Vastu Tips: ಔಷಧಿಗಳನ್ನು ಮನೆಯ ಈ ದಿಕ್ಕಿನಲ್ಲಿ ಇಡಬಾರದು, ರೋಗಗಳಿಂದ ಬೇಗ ಮುಕ್ತಿ ಸಿಗಲ್ಲ
ಎಲ್ಲಕ್ಕಿಂತ ದೊಡ್ಡ ಆಸ್ತಿ ಆರೋಗ್ಯ. ಸಕಲ ಐಶ್ವರ್ಯಗಳೂ ಇದ್ದು, ಅನಾರೋಗ್ಯದಿಂದ ಬಳಲುತ್ತಿದ್ದರೆ ಏನು ಪ್ರಯೋಜನ. ಹಾಗಾಗಿ ಆರೋಗ್ಯವೇ ಭಾಗ್ಯ ಎನ್ನುತ್ತಾರೆ. ಆರೋಗ್ಯಕ್ಕೂ ವಾಸ್ತು ಶಾಸ್ತ್ರದಲ್ಲಿ ಸಲಹೆಗಳಿವೆ. ಅವು ಏನು ಹೇಳುತ್ತವೆ ನೋಡೋಣ ಬನ್ನಿ.
ಔಷಧಿಗಳನ್ನು ಮನೆಯ ಯಾವ ದಿಕ್ಕಿನಲ್ಲಿಡಬೇಕು ಎಂಬ ಬಗ್ಗೆಯೂ ವಾಸ್ತುಶಾಸ್ತ್ರ ಕೆಲ ಸಲಹೆಗಳನ್ನು ನೀಡುತ್ತೆ. ಸಾಮಾನ್ಯವಾಗಿ ಜನರು ವಾಸ್ತು ಶಾಸ್ತ್ರದಲ್ಲಿ ನಿರ್ದಿಷ್ಟಪಡಿಸಿದ ದಿಕ್ಕುಗಳಲ್ಲಿ ವಸ್ತುಗಳನ್ನು ಇಡುತ್ತಾರೆ. ಆದರೆ ಕೆಲ ವಿಷಯಗಳ ಬಗ್ಗೆ ಗಮನ ಕೊಡಲ್ಲ. ಈ ಹಿನ್ನೆಲೆ ವಾಸ್ತು ದೋಷಗಳಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.
2/ 8
ವಾಸ್ತು ಶಾಸ್ತ್ರದ ಪ್ರಕಾರ, ಔಷಧಿಗಳನ್ನು ಇಡುವ ಸ್ಥಳ ಮತ್ತು ದಿಕ್ಕು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಔಷಧಗಳನ್ನು ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ, ಅವು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
3/ 8
ವಾಸ್ತು ಪ್ರಕಾರ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಔಷಧಿಗಳನ್ನು ಇಡುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಔಷಧವನ್ನು ಈ ದಿಕ್ಕಿಗೆ ಇರಿಸಿದರೆ ನೀವು ಶೀಘ್ರದಲ್ಲೇ ಗುಣಮುಖರಾಗುತ್ತೀರಿ.
4/ 8
ಇವುಗಳನ್ನು ಸರಿಯಾಗಿ ನಿರ್ವಹಿಸಿದರೆ, ರೋಗಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ದಕ್ಷಿಣ ಮತ್ತು ಆಗ್ನೇಯ ದಿಕ್ಕಿನಲ್ಲಿ ಔಷಧಗಳನ್ನು ಇಡುವುದು ಸರಿಯಲ್ಲ. ಇದನ್ನು ತಪ್ಪಿಸಬೇಕು.
5/ 8
ವಾಸ್ತು ಪ್ರಕಾರ, ನೀವು ದಕ್ಷಿಣ ದಿಕ್ಕಿಗೆ ಔಷಧಿಗಳನ್ನು ಇಟ್ಟರೆ, ಕುಟುಂಬದ ಸದಸ್ಯರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇದರ ಹೊರತಾಗಿ ಔಷಧವನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಾರದು.
6/ 8
ಈ ದಿಕ್ಕಿನಲ್ಲಿ ಔಷಧಿಗಳನ್ನು ಇರಿಸುವುದು ಅವುಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರೋಗದಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು.
7/ 8
ಇನ್ನು ವಾಸ್ತು ಪ್ರಕಾರ ಔಷಧಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು. ಇದು ಕೆಟ್ಟ ಪರಿಣಾಮ ಬೀರುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)