Vasant Panchami 2023: ವಸಂತ ಪಂಚಮಿ ಯಾವಾಗ? ಪೂಜಾ-ವಿಧಿ ವಿಧಾನ ಹೇಗೆ? ಇಲ್ಲಿದೆ ವಿವರ
Vasant Panchami 2023: ಮಾಘ ಮಾಸದಲ್ಲಿ ಬರುವ ಪ್ರಮುಖ ಆಚರಣೆ ಎಂದರೆ ಅದು ವಸಂತ ಪಂಚಮಿ. ಇದು ಭಾರತದಲ್ಲಿ ವಸಂತ ಋತುವಿನ ಆರಂಭದ ಸೂಚನೆ ಎನ್ನಬಹುದು. ಈ ವರ್ಷ ವಸಂತ ಪಂಚಮಿ ಯಾವಾಗ ಬಂದಿದೆ ಹಾಗೂ ಇದರ ಆಚರಣೆಯ ವಿಧಿ-ವಿಧಾನ ಹೇಗೆ ಎಂಬುದು ಇಲ್ಲಿದೆ.
ವಸಂತ ಪಂಚಮಿಗೆ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ದಿನ ಜ್ಞಾನದ ಅಧಿದೇವತೆ ಸರಸ್ವತಿಯನ್ನು ಪೂಜೆ ಮಾಡಲಾಗುತ್ತದೆ. ಈ ಹಬ್ಬವನ್ನು ಮಾಘ ಮಾಸದ ಶುಕ್ಲ ಪಕ್ಷದ 5ನೇ ದಿನ ಆಚರಿಸಲಾಗುತ್ತದೆ.
2/ 8
ವಸಂತ ಪಂಚಮಿಯನ್ನು ಬಸಂತ ಪಂಚಮಿ ಎಂದೂ ಸಹ ಕರೆಯಲಾಗುತ್ತದೆ. ಇದನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಗಾಳಿಪಟ ಹಬ್ಬ ಆಚರಿಸಿದರೆ ಇನ್ನೂ ಕೆಲವೆಡೆ ಮಲ್ಲಿಗೆಯನ್ನು ಮುಡಿದು ವಿಭಿನ್ನವಾಗಿ ತಯಾರಾಗಿ ಸಂಭ್ರಮಿಸುತ್ತಾರೆ.
3/ 8
ಸಂಪ್ರದಾಯದ ಪ್ರಕಾರ, ವಸಂತ ಪಂಚಮಿಯನ್ನು ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ 25 ಜನವರಿ 2023ರಂದು ಈ ಬಾರಿ ಆಚರಿಸಲಾಗುತ್ತಿದೆ. ಈ ವರ್ಷ ಪಂಚಮಿ ತಿಥಿ ಮಧ್ಯಾಹ್ನ 12.34ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ 26 ಜನವರಿಯಂದು ಬೆಳಗ್ಗೆ 10.38ಕ್ಕೆ ಮುಗಿಯುತ್ತದೆ..
4/ 8
ವಸಂತ ಪಂಚಮಿ ಪೂಜೆ ಮುಹೂರ್ತ 26 ಜನವರಿ 07:07 am - 12:35 pm ಆಗಿದ್ದು, ಈ ದಿನ ಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ವಿಶೇಷವಾಗಿ ದೇವರಿಗೆ ಹಳದಿ ಬಟ್ಟೆ, ಹಳದಿ ಹೂವುಗಳು, ಅಕ್ಷತೆ, ಧೂಪ, ದೀಪಗಳನ್ನು ಅರ್ಪಿಸಲಾಗುತ್ತದೆ.
5/ 8
ಈ ದಿನ ಹಳದಿ ವಸ್ತ್ರಕ್ಕೆ ಬಹಳ ಮಹತ್ವವಿದೆ. ಪುರಾಣಗಳ ಪ್ರಕಾರ ತಾಯಿ ಸರಸ್ವತಿಗೆ ಹಳದಿ ಬಣ್ಣ ಎಂದರೆ ಬಹಳ ಶ್ರೇಷ್ಠವಂತೆ. ಹಾಗಾಗಿ ಈ ದಿನ ಹಳದಿ ವಸ್ತ್ರಗಳನ್ನು ದಾನ ಮಾಡುವುದು, ಹಳದಿ ಬಟ್ಟೆ ಧರಿಸುವುದರಿಂದ ಒಳ್ಳೆಯದಾಗುತ್ತದೆ.
6/ 8
ಅಲ್ಲದೇ ಹಳದಿ ಬಟ್ಟೆ ಪಾಸಿಟಿವ್ ಎನರ್ಜಿಯ ಸಂಕೇತವಾಗಿದ್ದು, ಇದನ್ನು ಧರಿಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಿರುತ್ತದೆ ಎನ್ನುವ ನಂಬಿಕೆ ಇದೆ.
7/ 8
ಇನ್ನು ಈ ಹಬ್ಬವನ್ನು ರಾಶಿಗನುಗುಣವಾಗಿ ಆಚರಣೆ ಮಾಡುವುದರಿಂದ ಸಹ ಹೆಚ್ಚಿನ ಲಾಭ ಪಡೆಯಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)