Astrology: ಡಿಸೆಂಬರ್ 31ರಿಂದ 2 ರಾಶಿಯವರಿಗೆ ಲಾಭ, 3 ರಾಶಿಗಳಿಗೆ ನಷ್ಟ!
Zodiac Signs: 2022ನೇ ವರ್ಷವು ಕಳೆದು 2023ಕ್ಕೆ ಕಾಲಿಡಲು ದಿನಗಣನೆ ಶುರುವಾಗಿದೆ. ವರ್ಷದ ಕೊನೆ ದಿನವಾದ ಡಿಸೆಂಬರ್ 31ರಂದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಹತ್ವದ ಗ್ರಹ ಸಂಚಾರ ನಡೆಯಲಿದೆ. ಇದರ ಪರಿಣಾಮ ಯಾವ ರಾಶಿಯ ಮೇಲೆ, ಯಾವ ರೀತಿ ಇರುತ್ತೆ ಎಂದು ಇಲ್ಲಿ ತಿಳಿಯೋಣ.
ಗ್ರಹಗಳ ರಾಶಿ ಬದಲಾವಣೆಯನ್ನು ಅವಲಂಬಿಸಿ ಜಾತಕದಲ್ಲಿ ಗ್ರಹಗಳ ಸ್ಥಾನವು ಬದಲಾಗುತ್ತದೆ. ಹೊಸ ವರ್ಷದಿಂದ ಅನೇಕ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಇದರಿಂದ ಕೆಲ ರಾಶಿಗಳಿಗೆ ಲಾಭ, ಕೆಲ ರಾಶಿಗಳಿಗೆ ನಷ್ಟ ಉಂಟಾಗುತ್ತದೆ.
2/ 8
ಬುಧ ಗ್ರಹವು ಡಿಸೆಂಬರ್ 31 ರಿಂದ ಧನು ರಾಶಿಗೆ ಚಲಿಸುತ್ತದೆ. ಇದರ ಪ್ರಭಾವವು ಎಲ್ಲಾ 12 ರಾಶಿಚಕ್ರಗಳ ಮೇಲೆ ಇರುತ್ತದೆ. ಹಿಮ್ಮುಖ ಬುಧ ಸಂಕ್ರಮಣದಿಂದ ಯಾವ ರಾಶಿಯವರು ಪ್ರಯೋಜನ ಪಡೆಯುತ್ತಾರೆ. ಯಾವ ರಾಶಿಯವರಿಗೆ ಹಾನಿ ಉಂಟಾಗುತ್ತದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. (ಸಾಂಕೇತಿಕ ಚಿತ್ರ)
3/ 8
ಮೇಷ ರಾಶಿ : ಬುಧ ಗ್ರಹವು ಧನು ರಾಶಿಗೆ ಚಲಿಸುವುದರಿಂದ ಮೇಷ ರಾಶಿಯವರಿಗೆ ಸಮಸ್ಯೆಗಳು ಎದುರಾಗಲಿವೆ. ಕಚೇರಿ ಮತ್ತು ವ್ಯವಹಾರದಲ್ಲಿ ಕಠಿಣ ಸವಾಲುಗಳು ಬರಬಹುದು. ಮಾನಸಿಕ ಒತ್ತಡ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
4/ 8
ಕಟಕ ರಾಶಿ: ಈ ರಾಶಿಯವರಿಗೆ ಬುಧ ಸಂಚಾರ ಲಾಭದಾಯಕವಾಗಿದೆ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಆರ್ಥಿಕ ಲಾಭವನ್ನೂ ಪಡೆಯಬಹುದು. ಪೂರ್ವಿಕರ ಆಸ್ತಿಗಳಿಂದಲೂ ಲಾಭವಾಗುವ ಸಾಧ್ಯತೆ ಇದೆ. ವ್ಯವಹಾರಕ್ಕೆ ಸಮಯವೂ ಅನುಕೂಲಕರವಾಗಿದೆ.
5/ 8
ಕನ್ಯಾ ರಾಶಿ: ಬುಧ ಗ್ರಹದ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ, ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ ತೊಂದರೆಗಳನ್ನು ಎದುರಿಸಬಹುದು.
6/ 8
ವೃಶ್ಚಿಕ ರಾಶಿ: ವ್ಯಾಪಾರದಲ್ಲಿ ತೊಂದರೆಗಳು ಉಂಟಾಗಬಹುದು. ಮಾನಸಿಕ ಒತ್ತಡದಂತಹ ಸಮಸ್ಯೆಗಳಿಂದ ಬಳಲಬಹುದು. ಈ ಸಮಯದಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
7/ 8
ಕುಂಭ ರಾಶಿ: ನಿಮಗೆ ಒಳ್ಳೆಯ ಸಮಯ ಎನ್ನಬಹುದು. ಕಚೇರಿಯಲ್ಲಿರುವ ಸಮಯವು ನಿಮಗೆ ಅನುಕೂಲಕರವಾಗಿರಬಹುದು. ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಹಕಾರವೂ ದೊರೆಯುತ್ತದೆ. ವ್ಯವಹಾರದಲ್ಲಿ ಲಾಭದೊಂದಿಗೆ, ನೀವು ನಿಮ್ಮ ವ್ಯವಹಾರವನ್ನು ವಿಸ್ತರಿಸಬಹುದು.
8/ 8
Disclaimer: ಈ ಲೇಖನವು ಸಾರ್ವಜನಿಕ ನಂಬಿಕೆಯನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ. ಇದು ಸಂಪೂರ್ಣ ಸತ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.