Vaikunta Ekadasi 2023: ಇಸ್ಕಾನ್ನಲ್ಲಿ ಅದ್ಧೂರಿ ವೈಕುಂಠ ಏಕಾದಶಿ, ಫೋಟೋಗಳಲ್ಲಿ ನೋಡಿ
Vaikunta Ekadasi 2023: ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ. ಹೀಗಾಗಿ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದಿದ್ದು, ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ಸಹ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಅಲ್ಲಿನ ಕೆಲ ಸುಂದರ ಫೋಟೋಗಳು ಇಲ್ಲಿದೆ ನೋಡಿ.
ಬೆಂಗಳೂರಿನ ಇಸ್ಕಾನ್ ನ ಹರೇ ಕೃಷ್ಣ ಬೆಟ್ಟ ಮತ್ತು ವೈಕುಂಠ ಬೆಟ್ಟದಲ್ಲಿ ವೈಕುಂಠ ಏಕಾದಶಿಯನ್ನು ಅತ್ಯಂತ ವೈಭವದಿಂದ ಆಚರಣೆ ಮಾಡಲಾಗಿದ್ದು, ಇತ್ತೀಚೆಗೆ ಉದ್ಘಾಟನೆಗೊಂಡ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದಲ್ಲಿ ಮೊದಲ ವೈಕುಂಠ ಏಕಾದಶಿ ಆಚರಿಸಲಾಗಿದೆ.
2/ 7
ಬೆಳಗ್ಗೆ 3 ಗಂಟೆಗೆ ಎರಡೂ ದೇವಾಲಯಗಳಲ್ಲಿ ದೇವರಿಗೆ ಸುಪ್ರಭಾತ ಸೇವೆಯೊಂದಿಗೆ ಆಚರಣೆಗಳನ್ನು ಆರಂಭಿಸಲಾಗಿದ್ದು, ನಂತರ ಹಾಲು, ಹಣ್ಣಿನ ರಸಗಳು ಮತ್ತು ನೈಸರ್ಗಿಕವಾಗಿ ಪರಿಮಳಯುಕ್ತ ನೀರಿನಿಂದ ಅಭಿಷೇಕ ಮಾಡಲಾಗಿದೆ.
3/ 7
ರಾಧಾ ಮತ್ತು ಕೃಷ್ಣನನ್ನ ಲಕ್ಷ್ಮೀ ನಾರಾಯಣ ಅಲಂಕಾರದಲ್ಲಿ ಅಲಂಕರ ಮಾಡಲಾಗಿತ್ತು, ಅಲ್ಲದೇ ದೇವಾಲಯವನ್ನು ವಿವಿಧ ರೀತಿಯ ಹೂಗಳಿಂದ ಸಿಂಗಾರ ಮಾಡಲಾಗಿತ್ತು. ವೈಕುಂಠ ದ್ವಾರದ ಮೇಲೆ ಆಸೀನರಾಗಿದ್ದ ವಿಷ್ಣು ದರ್ಶನಕ್ಕೆ ಭಕ್ತಾರು ಸಾವಿರ ಸಂಖ್ಯೆಯಲ್ಲಿ ಸೇರಿದ್ದರು.
4/ 7
ಕಲ್ಯಾಣೋತ್ಸವ ಹಾಗೂ ಶ್ರೀ ಕೃಷ್ಣನ ಪತ್ನಿಯರಾದ ರುಕ್ಮಿಣಿ ಮತ್ತು ಸತ್ಯಭಾಮಾ ಅವರ ದೈವಿಕ ವಿವಾಹ ಕಾರ್ಯಕ್ರಮವನ್ನು ಸಹ ಇಂದು ಮಾಡಲಾಗಿದ್ದು, ದಿನವಿಡೀ ಶ್ರೀಕೃಷ್ಣನ 1 ಲಕ್ಷ ನಾಮಸ್ಮರಣೆಯೊಂದಿಗೆ ಲಕ್ಷಾರ್ಚನೆ ಸೇವೆಯನ್ನೂ ಸಹ ಮಾಡಲಾಗಿದೆ.
5/ 7
ಹಾಗೆಯೇ ಈ ದಿನ ರಾಜಲಕ್ಷ್ಮಿ ಪದ್ಮಾವತಿ ದೇವಿಗೆ ಕುಂಕುಮಾರ್ಚನೆ ಸೇವೆ ಮಾಡಲಾಗಿದ್ದು, ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದ್ದು, ಎರಡೂ ದೇವಸ್ಥಾನಗಳಲ್ಲಿ 70000ಕ್ಕೂ ಹೆಚ್ಚು ಲಡ್ಡುಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ.
6/ 7
ಏಕಾದಶಿಯಂದು ಉಪವಾಸವನ್ನು ಮಾಡಿ, ದೇವರನ್ನು ಪೂಜಿಸುವುದರಿಂದ ಅನೇಕ ಜನ್ಮಗಳ ಪಾಪಕ್ಕೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಹಾಗೆಯೇ ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿ ದೇವರ ದರ್ಶನ ಮಾಡಿದರೆ ಜೀವನದ ಕಷ್ಟಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಇದೆ.
7/ 7
ವೈಕುಂಠ ಏಕಾದಶಿಯ ದಿನ ಬೆಳಗ್ಗೆ ದೇವರ ದರ್ಶನ ಮಾಡುವುದರಿಂದ ವಿಷ್ಣು ಎಲ್ಲರ ಕಷ್ಟಗಳನ್ನು ಆಲಿಸಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಭಕ್ತಾಧಿಗಳು ಈ ದಿನ ಬೆಳಗ್ಗೆಯಿಂದಲೇ ದೇವರ ದರ್ಶನಕ್ಕೆ ಕಾಯುತ್ತಿರುತ್ತಾರೆ.