Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

Ugadi 2023: ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷತೆಗಳಿವೆ, ಆ ದಿನಗಳಲ್ಲಿ ಮಾಡಲೇಬೇಕಾದ ಕೆಲ ಕೆಲಸಗಳಿವೆ ಹಾಗೆಯೇ ಆ ದಿನ ಮಾಡಲೇಬಾರದ ಕೆಲಸಗಳೂ ಇವೆ. ನಮ್ಮ ಹಿರಿಯರು ಹಬ್ಬದ ದಿನ ಏನು ಮಾಡಬೇಕು ಎಂಬುದನ್ನ ಚೆನ್ನಾಗಿ ತಿಳಿಸಿದ್ದಾರೆ. ಇನ್ನು ಯುಗಾದಿ ದಿನ ಯಾವ ತಪ್ಪು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 18

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    ಯುಗಾದಿ ಹಬ್ಬವನ್ನು ಹೊಸವರ್ಷ ಎಂದು ಆಚರಿಸಲಾಗುತ್ತದೆ. ಚೈತ್ರ ಶುದ್ಧ ಪಾಡ್ಯದ ದಿನವನ್ನು ಯುಗಾದಿ ಎಂದು ಆಚರಿಸುತ್ತಾರೆ. ಈ ದಿನ ಬ್ರಹ್ಮ ಸೃಷ್ಟಿಯನ್ನುಆರಂಭಿಸಿದ್ದು ಎನ್ನುವ ನಂಬಿಕೆ ಇದೆ.

    MORE
    GALLERIES

  • 28

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    ಯುಗಾದಿ ಎಂಬ ಹೆಸರು ಕೇಳಿದೊಡನೆಯೇ ಅದೇನೋ ಸಂಭ್ರಮ ಮನೆ ಮಾಡುತ್ತದೆ. . ಪ್ರಕೃತಿಯ ದೃಷ್ಟಿಯಿಂದ, ವಸಂತ ಋತುವು ಚೈತ್ರಶುದ್ಧ ಪಾಡ್ಯಮಿಯಿಂದ ಪ್ರಾರಂಭವಾಗುತ್ತದೆ, ಆಗ ಮರಗಳು ಚಿಗುರಿ ಹೂವುಗಳ ಅರಳುತ್ತವೆ. ಆದುದರಿಂದಲೇ ಯುಗಾದಿಯನ್ನು ಹೊಸತನದ ಆರಂಭ ಎಂದು ಬಣ್ಣಿಸುತ್ತಾರೆ.

    MORE
    GALLERIES

  • 38

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    ಆದರೆ ಹಬ್ಬದ ದಿನ ನಾವು ಬಹಳ ಮುಖ್ಯವಾಗಿ ಕೆಲ ನಿಯಮಗಳನ್ನು ಫಾಲೋ ಮಾಡಬೇಕು. ಹಬ್ಬದ ದಿನ ನಾವು ಮಾಡುವ ತಪ್ಪುಗಳು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಹಾಗೆಯೇ, ಕೆಲ ಕೆಲಸಗಳನ್ನು ಮಾಡುವುದರಿಂದ ನಮ್ಮ ಸಮೃದ್ಧಿ ಹೆಚ್ಚಾಗುತ್ತದೆ.

    MORE
    GALLERIES

  • 48

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    ಸಾಮಾನ್ಯವಾಗಿ ಅನೇಕರು ಬೆಳಗ್ಗೆ 10ಗಂಟೆಯ ತನಕ ಮಲಗುತ್ತಾರೆ. ಆದರೆ ಯುಗಾದಿ ದಿನ ತಡವಾಗಿ ಏಳುವುದು ಒಳ್ಳೆಯದಲ್ಲ. ಇನ್ನು ಕೆಲವರಿಗೆ ಹಬ್ಬ ಹರಿದಿನಗಳು ಬಂತೆಂದರೆ ಸಾಕು ಸಾಕು ಪಾರ್ಟಿ ಮಾಡುವ ಮೂಡ್​ನಲ್ಲಿ ಇರುತ್ತಾರೆ. ಆದರೆ ಯುಗಾದಿ ದಿನ ಮಾಂಸಾಹಾರ ಮತ್ತು ಮದ್ಯ ಸೇವನೆ ಮಾಡಬಾರದು

    MORE
    GALLERIES

  • 58

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    ಯುಗಾದಿಯ ದಿನ ಅನೇಕರು ಪಂಚಾಂಗ ಶ್ರವಣ ಮಾಡುತ್ತಾರೆ. ಆದರೆ ಪಂಚಾಂಗ ಶ್ರವಣವನ್ನು ದಕ್ಷಿಣಾಭಿಮುಖವಾಗಿ ಕುಳಿತು ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಈ ರೀತಿ ತಪ್ಪು ದಿಕ್ಕಿನಲ್ಲಿ ಕುಳಿತರೆ ಪಂಚಾಂಗ ಶ್ರವಣದ ಫಲ ಸಿಗುವುದಿಲ್ಲ.

    MORE
    GALLERIES

  • 68

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    ಇವುಗಳ ಜೊತೆಗೆ ಹಬ್ಬದ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ. ಯುಗಾದಿ ದಿನ ಹೊಸ ಛತ್ರಿ ಕೊಂಡರೆ ಒಳ್ಳೆಯದಾಗುತ್ತದೆ. ಹೀಗೆ ಮಾಡುವುದರಿಂದ ವರ್ಷವಿಡೀ ನಿಮ್ಮ ಮನೆಯಲ್ಲಿ ಹಣ ಉಳಿಯುತ್ತದೆ.

    MORE
    GALLERIES

  • 78

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    ಹಾಗೆಯೇ ಯುಗಾದಿಯ ದಿನ ದಾನ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಹಿಂದೆ ಹಬ್ಬ ಹರಿದಿನಗಳಲ್ಲಿ ಹಿರಿಯರು ದಾನ ಮಾಡುತ್ತಿದ್ದರು.ಇನ್ನು ಈ ದಿನ ಮನೆಯಲ್ಲಿ ಯುಗಾದಿ ಪೂಜೆಯನ್ನು ಸಂಭ್ರಮದಿಂದ ಮಾಡಬೇಕು.

    MORE
    GALLERIES

  • 88

    Ugadi 2023: ಚೈತ್ರ ಮಾಸದ ಮೊದಲ ದಿನ ಈ ಕೆಲಸ ಮಾಡಿ, ಸಂಪತ್ತು ತುಂಬಿ ತುಳುಕಾಡುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES