Vaikuntha Ekadashi 2023: ವೈಕುಂಠ ಏಕಾದಶಿಯ ಮುಹೂರ್ತ, ಪೂಜಾ ವಿಧಾನ ಇಲ್ಲಿದೆ
Vaikuntha Ekadashi 2023: ವೈಕುಂಠ ಏಕಾದಶಿಯು ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಇದು ಧನುರ್ ಸೌರ ಮಾಸದಲ್ಲಿ ಬರುತ್ತದೆ. ಈ ದಿನ ಜನರು ವಿವಿಧ ರೀತಿಯಲ್ಲಿ ದೇವರ ಆರಾಧನೆ ಮಾಡುತ್ತದೆ. 2023ರಲ್ಲಿ ವೈಕುಂಠ ಏಕಾದಶಿ ಯಾವ ದಿನ ಬಂದಿದೆ, ಮುಹೂರ್ತವೇನು ಹಾಗೂ ಪೂಜಾ ವಿಧಿ-ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.
ವೈಕುಂಠ ಏಕಾದಶಿಯಂದು ಭಗವಾನ್ ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ಈ ದಿನ ವೈಕುಂಠದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಇದೆ. ವೈಕುಂಠ ಏಕಾದಶಿಯಂದು ವಿಷ್ಣುವಿನ ಸ್ಮರಣೆ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎನ್ನಲಾಗುತ್ತದೆ.
2/ 8
ಈ ದಿನ ವಿವಿಧ ದೇವಾಲಯಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಭಜನೆ, ಇಡೀ ದಿನ ವಿವಿಧ ಪೂಜೆಗಳನ್ನು ಮಾಡಲಾಗುತ್ತದೆ. ಭಕ್ತಾಧಿಗಳು ಸಹ ದೇವರ ಕೃಪೆಗೆ ಪಾತ್ರರಾಗಲು ಉಪವಾಸ ಇತ್ಯಾದಿಗಳನ್ನು ಮಾಡುತ್ತಾರೆ.
3/ 8
ವೈದಿಕ ಪರಂಪರೆಯ ಪ್ರಕಾರ ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದರಿಂದ ಹಲವಾರು ರೀತಿಯಲ್ಲಿ ನಮಗೆ ಒಳ್ಳೆಯದಾಗುತ್ತದೆ. ಏಕಾದಶಿಯಂದು ಪೂರ್ತಿ ದಿನ ಉಪವಾಸ ಮಾಡುವುದರ ಜೊತೆಗೆ ದ್ವಾದಶಿಯಂದು ಸಹ ಮಧ್ಯಾಹ್ನದ ವರೆಗೆ ಉಪವಾಸ ಮಾಡಬಹುದು.
4/ 8
ಅಲ್ಲದೇ ಈ ದಿನ ಹರಿಯು ತನ್ನ ಭಕ್ತರಿಗೆ ದರ್ಶನ ಕೊಡುವ ದಿನ ಎನ್ನಲಾಗುತ್ತದೆ. ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಪಡೆದು, ವೈಕುಂಠದ ಬಾಗಿಲಿನಿಂದ ಹೊರ ಬಂದರೆ 7 ಜನ್ಮದಲ್ಲಿ ಮಾಡಿದ ಪಾಪಾಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.
5/ 8
ಇಷ್ಟೇ ಅಲ್ಲದೇ ಈ ದಿನ ಎಣ್ಣೆಯ ಸ್ನಾನ ಮಾಡಿ, ಉಪವಾಸ ವ್ರತ ಆಚರಿಸುವುದರ ಜೊತೆಗೆ ದೇವಸ್ಥಾನಕ್ಕೆ ಹೋಗಬೇಕು. ಅಲ್ಲಿ ದೇವರ ಉತ್ಸವ ಮೂರ್ತಿಗೆ ತಲೆಯನ್ನು ತಾಗಿಸಿ, ನಂತರ ವೈಕುಂಠ ದ್ವಾರದಿಂದ ಹೊರ ಬಂದರೆ ಮೋಕ್ಷ ಸಿಗುತ್ತದೆ,
6/ 8
2023ರಲ್ಲಿ ವೈಕುಂಠ ಏಕಾದಶಿಯು ಜನವರಿ 2 1023ರಂದು ಬಂದಿದೆ. ಏಕಾದಶಿ ತಿಥಿಯು ಜನವರಿ 1ರ ರಾತ್ರಿ 7 ಗಂಟೆ 10 ನಿಮಿಷಕ್ಕೆ ಆರಂಭವಾಗಿ, ಜನವರಿ 2 ರಾತ್ರಿ 8.25ಕ್ಕೆ ಮುಕ್ತಾಯವಾಗುತ್ತದೆ.
7/ 8
ಈ ಏಕಾದಶಿಯನ್ನು ಸ್ವರ್ಗ ವಠಿಲ ಏಕಾದಶಿ ಎಂದು ಸಹ ಕರೆಯುತ್ತಾರೆ. ನಂಬಿಕೆಯ ಪ್ರಕಾರ ಈ ದಿನ ದಕ್ಷಿಣಾಯನದಲ್ಲಿ ನಿದ್ರಿಸುವ ವಿಷ್ಣು ಉತ್ತರಾಯಣದಲ್ಲಿ ಏಳುತ್ತಾನೆ. ಅಲ್ಲದೇ, ಆದಿನ ಮೂರು ಕೋಟಿ ದೇವರಿಗೆ ದರ್ಶನ ನೀಡುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಇದ್ದನ್ನು ಮುಕ್ಕೋಟಿ ಏಕಾದಶಿ ಎಂದು ಸಹ ಕರೆಯುತ್ತಾರೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)