Vastu Turtle Ring: ಆಮೆ ಉಂಗುರ ಧರಿಸುವಾಗ ಈ ತಪ್ಪನ್ನು ಮಾಡಬೇಡಿ
ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಧರಿಸುವುದರಿಂದ ಜೀವನದಲ್ಲಿ ಅಭಿವೃದ್ದಿ ಕಾಣಬಹುದಾಗಿದೆ. ಇವುಗಳಿಂದ ಸಕಾರಾತ್ಮಕ ಶಕ್ತಿ ಹೆಚ್ಚಲಿದೆ. ಇದರಲ್ಲಿ ಒಂದು ಆಮೆ ಉಂಗುರು (Turtle ring). ಆಮೆಗೆ ವಾಸ್ತು ಶಾಸ್ತ್ರದಲ್ಲಿ (vastu) ವಿಶೇಷ ಸ್ಥಾನಮಾನ ಇದೆ. ಇದೇ ಕಾರಣಕ್ಕೆ ಮನೆಯಲ್ಲಿ ಮಾತ್ರ ಆಮೆ ಪ್ರತಿಮೆ ಇಡದೇ ಅವುಗಳನ್ನು ಉಂಗುರಗಳಾಗಿ ಕೂಡ ಧರಿಸಲಾಗುವುದು. ಆಮೆಯ ಉಂಗುರವನ್ನು ಧರಿಸುವುದರಿಂದ ಒಬ್ಬರ ಜೀವನದಲ್ಲಿ ಸಂತೋಷ ಮತ್ತು ಸೌಕರ್ಯ ಹೆಚ್ಚುತ್ತದೆ. ಅದರಲ್ಲೂ ಆರ್ಥಿಕವಾಗಿ ಸಾಕಷ್ಟು ಅಭಿವೃದ್ದಿ ಹೊಂದುತ್ತಾರೆ ಎಂಬ ನಂಬಿಕೆ ಇದೆ.
ವಾಸ್ತು ಪ್ರಕಾರ, ಆಮೆಯನ್ನು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಆಮೆಯ ಉಂಗುರವನ್ನು ಧರಿಸಿದವರ ಮೇಲೆ ಲಕ್ಷ್ಮಿಯ ಅನುಗ್ರಹವು ಇರುತ್ತದೆ ಎಂದು ನಂಬಲಾಗಿದೆ.
2/ 11
ಅನೇಕ ಜನರು ತಮ್ಮ ಕೈಯಲ್ಲಿ ಆಮೆಯ ಉಂಗುರವನ್ನು ಧರಿಸಿರುವುದನ್ನು ಕಾಣಬಹುದು. ಆದರೆ ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ
3/ 11
ಈ ಆಮೆ ಉಂಗುರ ಧಾರಣೆ ನೇರವಾಗಿ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದೆ. ಇದನ್ನು ಧರಿಸಿದರೆ ಅದೃಷ್ಟದ ಹಾದಿ ತೆರೆದುಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು
4/ 11
ಇದೇ ವೇಳೆ ಈ ಉಂಗುರ ಧರಿಸುವುದರಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಆ ವ್ಯಕ್ತಿ ಬಡವನಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಆಮೆಯ ಉಂಗುರವನ್ನು ಧರಿಸುವ ಕೆಲವು ಅಂಶಗಳು ಮುಖ್ಯವಾಗುತ್ತದೆ.
5/ 11
ಆಮೆಯ ಉಂಗುರವನ್ನು ಸುಖಸುಮ್ಮನೆ ಧರಿಸಬಾರದು ಎಂದು ವಾಸ್ತು ಶಾಸ್ತ್ರದ ತಜ್ಞರು ತಿಳಿಸುತ್ತಾರೆ. ಅದನ್ನು ಧರಿಸುವ ಮೊದಲು, ನೀವು ಜ್ಯೋತಿಷ್ಯದ ಸಲಹೆಯನ್ನು ತೆಗೆದುಕೊಳ್ಳಬೇಕು.
6/ 11
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ಮತ್ತು ತುಲಾ ರಾಶಿಯ ಜನರು ಜಾತಕವನ್ನು ತೋರಿಸಿದ ನಂತರವೇ ಈ ಉಂಗುರವನ್ನು ಧರಿಸಬೇಕು.
7/ 11
ಆಮೆಯ ಉಂಗುರವನ್ನು ಧರಿಸುವಾಗ, ಆಮೆಯ ಮುಖವು ಧರಿಸಿದವರ ಕಡೆಗೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಆಮೆಯ ಮುಖವು ವಿರುದ್ಧ ದಿಕ್ಕಿನಲ್ಲಿದ್ದರೆ, ಅದು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ.
8/ 11
ಉಂಗುರವನ್ನು ಬಲಗೈಯ ಮಧ್ಯದ ಬೆರಳಿಗೆ ಅಂದರೆ ಮಧ್ಯದ ಬೆರಳಿಗೆ ಅಥವಾ ಅದರ ಜೊತೆಗಿನ ತೋರು ಬೆರಳಿಗೆ ಧರಿಸಬೇಕು.
9/ 11
ಬೆಳ್ಳಿಯ ಉಂಗುರವನ್ನು ಮಾತ್ರ ಧರಿಸಬೇಕು. ಆಮೆಯ ಹಿಂಭಾಗದ ಬದಿಯಲ್ಲಿ ಶ್ರೀ ಎಂದು ಬರೆದಿರಬೇಕು
10/ 11
ಕೆಲವು ಕಾರಣಗಳಿಂದ ಉಂಗುರವನ್ನು ತೆಗೆಯಬೇಕಾದರೆ, ಅದನ್ನು ತೆಗೆದು ಲಕ್ಷ್ಮಿ ದೇವಿಯ ಪಾದದ ಬಳಿ ಇರಿಸಬೇಕು. ಒಮ್ಮೆ ಉಂಗುರ ತೆಗೆದ ನಂತರ ಮತ್ತೊಮ್ಮೆ ಧರಿಸಬೇಕು ಎಂದರೆ ಹಾಲು ತುಂಬಿದ ಪಾತ್ರೆಯಲ್ಲಿ ಹಾಕಿ ಲಕ್ಷ್ಮಿ ದೇವಿಯ ಪಾದ ಮುಟ್ಟಿಸಿ ನಂತರವೇ ಧರಿಸಬೇಕು.
11/ 11
ಕರ್ಕಾಟಕ, ಮೇಷ, ವೃಶ್ಚಿಕ ಮತ್ತು ಮೀನ ರಾಶಿಯ ಜನರು ಜ್ಯೋತಿಷಿಗಳ ಸಲಹೆಯಿಲ್ಲದೆ ಈ ಉಂಗುರವನ್ನು ಧರಿಸಬಾರದು