Tulsi Vastu Tips: ತುಳಸಿಯನ್ನು ಈ ರೀತಿ ಪೂಜೆ ಮಾಡಿದ್ರೆ ಕಷ್ಟ ಅನ್ನೋದು ಬರೋದೇ ಇಲ್ಲ
Tulsi Vastu Tips: ಹಿಂದೂ ಸಂಪ್ರದಾಯಗಳಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವರಂತೆ ಪೂಜಿಸಲಾಗುತ್ತದೆ. ತುಳಸಿ ಕಟ್ಟೆಯನ್ನು ಪುಣ್ಯಕ್ಷೇತ್ರವೆಂದು ಪರಿಗಣಿಸಲಾಗಿದೆ. ಆದರೆ ತುಳಸಿಯ ವಿಚಾರದಲ್ಲಿ ಗೊತ್ತಿಲ್ಲದೆಯೇ ಕೆಲವೊಮ್ಮೆ ನಾವು ತಪ್ಪು ಮಾಡುತ್ತೇವೆ. ಅದು ನಮಗೆ ಸಮಸ್ಯೆ ಉಂಟುಮಾಡುತ್ತದೆ. ಆ ತಪ್ಪುಗಳು ಏನು ಎಂಬುದು ಇಲ್ಲಿದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಮಹತ್ವವಿದೆ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಅನೇಕ ಹಿಂದೂಗಳು ತಮ್ಮ ಮನೆಗಳಲ್ಲಿ ತುಳಸಿ ಗಿಡಕ್ಕೆ ಕಟ್ಟೆ ನಿರ್ಮಿಸಿ ಪೂಜೆ ಮಾಡುತ್ತಾರೆ. ಮಹಿಳೆಯರು ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ ತುಳಸಿ ಗಿಡಕ್ಕೆ ಪೂಜೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.
2/ 9
ಮನೆಯಲ್ಲಿ ನೆಟ್ಟ ತುಳಸಿ ಗಿಡ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಕುಟುಂಬ ಸದಸ್ಯರ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಉತ್ತಮ ಆರೋಗ್ಯಕ್ಕೆ ತುಳಸಿ ಮನೆಯಲ್ಲಿ ಇರಬೇಕು. ಅಲ್ಲದೇ ಆಯುರ್ವೇದದಲ್ಲಿ ಸಹ ತುಳಸಿಗೆ ಮಹತ್ತರವಾದ ಸ್ಥಾನವಿದೆ.
3/ 9
ಆದರೆ ತುಳಸಿಯ ಆರೈಕೆಯಲ್ಲಿ ಕೆಲವು ನಿಯಮಗಳಿವೆ. ತುಳಸಿಯನ್ನು ಮುಟ್ಟುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ತುಳಸಿಯನ್ನು ಮುಟ್ಟಲು ಹಾಗೂ ಅದಕ್ಕೆ ನೀರು ಹಾಕಲು ಸಹ ಒಂದು ನಿಯಮವಿದೆ.
4/ 9
ತುಳಸಿ ಗಿಡಗಳಿಗೆ ರಾತ್ರಿ ನೀರು ಹಾಕಬಾರದು. ಇದಲ್ಲದೆ, ಎಲೆಗಳನ್ನು ಸಂಜೆ ಕತ್ತರಿಸಬಾರದು. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಸಂಜೆ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಹೇಳಲಾಗುತ್ತದೆ.
5/ 9
ಕೊಳಕು ಕೈಗಳಿಂದ ತುಳಸಿ ಗಿಡವನ್ನು ಮುಟ್ಟಬೇಡಿ. ನಿಮ್ಮ ಕೈಗಳನ್ನು ತೊಳೆದ ನಂತರವೇ ತುಳಸಿ ಗಿಡವನ್ನು ಮುಟ್ಟುವುದು ಉತ್ತಮ. ತುಳಸಿ ಪೂಜೆಯನ್ನು ಮಾಡಲು ಹೋದರೆ, ಸ್ನಾನದ ನಂತರವೇ ಅದನ್ನು ಮಾಡಬೇಕು.
6/ 9
ಗುರುವಾರದಂದು ತುಳಸಿಯನ್ನು ಮನೆಗೆ ತಂದರೆ ಶುಭ. ಗುರುವಾರದಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ತುಳಸಿಯು ವಿಷ್ಣುವಿನ ಪ್ರಿಯವಾದ ವಸ್ತು. ಹಾಗಾಗಿ ಗುರುವಾರ ತುಳಸಿಯನ್ನು ಮನೆಗೆ ತಂದರೆ ಅದೃಷ್ಟ ಬರುತ್ತದೆ.
7/ 9
ಪ್ಲಾಸ್ಟಿಕ್ ಪಾತ್ರೆಯಲ್ಲಿ ತುಳಸಿ ಗಿಡ ನೆಡುವುದು ಒಳ್ಳೆಯದಲ್ಲ. ವಾಸ್ತು ಪ್ರಕಾರ, ತುಳಸಿ ಗಿಡವನ್ನು ಮಣ್ಣಿನ ಕುಂಡದಲ್ಲಿ ಮಾತ್ರ ನೆಡಬೇಕು. ಅರಿಶಿನ ಮತ್ತು ನಿಂಬೆ ರಸದ ಮಿಶ್ರಣದಿಂದ ಈ ಮಡಕೆಯ ಮೇಲೆ ಶ್ರೀಕೃಷ್ಣನ ಹೆಸರನ್ನು ಬರೆಯುವುದು ತುಂಬಾ ಮಂಗಳಕರವೆನ್ನಲಾಗುತ್ತದೆ.
8/ 9
ಶಿವ ಮತ್ತು ಗಣೇಶನನ್ನು ತುಳಸಿ ಎಲೆಗಳಿಂದ ಪೂಜಿಸಬಾರದು ಎಂಬುದು ಒಂದು ನಂಬಿಕೆ. ತುಳಸಿ ಎಲೆಗಳನ್ನು ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಬಹುದು. ಈ ಎರಡು ದೇವರನ್ನು ತುಳಸಿ ಎಲೆಗಳಿಂದ ಪೂಜಿಸಿದರೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಮತ್ತು ಮನೆಯಲ್ಲಿ ಸುಖ-ಸಂತೋಷ ತುಂಬಿ ಹರಿಯುತ್ತದೆ ಎಂಬ ನಂಬಿಕೆ ಇದೆ
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)