Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

Shivamogga Airport Vastu: ಶಿವಮೊಗ್ಗ ಜನರ ಬಹುವರ್ಷಗಳ ಕನಸು ಇಂದು ಸಾಕಾರಗೊಂಡಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿದ್ದು, ಜನರ ಸಂತೋಷಕ್ಕೆ ಕಾರಣವಾಗಿದೆ. ಆದರೆ ಈ ವಿಮಾನ ನಿಲ್ದಾಣ ಕಮಲದ ಹೂವಿನ ಆಕಾರದಲ್ಲಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಹಿಂದೆ ವಾಸ್ತು ಕಾರಣ ಎಂದೂ ಸಹ ಹೇಳಲಾಗುತ್ತಿದೆ. ಹಾಗಾದ್ರೆ ಇದರ ಗುಟ್ಟೇನು ಎಂಬುದು ಇಲ್ಲಿದೆ.

First published:

  • 18

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    ಸುಮಾರು ವರ್ಷಗಳಿಂದ ವಿಮಾನ ನಿಲ್ದಾಣದ ಕನಸು ಕಟ್ಟಿದ್ದ ಶಿವಮೊಗ್ಗ ಜನತೆಗೆ ಇಂದು ಸ್ಮರಣೀಯ ದಿನ. ಅಂತೂ-ಇಂತೂ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಆದರೆ ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಹಲವಾರು ಜನರು ಕಮಲದ ಆಕಾರದಲ್ಲಿ ಇರುವುದರ ಬಗ್ಗೆ ಕಿಡಿಕಾರಿದ್ದರು.

    MORE
    GALLERIES

  • 28

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    ಬಿಜೆಪಿ ಸರ್ಕಾರದ ಸಮಯದಲ್ಲಿ ಈ ನಿಲ್ದಾಣ ನಿರ್ಮಾಣವಾಗಿರುವುದರಿಂದ, ಕಮಲದ ಆಕಾರದಲ್ಲಿ ಕಟ್ಟಿದ್ದಾರೆ ಎಂದು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ ಇದು ಯಾವುದೇ ಪಕ್ಷದ ಚಿಹ್ನೆ ಅಲ್ಲ, ಇದರ ಹಿಂದೆ ವಾಸ್ತುಶಾಸ್ತ್ರವಿದೆ ಎನ್ನಲಾಗುತ್ತಿದೆ.

    MORE
    GALLERIES

  • 38

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    ಹೌದು, ಬಿಜೆಪಿ ಕಮಲದ ಹೂವನ್ನು ತನ್ನ ಪಕ್ಷದ ಚಿಹ್ನೆ ಮಾಡಿಕೊಳ್ಳುವುದಕ್ಕೂ ಮೊದಲು ಇದು ಲಕ್ಷ್ಮಿ ದೇವಿಯ ಸಂಕೇತ. ನೀವು ಸಾಮಾನ್ಯವಾಗಿ ಗಮನಿಸರಬಹುದು, ಲಕ್ಷ್ಮಿ ಯಾವಾಗಲೂ ತನ್ನ ಕೈಯಲ್ಲಿ ಕಮಲದ ಹೂವನ್ನು ಹಿಡಿದುಕೊಂಡಿರುತ್ತಾರೆ. ಹಾಗಾಗಿ ಈ ಕಮಲ ಸಂಪತ್ತು ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳಿದರೆ ತಪ್ಪಲ್ಲ.

    MORE
    GALLERIES

  • 48

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    ಇಷ್ಟೇ ಅಲ್ಲದೇ ಈ ಕಮಲದ ಹೂವು ಶುದ್ಧ ಹಾಗೂ ನಿಸ್ವಾರ್ಥ ಭಾವನೆ ಎನ್ನುವ ಅರ್ಥವನ್ನು ಸಹ ಹೊಂದಿದೆ. ಇದರ ಜೊತೆಗೆ ವಾಸ್ತು ಪ್ರಕಾರ ಸಹ ಕಮಲದ ಆಕಾರದಲ್ಲಿದ್ದರೆ ಆಯಸ್ಸು,ಆರೋಗ್ಯ, ಸಕಲ ಸಮೃದ್ಧಿಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 58

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    ಇನ್ನು ಈ ಕಮಲದ ಹೂವು ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರ ಪ್ರಕಾರ ಬಹಳ ಪವಿತ್ರವಾದ ಸ್ಥಾನವನ್ನು ಹೊಂದಿದೆ. ಕಮಲದ ಹೂವು ನೆಗೆಟಿವ್ ಎನರ್ಜಿಯನ್ನು ದೂರ ಮಾಡಿ, ಪಾಸಿಟಿವ್ ಎನರ್ಜಿ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

    MORE
    GALLERIES

  • 68

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    ಯಾವುದೇ ಸ್ಥಳವಾದರೂ ವಾಸ್ತು ಪ್ರಕಾರ ಇದ್ದರೆ ಅದರಿಂದ ಯಶಸ್ಸು ಸಿಗುತ್ತದೆ. ಅದರಲ್ಲೂ ವಿಮಾನ ನಿಲ್ದಾಣದಲ್ಲಿ ಬಹಳಷ್ಟು ಜನ ದೊಡ್ಡ ಆಸೆ ಹೊತ್ತು ಪ್ರಯಾಣ ಮಾಡುವವರಿರುತ್ತಾರೆ. ಈ ದೃಷ್ಟಿಯಲ್ಲಿ ಈ ಕಮಲದ ಆಕಾರ ಯಶಸ್ಸು ಪಡೆಯಲು ಸಹಾಯ ಮಾಡುತ್ತದೆ ಎನ್ನಬಹುದು.

    MORE
    GALLERIES

  • 78

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    ಹಾಗೆಯೇ, ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ತಡೆಯಲು ವಾಸ್ತು ದೃಷ್ಟಿಯಿಂದ ಈ ಕಮಲದ ಆಕಾರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತು ಸಹ ಕೇಳಿ ಬಂದಿದೆ. ಒಟ್ಟಾರೆಯಾಗಿ ಈ ಕಮಲದ ಆಕಾರದ ಹಿಂದೆ ವಾಸ್ತು ಅಡಗಿದೆ.

    MORE
    GALLERIES

  • 88

    Shivamogga Airport: ಶಿವಮೊಗ್ಗ ಏರ್​ಪೋರ್ಟ್​​ ಕಮಲದ ಆಕಾರದ ಹಿಂದಿದೆ ಈ ವಾಸ್ತು ಸೀಕ್ರೆಟ್​

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES