Vastu Tips: ಮದುವೆ ವಿಳಂಬ ಆಗುತ್ತಿದ್ಯಾ; ಈ ಸರಳ ವಾಸ್ತು ಪಾಲಿಸಿ
ವಾಸ್ತು ದೋಷಗಳಿಂದ (Vastu Dosha) ಅನೇಕ ಬಾರಿ ಮದುವೆಗಳು ವಿಳಂಬಕ್ಕೆ ಕಾರಣವಾಗುತ್ತದೆ. ಸಾಕಷ್ಟು ಪ್ರಯತ್ನ ಮಾಡಿದರೂ ಸರಿಯಾದ ಕೆಲವೊಮ್ಮೆ ಕಂಕಣ ಭಾಗ್ಯ (Marriage) ಕೂಡುವುದಿಲ್ಲ. ಇದಕ್ಕೆ ಕಾರಣ ಸುತ್ತಲಿನ ವಸ್ತುಗಳಿಂದ ಉಂಟಾಗುವ ಋಣಾತ್ಮಕ ಮತ್ತು ಧನಾತ್ಮಕ ಪರಿಣಾಮ. ಮದುವೆ ಆಗುವ ಹುಡುಗ ಅಥವಾ ಹುಡುಗಿಯ ಕೋಣೆ ತಪ್ಪು ದಿಕ್ಕಿನಲ್ಲಿದ್ದರೆ, ಅವರ ಮದುವೆ ವಿಳಂಬವಾಗಬಹುದು.
ಕೆಲವು ಕ್ರಮಗಳನ್ನು ವಾಸ್ತು ಶಾಸ್ತ್ರದಲ್ಲಿ ನೀಡಲಾಗಿದೆ, ಅದನ್ನು ಅಳವಡಿಸಿಕೊಂಡು ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಮಂಗಳವಾದ್ಯ ನುಡಿಸಬಹುದು.
2/ 7
ಮದುವೆ ವಿಳಂಬವಾಗಿರುವ ವ್ಯಕ್ತಿಯ ಮಲಗುವ ಕೋಣೆಯಲ್ಲಿ, ಒಂದು ಜೋಡಿ ಮ್ಯಾಂಡರಿನ್ ಬಾತುಕೋಳಿಗಳ ಪ್ರತಿಮೆಯನ್ನು ಇರಿಸಿ, ಅದರಲ್ಲಿ ಗಂಡು ಮತ್ತು ಹೆಣ್ಣು ಇರಬೇಕು. ಇದು ಶೀಘ್ರದಲ್ಲೇ ಮದುವೆ ಆಗುವ ಸೂಚನೆ ನೀಡುತ್ತದೆ.
3/ 7
ವಾಸ್ತು ಶಾಸ್ತ್ರದ ಪ್ರಕಾರ, ಮದುವೆಯಾಗ ಬಯಸುವ ಹುಡುಗ ಅಥವಾ ಹುಡುಗಿಯರು ವಾಯುವ್ಯ ಮೂಲೆಯಲ್ಲಿ ತಲೆ ಇಟ್ಟು ಮಲಗಬೇಕು. ದಕ್ಷಿಣ ದಿಕ್ಕಿಗೆ ಮಲಗಿದರೆ ಅವರ ಮದುವೆ ಬೇಗ ಆಗುವುದಿಲ್ಲ
4/ 7
ಅವರ ರೂಂನ ಬಣ್ಣವು ತಿಳಿ ಗುಲಾಬಿ ಅಥವಾ ಕಣ್ಣಿಗೆ ಆಹ್ಲಾದಕರವಾಗಿರಬೇಕು. ತುಂಬಾ ಗಾಢವಾದ, ಕಂದು, ನೀಲಿ ಮತ್ತು ಕಪ್ಪು ಬಣ್ಣಗಳನ್ನು ಎಂದಿಗೂ ಬಳಸಬೇಡಿ, ಅಂತಹ ಬಣ್ಣಗಳು ನಕಾರಾತ್ಮಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ.
5/ 7
ಮದುವೆಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ವಿವಾಹಿತ ವ್ಯಕ್ತಿಯ ಮಲಗುವ ಕೋಣೆಯೊಳಗೆ ಎಂದಿಗೂ ನೈಋತ್ಯ ದಿಕ್ಕಿನಲ್ಲಿ ಕತ್ತರಿ, ಚಾಕು ಮತ್ತು ಹರಿತವಾದ ವಸ್ತುಗಳನ್ನು ಇಡಬೇಡಿ.
6/ 7
ಮಲಗುವ ಕೋಣೆಯಲ್ಲಿ ಉತ್ತರ ಗೋಡೆಯ ಮೇಲೆ ರಾಧಾ-ಕೃಷ್ಣ, ಶಿವ-ಪಾರ್ವತಿ ಅಥವಾ ಯಾವುದೇ ವಿವಾಹಿತ ದಂಪತಿಗಳ ಚಿತ್ರವನ್ನು ಇರಿಸಬೇಕು. ಇದರಿಂದ ಅವರಿಗೆ ಶೀಘ್ರ ಸಂಬಂಧ ಕೂಡಲಿದೆ
7/ 7
ಅವಿವಾಹಿತರ ಕೋಣೆಯೊಳಗೆ ನೈಋತ್ಯ ದಿಕ್ಕಿನಲ್ಲಿ ಎರಡು ಕ್ರಿಸ್ಟಲ್ ಬಾಲ್ಗಳನ್ನು ಇರಿಸಿ. ಇದರಿಂದ ಉತ್ತಮ ಸಂಗಾತಿ ಪಡೆಯುವ ಕನಸು ಪೂರ್ಣಗೊಳ್ಳಲಿದೆ.