ಪ್ರತಿಯೊಂದು ಧರ್ಮದ ಜನರು ತಮ್ಮ ನಂಬಿಕೆ (Believes) ಮತ್ತು ಸಂಪ್ರದಾಯಗಳ (Rituals) ಪ್ರಕಾರ ಉಪವಾಸವನ್ನು (Fasting) ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿಯೂ ಸಹ, ದಿನಗಳು, ವಿಶೇಷ ದಿನ ಹಬ್ಬ ಸೇರಿದಂತೆ ಇತರೆ ಸಮಯದಲ್ಲಿ ಉಪವಾಸದ ಆಚರಣೆ ಮಾಡಲಾಗುವುದು. ಇನ್ನು ಈ ಉಪವಾಸದ ವೇಳೆ ಅನೇಕ ನಿಯಮಗಳು ಇದೆ. ವೈಜ್ಞಾನಿಕ, ಆರೋಗ್ಯ ದೃಷ್ಟಿಯಿಂದಲೂ ಈ ಉಪವಾಸ ಒಳಿತು ಎನ್ನಲಾಗಿದೆ. ಈ ಉಪವಾಸವೆಂಬುದು ತಪಸ್ಸಿನಂತೆ ಆಚರಿಸುವ ಮೂಲಬಲವಾದ ಶಕ್ತಿಯು ಜಾಗೃತಿಗೊಳಿಸಿ, ಒಳಗಿನಿಂದ ಶುದ್ಧರಾಗುವ ಮಾರ್ಗ ಎನ್ನಲಾಗಿದೆ. ಉಪವಾಸ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳದಿದ್ದರೆ, ಉಪವಾಸ ಪಾಲನೆ ಕೂಡ ವಿಫಲವಾಗಬಹುದು. ಹಾಗಾದರೆ ಉಪವಾಸ ಮಾಡುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಅಂಶ ಇಲ್ಲಿದೆ.
ಮೊದಲು ಉಪವಾಸವನ್ನು (Upavas) ಯಾವಾಗ ಮಾಡಬೇಕು, ಯಾವ ಉದ್ಧೇಶಕ್ಕಾಗಿ ಮಾಡಬೇಕು ಎಂಬುದು ಮುಖ್ಯ. ನಿರ್ಣಯವಿಲ್ಲದೆ ಉಪವಾಸವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ
2/ 8
ಉಪವಾಸದ ವೇಳೆ ದೇಹದ ಜೊತೆಗೆ ಮನಸ್ಸಿನ ಸಂಯಮವೂ ಅಗತ್ಯ. ಉಪವಾಸ ಮಾಡುವಾಗ, ಯಾವುದೇ ಇಷ್ಟಪಟ್ಟ ತಿಂಡಿ ಕಂಡೊಡನೆ ಅದನ್ನು ಸ್ವೀಕರಿಸುವ ಮನೋಭಾವ ಬಾರಬಾರದು.
3/ 8
ಉಪವಾಸದ ಸಮಯದಲ್ಲಿ ಲಘುವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಯಾವುದೇ ರೀತಿಯ ತಾಮಸಿಕ ಅಥವಾ ಭಾರೀ ಆಹಾರವನ್ನು ಸ್ವೀಕರಿಸಬಾರದು
4/ 8
ವ್ರತ ಎಂದರೆ ದೇವರಿಗೆ ಸ್ವಲ್ಪ ಸಮಯವನ್ನು ಮೀಸಲಿಡುವುದು. ಆದ್ದರಿಂದ, ಉಪವಾಸದ ಸಮಯದಲ್ಲಿ ದೇವರನ್ನು ಮಾತ್ರ ಸ್ಮರಿಸಿ. ಉಪವಾಸದ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ತಪ್ಪು ಆಲೋಚನೆಗಳನ್ನು ತರಬಾರದು. ಈ ವೇಳೆ ಯಾರನ್ನೂ ಟೀಕಿಸಬಾರದು
5/ 8
ಉಪವಾಸ ಸಮಯದಲ್ಲಿ ಕೋಪಗೊಳ್ಳಬಾರದು, ಕೋಪದಲ್ಲಿ,ನಿಂದನೀಯ ಪದಗಳು ಬಾಯಿಯಿಂದ ಹೊರಬರಬಹುದು, ಇದರಿಂದಾಗಿ ಸಂಪೂರ್ಣ ಉಪವಾಸವು ವಿಫಲಗೊಳ್ಳುತ್ತದೆ.
6/ 8
ಉಪವಾಸದ ಸಮಯದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುವುದು ಬಹಳ ಮುಖ್ಯ . ಮಹಿಳೆಯರು ಋತುಚಕ್ರದ ಸಮಯದಲ್ಲಿ ಉಪವಾಸ ಮಾಡಬಾರದು. ಇದು ದೈಹಿಕ ಮತ್ತು ಮಾನಸಿಕವಾಗಿ ಒಳ್ಳೆಯದಲ್ಲ
7/ 8
ಉಪವಾಸವನ್ನು ಆಚರಿಸುವಾಗ ದೇವರ ಜೊತೆ ಪೂರ್ವಜರನ್ನು ಸ್ಮರಿಸಬೇಕು. ಉಪವಾಸ ಮುಗಿದ ಮೇಲೆ ಉದ್ಯಾಪನ ಮಾಡಬೇಕು. ಉದ್ಯಾಪನ ಮಾಡದೆ ಉಪವಾಸವನ್ನು ಪೂರ್ಣವೆಂದು ಪರಿಗಣಿಸಲಾಗುವುದಿಲ್ಲ
8/ 8
ಅನಾರೋಗ್ಯ, ಗರ್ಭಧಾರಣೆ ಅಥವಾ ಸಾಮರ್ಥ್ಯದ ಕೊರತೆಯ ಸಂದರ್ಭದಲ್ಲಿ ಉಪವಾಸ ಮಾಡಬಾರದು