ಸಾಮಾನ್ಯವಾಗಿ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಏಪ್ರಿಲ್ ತಿಂಗಳಲ್ಲಿ ಸಹ ಕೆಲವು ಪ್ರಮುಖ ಗ್ರಹಗಳ ಹಾದಿಯಲ್ಲಿ ಅನಿರೀಕ್ಷಿತ ಬದಲಾವಣೆ ಇರುತ್ತದೆ. ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ, 21 ರಂದು ಬುಧ ಮತ್ತು 22 ರಂದು ಗುರು ಸ್ಥಾನ ಬದಲಾವಣೆ ಮಾಡುತ್ತಾನೆ. ಆದರೆ ಈ ಸಂಯೋಜನೆಯು ತುಂಬಾ ಅಪಾಯಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ.