ತಿರುಪತಿಯಲ್ಲಿ Vaikunta Ekadashi ಸಂಭ್ರಮ; 10ದಿನಗಳ ಕಾಲ ತೆರೆಯಲಿದೆ ವೈಕುಂಠ ದ್ವಾರ
ವೈಕುಂಠ ಏಕಾದಶಿ (Vaikunta Ekadashi) ಹಿನ್ನಲೆ ತಿರುಮಲ ತಿರುಪತಿಯಲ್ಲಿ (Tirupati) ಹಬ್ಬದ ಸಂಭ್ರಮ ಕಳೆಕಟ್ಟಿದೆ. ತಿರುಮಲದಲ್ಲಿ ಈಗಾಗಲೇ ಸ್ವರ್ಗವೇ ಧರೆಗಿಳಿದ ಅನುಭವ ಕಂಡು ಬಂದಿದೆ. ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಹೂವಿನ ಅಲಂಕಾರದಿಂದ ದೇವಸ್ಥಾನ ಪ್ರಾಂಗಣಗಳಲ್ಲಿ ಅಲಂಕರಿಸಲಾಗಿದೆ. ಇನ್ನು ಈ ಬಾರಿ ಕೂಡ 10 ದಿನಗಳ ಕಾಲ ಇಲ್ಲಿನ ವೈಕುಂಠ ದ್ವಾರ (Vaikunta Dwara) ತೆರೆದಿದ್ದು, ಭಕ್ತರಿಗೆ ಅವಕಾಶ ನೀಡಲಾಗಿದೆ
ವೈಕುಂಠ ಏಕಾದಶಿ ಎಂದರೆ ತಿರುಪತಿಯಲ್ಲಿ ಎಲ್ಲಿಲ್ಲದ ಸಂಭ್ರಮ. ಈಗಾಗಲೇ ವೈಕುಂಠ ದ್ವಾರದ ನಿರ್ಮಾಣ ಮಾಡಿರುವ ಟಿಟಿಡಿ, ಇದೇ ಮೊದಲ ಬಾರಿ 10 ದಿನಗಳ ಕಾಲ ಈ ದ್ವಾರದ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ.
2/ 5
ಜ. 13 ರಂದು ವೈಕುಂಠ ಏಕಾದಶಿ ಇದ್ದು, ಇಂದು ಮಧ್ಯರಾತ್ರಿ ನಂತರ ವೈಕುಂಠ ದ್ವಾರಗಳು ತೆರೆಯಲಿವೆ. ಜನವರಿ 14 ರಂದು ವೈಕುಂಠದ್ವಾದಶಿ ಕೈಂಕರ್ಯಗಳು ನಡೆಯಲಿವೆ
3/ 5
ಉತ್ತರದಲ್ಲಿ ವೈಕುಂಠ ದ್ವಾರ ನಿರ್ಮಿಸಿದ್ದು, ಭಕ್ತರಿಗೆ ಈ ದ್ವಾರದ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈಕುಂಠ ಏಕಾದಶಿ ದಿನದಂದು ಈ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ
4/ 5
ವೈಕುಂಠ ಏಕಾದಶಿ ಅಂಗವಾಗಿ ತಿರುಪ್ಪವಾಯಿ ಪಾರಾಯಣ ದೇವಾಲಯದಲ್ಲಿ ಹಬ್ಬದ ಸೇವೆ ಆರಂಭವಾಗಲಿದೆ. ಅಭಿಷೇಕ, ತೋಮಲ ಸೇವೆ, ಅರ್ಚನೆ, ಏಕಂಥಂ ಸೇವೆ ನಡೆಯಲಿದೆ.
5/ 5
ಕೋವಿಡ್ ಮಾರ್ಗಸೂಚಿ ಅನುಸಾರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ 10 ದಿನಗಳ ಕಾಲ ಈ ವೈಕುಂಠ ದ್ವಾರ ಪ್ರವೇಶಕ್ಕೆ ಭಕ್ತರಿಗೆ ಟಿಟಿಡಿ ಅವಕಾಶ ಕಲ್ಪಿಸಿದೆ. ಇದಕ್ಕಾಗಿ 10 ಸಾವಿರ ಟಿಕೆಟ್ ನಿಗದಿಸಲಾಗಿದೆ.