್ಯ ದ್ವಾರಕ್ಕೆ ಅಳವಡಿಸಿಕೊಳ್ಳುವುದರಿಂದ ಮನೆಯ ವಾತಾವರಣವನ್ನು ಸುಧಾರಿಸುವುದಲ್ಲದೇ, ಕುಟುಂಬದವರ ಆರೋಗ್ಯ ಉತ್ತಮವಾಗಿರುತ್ತದೆ. ಇದರ ಚಿತ್ರ ನಿಮಗೆ ಸಿಗದೇ ಹೋದಲ್ಲಿ ನೀವು ಇದನ್ನು ಅರಿಶಿನ ಪುಡಿ (ಹಲ್ಡಿ) ಮತ್ತು ಸಿಂಧೂರ (ರೋಲಿ, ಕುಂಕುಮ ಅಥವಾ ಕೆಂಪು ಅರಿಶಿಣ) ಬಳಸಿ ಬಾಗಿಲಿಗೆ ಬರೆಯಬಹುದು.
ಶುಭ-ಲಾಭ ಚಿಹ್ನೆ: ಭಾರತೀಯ ಮನೆಗಳಲ್ಲಿ, ಹೆಚ್ಛಾಗಿ ಮನೆಯ ಮುಖ್ಯ ದ್ವಾರದ ಹೊರಗೆ ಶುಭ್-ಲಾಭ್ ಚಿಹ್ನೆಗಳನ್ನು ಕಾಣಬಹುದಾಗಿದೆ. ಈ ಚಿಹ್ನೆಗಳನ್ನು ಸಾಮಾನ್ಯವಾಗಿ ಸಂತೋಷದ ಸಂದರ್ಭದಲ್ಲಿ ಅಥವಾ ಹಬ್ಬಗಳ ಸಂದರ್ಭಗಳಲ್ಲಿ ಬಳಕೆ ಮಾಡುತ್ತಾರೆ. ದೀಪಾವಳಿ ಅಥವಾ ನವರಾತ್ರಿಯ ಸಮಯದಲ್ಲಿ ಹೊಸ ಶುಭ ಮತ್ತು ಲಾಭದ ಚಿಹ್ನೆಗಳನ್ನು ಹಾಕಿ ಸಂಭ್ರಮಿಸುತ್ತಾರೆ. ಶುಭ್ ಮತ್ತು ಲಾಭ್ ಗಣೇಶನ ಮಕ್ಕಳು ಎಂದು ನಂಬಲಾಗಿದೆ. ಶುಭ್ ಪವಿತ್ರ ಮತ್ತು ಮಂಗಳಕರವಾದದ್ದನ್ನು ಸೂಚಿಸುತ್ತದೆ, ಆದರೆ ಲಾಭ್ ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ನೀವು ಮನೆಯ ಹೊರಗೆ ಸ್ಟಿಕ್ಕರ್‌ಗಳನ್ನು ಅಂಟಿಸಬಹುದು ಅಥವಾ ಸಿಂಧೂರದ ಸಹಾಯದಿಂದ ಬರೆಯಬಹುದು.
ಸ್ವಸ್ತಿಕ ಚಿಹ್ನೆ: ಹಿಂದೂ ಧರ್ಮದ ಅನುಯಾಯಿಗಳು ಸ್ವಸ್ತಿಕ್ ಅನ್ನು ಪವಿತ್ರ ಸಂಕೇತವೆಂದು ಪರಿಗಣಿಸುತ್ತಾರೆ. ಇದು ಮನೆಯಾದ್ಯಂತ ಧನಾತ್ಮಕ ಶಕ್ತಿಯ ಹರಿವನ್ನು ಸೂಚಿಸುತ್ತದೆ. ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಾಕುವುದರಿಂದ ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿನ ಅಡೆತಡೆಗಳನ್ನು ದೂರ ಮಾಡಬಹುದು ಎಂದು ಭಾರತೀಯರು ನಂಬುತ್ತಾರೆ. ಇದು ಆಫ್ರಿಕಾ ಮತ್ತು ಅಮೆರಿಕದಲ್ಲಿ ಗುರುತಿಸಲ್ಪಟ್ಟ ಪ್ರಾಚೀನ ಸಂಕೇತವಾಗಿದೆ.
ಹಿಂದೂ ಧರ್ಮದಲ್ಲಿ, ಈ ಚಿಹ್ನೆಯನ್ನು ಪ್ರದಕ್ಷಿಣಾಕಾರವಾಗಿ ಎಳೆಯಲಾಗುತ್ತದೆ ಮತ್ತು ಸೂರ್ಯನನ್ನು ಸಂಕೇತಿಸುತ್ತದೆ. ಇದು ಸಿಂಧೂ ಕಣಿವೆ ನಾಗರೀಕತೆಯ ಅವಶೇಷಗಳಲ್ಲಿ ಮತ್ತು ಗ್ರೀಕ್, ರೋಮನ್ ಮತ್ತು ಇಂಡೋ-ಯುರೋಪಿಯನ್ ಸೇರಿದಂತೆ ಅನೇಕ ಸಂಸ್ಕೃತಿಗಳಲ್ಲಿ ಕಂಡುಬಂದಿದೆ. ನಿಮಗೆ ಇದರ ಚಿತ್ರಗಳು ಸಿಗದೇ ಹೋದಾಗ ಸ್ಟಿಕ್ಕರ್‌ಗಳನ್ನು ಬಳಕೆ ಮಾಡಬಹುದು. ಅಥವಾ ಕೆಂಪು ಸಿಂಧೂರವನ್ನು ಬಳಸಿ ಮನೆಯ ಮುಖ್ಯ ದ್ವಾರದಲ್ಲಿ ಚಿತ್ರಿಸಬಹುದು.