Vastu For Relationship: ಮನೆಯ ವಸ್ತು ಹೀಗಿದ್ರೆ ಗಂಡ-ಹೆಂಡತಿ ಜಗಳವೇ ಆಗಲ್ಲ
Vastu Tips For Marriage: ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಬಹಳ ಮುಖ್ಯ. ಹಾಗೆಯೇ ಮದುವೆಯ ನಂತರ ಗಂಡ ಹಾಗೂ ಹೆಂಡತಿ ಸಹ ಅನ್ಯೋನ್ಯವಾಗಿ ಜೀವನ ನಡೆಸುವುದು ಎಲ್ಲರದಕ್ಕಿಂತ ಮುಖ್ಯವಾಗುತ್ತದೆ. ಸಂಬಂಧದಲ್ಲಿ ಸಣ್ಣ-ಪುಟ್ಟ ಸಮಸ್ಯೆ ಸಾಮಾನ್ಯ. ಆದರೆ ಅದು ದೊಡ್ಡದಾಗಬಾರದು. ಗಂಡ-ಹೆಂಡತಿ ನಡುವೆ ಸಂಬಂಧ ಚೆನ್ನಾಗಿರಲು ಕೆಲ ವಾಸ್ತು ಟಿಪ್ಸ್ ಇಲ್ಲಿದೆ.
ನೇರಳೆ ಬಣ್ಣ: ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ನೇರಳೆ ಬಣ್ಣವನ್ನು ಬಳಕೆ ಮಾಡುವುದು ಮನೆಯಲ್ಲಿ ಶಾಂತಿ ಕಾಪಾಡಲು ಸಹಾಯ ಮಾಡುತ್ತದೆ. ನೀವು ನಿಮ್ಮ ಗೋಡೆಯ ಮೇಲೆ ನೇರಳೆ ಬಣ್ಣ ಬಳಕೆ ಮಾಡಬಹುದು ಅಥವಾ ನೇರಳೆ ಬಣ್ಣದ ಯಾವುದೇ ವಸ್ತುವನ್ನು ಆ ಮೂಲೆಯಲ್ಲಿ ಇಡಬಹುದು.
2/ 8
ಅಡುಗೆ ಮನೆ: ನಿಮ್ಮ ಮನೆಯ ಅಡುಗೆ ಕೋಣೆಯು ಆಗ್ನೇಯ ದಿಕ್ಕಿನಲ್ಲಿ ಇರುವುದು ಬಹಳ ಮುಖ್ಯ. ಇದರಿಂದ ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಇನ್ನು ಅಡುಗೆ ಮನೆಯ ಗೋಡೆಗೆ ನೀವು ಕಿತ್ತಳೆ ಬಣ್ಣವನ್ನು ಬಳಕೆ ಮಾಡಬಹುದು.
3/ 8
ಬೆಡ್ ರೂಂ: ನಿಮ್ಮ ಮಾಸ್ಟರ್ ಬೆಡ್ ರೂಂ ನೈಋತ್ಯ ದಿಕ್ಕಿನಲ್ಲಿ ಇಡುವುದು ಸಂಬಂಧ ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ಅಲ್ಲದೇ, ಇದರಿಂದ ಕೆಲ ಕಾರಣದಿಂದ ಉಂಟಾಗುವ ಸಣ್ಣ-ಪುಟ್ಟ ಸಮಸ್ಯೆಗಳು ಸಹ ದೊಡ್ಡದಾಗುವ ಮೊದಲೇ ನಿವಾರಣೆಯಾಗುತ್ತದೆ.
4/ 8
ಮಕ್ಕಳ ರೂಂ: ಒಂದು ಮನೆಯಲ್ಲಿ ಮಕ್ಕಳ ರೂಂ ಸಹ ಬಹಳ ಮುಖ್ಯ. ಮಕ್ಕಳ ಕಾರಣದಿಂದ ಕೂಡ ಮನೆಯಲ್ಲಿ ಜಗಳಗಳು ಉಂಟಾಗುತ್ತದೆ, ಹಾಗಾಗಿ ಮಕ್ಕಳ ರೂಂ ಗೋಡೆಯ ಬಣ್ಣ ನೀಲಿ ಅಥವಾ ಬೂದು ಬಣ್ಣದಲ್ಲಿ ಇರಬೇಕು.
5/ 8
ಮಂಚ: ನೀವು ಮಲಗುವ ಮಂಚದ ಮರದಿಂದ ಮಾಡಿರಬೇಕು. ಲೋಹದಿಂದ ಮಾಡಿದ ಮಂಚಗಳು ಮನೆಯಲ್ಲಿ ಕಿರಿಕಿರಿಗೆ ಕಾರಣವಾಗುತ್ತದೆ. ಹಾಗೆಯೇ 2 ಮಂಚವನ್ನು ಒಟ್ಟಿಗೆ ಸೇರಿಸಬೇಡಿ. ಒಂದೇ ಮಂಚವನ್ನು ಬಳಸಿ.
6/ 8
ಕನ್ನಡಿ: ನಿಮ್ಮ ಬೆಡ್ ರೂಂನಲ್ಲಿ ಇರುವ ಕನ್ನಡಿ ಕೂಡ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಕಾರಣಕ್ಕೂ ಕನ್ನಡಿಯಲ್ಲಿ ಮಂಚ ಕಾಣಬಾರದು. ಮಂಚದ ಎದುರಿಗೆ ಕನ್ನಡಿ ಇರಬಾರದು. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ.
7/ 8
ನಿಮ್ಮ ಬೆಡ್ ರೂನ ಈಶಾನ್ಯ ಮೂಲೆಯನ್ನು ಬಹಳ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗೆಯೇ ಯಾವುದೇ ಕಾರಣಕ್ಕೂ ನಿಮ್ಮ ರೂಂನಲ್ಲಿ ಟಿವಿ ಇರಬಾರದು. ಸಾಧ್ಯವಾದರೆ ಕಂಪ್ಯೂಟರ್ ಸಹ ನಿಮ್ಮ ರೂಂನಲ್ಲಿ ಇರಬಾರದು.
8/ 8
ಮನೆ ಎಂದ ಮೇಲೆ ಫ್ಯಾಮಿಲಿ ಫೋಟೋ ಇದ್ದೇ ಇರುತ್ತದೆ. ಆದರೆ ಅವುಗಳನ್ನ ನೈಋತ್ಯ ದಿಕ್ಕಿನಲ್ಲಿ ಹಾಕುವುದು ಒಳ್ಳೆಯದು. ಹಾಗೆಯೇ ಕೇವಲ ಗಂಡ-ಹೆಂಡತಿ ಫೋಟೋವನ್ನು ಪಶ್ಚಿಮ ದಿಕ್ಕಿನಲ್ಲಿ ಹಾಕಬೇಕು.