Vastu: ಮನೆಯಲ್ಲಿ ಸದಾ ಅತ್ತೆ-ಸೊಸೆ ಜಗಳವೇ; ಅದಕ್ಕೆ ಕಾರಣ ಈ ವಾಸ್ತು ದೋಷವಂತೆ!
ಮನೆಯಲ್ಲಿ ಅತ್ತೆ ಸೊಸೆ (in laws) ಮುನಿಸು ಮನೆ ಮಂದಿಯ ನೆಮ್ಮದಿಯನ್ನು ಹಾಳು ಮಾಡುವುದು ಸುಳ್ಳಲ್ಲ. ಅತ್ತೆ ಸೊಸೆ ಜಗಳ ಬಹುತೇಕರ ಮನೆಯಲ್ಲಿ ಬಗೆಹರಿಯದ ಸಮಸ್ಯೆ ಆಗಿರುತ್ತದೆ. ಅತ್ತೆ ಸೊಸೆ ನಡುವೆ ಈ ರೀತಿ ಜಗಳಕ್ಕೆ ಕಾರಣ ಅವರ ನಡುವಿನ ಹೊಂದಾಣಿಕೆ ಜೊತೆಗೆ ವಾಸ್ತು ಸಮಸ್ಯೆಯೂ ಆಗಿದೆ. ಅಚ್ಚರಿ ಆದರೂ ಹೌದು. ಮನೆಯಲ್ಲಿನ ವಾಸ್ತು ದೋಷದಿಂದ ಸಂಬಂಧಗಳು ಹದಗೆಡುತ್ತದೆ
ವಾಸ್ತು ಶಾಸ್ತ್ರ ಪ್ರಕಾರ ಗಂಧದ ಮೂರ್ತಿಗಳನ್ನು ಮನೆಯಲ್ಲಿ ಎಲ್ಲರಿಗೂ ಕಾಣುವಂತೆ ಇಡಬೇಕು. ಸುಗಂಧ ಸೂಸುವ ಗಂಧದ ಪರಿಮಳ ಮನೆಯ ತುಂಬೆಲ್ಲ ಹರಡಬೇಕು, ಇದರಿಂದ ಅತ್ತೆ ಮತ್ತು ಸೊಸೆಯ ಕೋಪದ ನುಡಿಗಳು ಕಡಿಮೆ ಆಗಲಿದೆ.
2/ 5
ಅಡುಗೆ ಮನೆಯ ಅಧಿಪತ್ಯಕ್ಕಾಗಿ ಅತ್ತೆ-ಸೊಸೆ ನಡುವೆ ಕಾದಾಟ ಮುಂದುವರೆಯುತ್ತದೆ. ಈ ಕಾರಣದಿಂದ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಯ ಬಣ್ಣದ ಬಗ್ಗೆ ಎಚ್ಚರವಹಿಸುವಂತೆ ತಿಳಿಸಿದೆ. ಬಹುತೇಕ ಸಮಯ ಈ ಸ್ಥಳದಲ್ಲಿ ಅತ್ತೆ-ಸೊಸೆ ಸಮಯ ಕಳೆಯುವುದರೊಂದ ಅಲ್ಲಿ ಸೌಮ್ಯವಾದ ತಿಳಿ ಬಣ್ಣಗಳನ್ನು ಬಳಸಬೇಕು.
3/ 5
ಅತ್ತೆ ಸೊಸೆ ನಡುವೆ ಜಗಳ ವಾದರೂ ಅವರ ನಡುವೆ ಮಧುರ ಬಾಂಧವ್ಯ ಇರುತ್ತದೆ. ಇದೇ ಕಾರಣಕ್ಕೆ ಇಬ್ಬರು ಅನ್ಯೋನ್ಯವಾಗಿರುವ ಫೋಟೋವನ್ನು ಇಬ್ಬರ ಕೋಣೆಯಲ್ಲಿ ಇಡಬೇಕು. ಇದರಿಂದ ಇಬ್ಬರ ಬಾಂಧವ್ಯ ವೃದ್ಧಿಯಾಗುತ್ತದೆ.
4/ 5
ಮನೆಯಲ್ಲಿ ಕಸದ ಪುಟ್ಟಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಹೆಚ್ಚುತ್ತದೆ. ಈ ಹಿನ್ನಲೆ ಈ ಮೂಲೆಯನ್ನು ಶುಚಿಯಾಗಿ ಇಡಬೇಕು.
5/ 5
ಇನ್ನು ಅತ್ತೆ ಕೋಣೆ ನೈರುತ್ಯ ದಿಕ್ಕಿನಲ್ಲಿ ಸೊಸೆ ಕೋಣೆ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)