ಕರ್ಕಾಟಕ ರಾಶಿ: ತ್ರಿಗ್ರಾಹಿ ಯೋಗವು ನಿಮಗೆ ಮಂಗಳಕರವಾಗಿರಲಿದೆ. ಏಕೆಂದರೆ ನಿಮ್ಮ ಜಾತಕದಲ್ಲಿ ಏಳನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದು ವೈವಾಹಿಕ ಜೀವನದ ಮನೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ನೀವು ಈ ಸಮಯದಲ್ಲಿ ಪಾಲುದಾರಿಕೆ ವ್ಯವಹಾರವನ್ನು ಮಾಡುವುದು ಬಹಳ ಉತ್ತಮ ಎನ್ನಲಾಗುತ್ತದೆ. ಅಲ್ಲದೇ, ಉದ್ಯೋಗಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲವನ್ನು ಪಡೆಯುತ್ತಾರೆ. ಹಾಗೆಯೇ ಅವಿವಾಹಿತರಿಗೆ ವಿವಾಹ ಭಾಗ್ಯ ಸಿಗಲಿದೆ.