Vaikunta Ekadashi 2023: ವೈಕುಂಠ ಏಕಾದಶಿ ದಿನ ಈ ಕೆಲಸ ಮಾಡಿದ್ರೆ ಮೋಕ್ಷ ಗ್ಯಾರಂಟಿ
Vaikunta Ekadashi 2023: ವೈಕುಂಠ ಏಕಾದಶಿಗೆ ಈಗಾಗಲೇ ಭಕ್ತಾಧಿಗಳು ಸಿದ್ಧತೆ ಆರಂಭ ಮಾಡಿಕೊಂಡಿದ್ದಾರೆ. ವೈಕುಂಠ ಏಕಾದಶಿಯು ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಈ ದಿನ ಕೆಲ ಕೆಲಸಗಳನ್ನು ಮಾಡುವುದು ವಿಷ್ಣುವಿನ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ.
ವೈಕುಂಠ ಏಕಾದಶಿಗೆ ಈಗಾಗಲೇ ಭಕ್ತಾಧಿಗಳು ಸಿದ್ಧತೆ ಆರಂಭ ಮಾಡಿಕೊಂಡಿದ್ದಾರೆ. ವೈಕುಂಠ ಏಕಾದಶಿಯು ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಈ ದಿನ ಕೆಲ ಕೆಲಸಗಳನ್ನು ಮಾಡುವುದು ವಿಷ್ಣುವಿನ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ.
2/ 8
ವೈಕುಂಠ ಏಕಾದಶಿಯ ದಿನ ಉಪವಾಸ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನ ಭಕ್ತಾಧಿಗಳು ಬೆಳಗ್ಗೆಯಿಂದ ಉಪವಾಸ ಇದ್ದು, ವಿಷ್ಣುವಿನ ದೇವಸ್ಥಾನದಲ್ಲಿ ವೈಕುಂಠ ದ್ವಾರದ ಮೂಲಕ ಹಾದು ಹೋಗಿ ಆಶೀರ್ವಾದ ಪಡೆಯುತ್ತಾರೆ.
3/ 8
ವಿಷ್ಣು ಮಂತ್ರ ಪಠಿಸಿ: ವೈಕುಂಠ ಏಕಾದಶಿಯಂದು ನೀವು ವಿಷ್ಣುವಿನ ಮಂತ್ರವನ್ನು ಪಠಿಣೆ ಮಾಡಬೇಕು. ಇದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತೀರಿ ಹಾಗೂ ಇಷ್ಟಾರ್ಥಗಳು ಸಿದ್ದವಾಗುತ್ತದೆ.
4/ 8
ಹಳದಿ ಬಟ್ಟೆ: ನೀವು ವೈಕುಂಠ ಏಕಾದಶಿಯ ದಿನ ಹಳದಿ ಬಟ್ಟೆಯನ್ನು ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ವಿಷ್ಣುವಿನ ನೆಚ್ಚಿನ ಬಣ್ಣ ಹಳದಿಯಾಗಿರುವುದರಿಂದ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನಲಾಗುತ್ತದೆ.
5/ 8
ಹಳದಿ ಹೂ ಅರ್ಪಿಸಿ: ಮೊದಲೇ ಹೇಳಿದಂತೆ ವಿಷ್ಣುವಿನ ನೆಚ್ಚಿನ ಬಣ್ಣ ಹಳದಿ ಹಾಗಾಗಿ ದೇವರಿಗೆ ಹಳದಿ ಹೂ ಅರ್ಪಣೆ ಮಾಡಿ. ಸೇವಂತಿಗೆ ಹೂ ಮಾಲೆ ಹೀಗೆ ಒಟ್ಟಾರೆ ಹಳದಿ ಹೂವನ್ನು ಅರ್ಪಣೆ ಮಾಡಿ.
6/ 8
ತುಳಸಿ: ದೇವರಿಗೆ ಹಳದಿ ಹೂವಿನ ಜೊತೆ ತುಳಸಿಯನ್ನು ಸಹ ವಿಷ್ಣುವಿಗೆ ಅರ್ಪಣೆ ಮಾಡಬೇಕು. ಹಾಗೆಯೇ ಪಂಚಾಮೃತ ಅಭಿಷೇಕವನ್ನು ಸಹ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.
7/ 8
ಅರಳಿ ಮರಕ್ಕೆ ಪೂಜೆ ಮಾಡಿ: ವೈಕುಂಠ ಏಕಾದಶಿಯ ದಿನ ಅರಲಿ ಮರದ ಬೇರಿಗೆ ನೀರನ್ನು ಅರ್ಪಣೆ ಮಾಡುವುದರಿಂದ ಆಶೀರ್ವಾದ ;ಸಿಗುತ್ತದೆ ಹಾಗೂ ಕಷ್ಟಗಳು ದೂರವಾಗುತ್ತದೆ ಎನ್ನಲಾಗುತ್ತದೆ. ಶ್ರೀಹರಿ ಅರಳಿ ಮರದಲ್ಲಿ ನೆಲೆಸಿರುತ್ತಾರೆ ಎನ್ನುವ ನಂಬಿಕೆ ಇದೆ.
8/ 8
ದಾನ ಮಾಡಿ: ವೈಕುಂಠ ಏಕಾದಶಿಯಂದು ನೀವು ಹಳದಿ ವಸ್ತುಗಳನ್ನು ದಾನ ಮಾಡುವುದು ಉತ್ತಮ. ಈ ದಿನ ಹಳದಿ ಬೇಳೆ-ಕಾಳುಗಳು, ಹಳದಿ ಬಟ್ಟೆ, ಹಳದಿ ಹೂ ಹೀಗೆ ಒಟ್ಟಾರೆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಅದೃಷ್ಟ ಸಿಗುತ್ತದೆ.