Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

Varuthini Ekadashi 2023: ಏಕಾದಶಿ ಉಪವಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ಚಂದ್ರನಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಹಾಗೆಯೇ ಇಂದು ವರುಧಿನಿ ಏಕಾದಶಿಯಾಗಿದ್ದು, ಈ ದಿನದ ಮಹತ್ವ ಆಚರಣೆಯ ವಿಧಿ-ವಿಧಾನ ಇಲ್ಲಿದೆ.

First published:

  • 18

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ವರುತಿನಿ ಅಥವಾ ವರುಧಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿ ವರುತಿನಿ ಏಕಾದಶಿಯನ್ನು 16 ಏಪ್ರಿಲ್ 2023 ರಂದು ಆಚರಿಸಲಾಗುತ್ತದೆ.

    MORE
    GALLERIES

  • 28

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    ಏಕಾದಶಿ ಉಪವಾಸವು ಮನಸ್ಸು ಮತ್ತು ದೇಹ ಎರಡರ ಮೇಲೆ ನೇರ ಪರಿಣಾಮ ಬೀರುವುದರಿಂದ ಗ್ರಹಗಳ ಪ್ರಭಾವವನ್ನು ಸಹ ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನ ವಿಷ್ಣುವಿನ ಪೂಜೆ ಮಾಡಿ, ಉಪವಾಸ ಮಾಡಲಾಗುತ್ತದೆ.

    MORE
    GALLERIES

  • 38

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    ಏಕಾದಶಿ ಪ್ರಾರಂಭ- ಏಪ್ರಿಲ್ 15, 2023 ರಂದು ರಾತ್ರಿ 08:45 ಕ್ಕೆ, ಏಕಾದಶಿ ಕೊನೆಯಾಗುವುದು- ಏಪ್ರಿಲ್ 16, 2023 ರಂದು ಸಂಜೆ 06:14 ಕ್ಕೆ. ಈ ಬಾರಿ ವರುತಿನಿ ಏಕಾದಶಿಯ ದಿನದಂದು ತ್ರಿಪುಷ್ಕರ ಯೋಗವು ರೂಪುಗೊಳ್ಳಲಿದೆ ಎನ್ನಲಾಗುತ್ತಿದೆ.

    MORE
    GALLERIES

  • 48

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    ಈ ಯೋಗವು ಏಪ್ರಿಲ್ 17 ರಂದು ಬೆಳಗ್ಗೆ 4:07 ರಿಂದ ಏಪ್ರಿಲ್ 17 ರ ಬೆಳಗ್ಗೆ 5:54 ರವರೆಗೆ ಇರುತ್ತದೆ. ವರುತಿನಿ ಏಕಾದಶಿಯ ದಿನದಂದು ಈ ಯೋಗದ ರಚನೆಯು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಉಪವಾಸ ಮಾಡುವುದು ತುಂಬಾ ಒಳ್ಳೆಯದು.

    MORE
    GALLERIES

  • 58

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    ಪ್ರೀತಿ, ಸಂತೋಷ ಮತ್ತು ಐಶ್ವರ್ಯಕ್ಕಾಗಿ ವರುತಿನಿ ಏಕಾದಶಿಯಂದು ಮಧುರಾಷ್ಟಕವನ್ನು ಪಠಿಸಬೇಕು, ಹಾಗೆಯೇ, ಅತ್ಯಂತ ಕಷ್ಟಕರವಾದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಗಜೇಂದ್ರ ಮೋಕ್ಷವನ್ನು ಪಠಿಸಬೇಕು ಎನ್ನುತ್ತಾರೆ ಹಿರಿಯರು. ಹಾಗೆಯೇ ಈ ದಿನ ತಪ್ಪದೇ ವಿಷ್ಣು ಸಹಸ್ತ್ರನಾಮವನ್ನು ಪಠಿಸಬೇಕು.

    MORE
    GALLERIES

  • 68

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    ಕೇವಲ ಇದೊಂದೇ ಅಲ್ಲ ಪ್ರತಿ ಏಕಾದಶಿಯು ತನ್ನದೇ ಆದ ವಿಭಿನ್ನ ವೈಭವವನ್ನು ಹೊಂದಿದೆ. ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯು ಯಾವಾಗಲೂ ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಇದೆ,

    MORE
    GALLERIES

  • 78

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    ಇನ್ನು ಈ ಏಕಾದಶಿಯಂದು ಅಕ್ಕಿ ಹಾಗೂ ಬೆಳೆಕಾಳುಗಳನ್ನು ದಾನ ಮಾಡಬೇಕು. ಅಲ್ಲದೇ, ಈ ದಿನ ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡುವುದರಿಂದ ನಿಮ್ಮ ಪಾಪಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 88

    Varuthini Ekadashi 2023: ಈ ದಿನ ಉಪವಾಸ ಮಾಡಿ, ದಾನ ಕೊಟ್ರೆ 7 ಜನ್ಮದ ಪಾಪ ಪರಿಹಾರವಾಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES