Vastu Tips: ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಗಿಫ್ಟ್ ಆಗಿ ಕೊಡಬಾರದಂತೆ
Never Gift These Items: ನಾವು ಯಾವುದೇ ಶುಭ ಸಮಾರಂಭ ಇರಲಿ, ಬರ್ತ್ ಡೇ ಇರಲಿ ಗಿಫ್ಟ್ ಕೊಡುತ್ತೇವೆ. ಈ ಗಿಫ್ಟ್ ಆ ವ್ಯಕ್ತಿಯ ಮೇಲೆ ನಿಮ್ಮ ಪ್ರೀತಿಯನ್ನು ತೋರಿಸುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಾವು ಕೆಲವು ವಸ್ತುಗಳನ್ನು ಗಿಫ್ಟ್ ಆಗಿ ಕೊಡಬಾರದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಟವೆಲ್ ನಾವು ಯಾರಿಗೂ ಟವೆಲ್ ಮತ್ತು ಕರ್ಚೀಫ್ಗಳನ್ನು ಗಿಫ್ಟ್ ಆಗಿ ಕೊಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಟವೆಲ್ ಗಿಫ್ಟ್ ಕೊಡುವುದರಿಂದ ಅವರ ಜೀವನದಲ್ಲಿ ನಿರಾಸೆ ಉಂಟು ಮಾಡುತ್ತದೆ ಮತ್ತು ಹುಮ್ಮಸ್ಸು ಕಳೆದು ಹೋಗುತ್ತದೆ ಎಂದು ಹೇಳಲಾಗುತ್ತದೆ.
2/ 8
ನೀರು ಇರುವ ವಸ್ತುಗಳು ನಾವು ಸಾಮಾನ್ಯವಾಗಿ ಗಿಫ್ಟ್ ನೀಡುವಾಗ ಮನೆಯ ಅಲಂಕಾರಿಕ ವಸ್ತುಗಳನ್ನು ಕೊಡುತ್ತೇವೆ. ಅದರಲಲ್ಉ ಅಕ್ವೇರಿಯಂ, ಗಿಡಗಳು ಹೀಗೆ ಈ ರೀತಿ ವಸ್ತುಗಳನ್ನು ನೀಡುತ್ತೇವೆ. ಆದರೆ ನೀರು ಇರುವ ಯಾವುದೇ ವಸ್ತುಗಳನ್ನು ಗಿಫ್ಡ್ ಆಗಿ ಕೊಡಬಾರದು. ಇದರಿಂದ ಆರ್ಥಿಕ ಸಮಸ್ಯೆಗಳು ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
3/ 8
ದೇವರ ಮೂರ್ತಿ ನಮ್ಮ ಸಂಪ್ರದಾಯದಲ್ಲಿ ದೇವರ ಮೂರ್ತಿಗೆ ಬಹಳ ಪ್ರಾಮುಖ್ಯತೆ ಇದೆ. ಹಾಗಾಗಿ ಸಾಮಾನ್ಯವಾಗಿ ಬಹುತೇಕ ಸಮಾರಂಭಗಳಿಗೆ ದೇವರ ಮೂರ್ತಿಯನ್ನು ಗಿಫ್ಟ್ ಆಗಿ ಕೊಡಲಾಗುತ್ತದೆ. ಆದರೆ ಈ ಮೂರ್ತಿಗಳಿಗೆ ಸರಿಯಾದ ಪೂಜೆ ಮಾಡಲು ಆಗುವುದಿಲ್ಲ ಎಂದರೆ ಸಮಸ್ಯೆಗಳು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
4/ 8
ಪೆನ್ ಹಾಗೂ ಪುಸ್ತಕ ನಾವು ಯಾವುದೇ ಕಾರಣಕ್ಕೂ ಲೇಖನ ಸಾಮಾಗ್ರಿಗಳಾದ ಪೆನ್ ಮತ್ತು ಪುಸ್ತಕವನ್ನು ಕೊಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ. ಈ ರೀತಿ ಪೆನ್ನು ಮತ್ತು ಇತರ ವಸ್ತುಗಳನ್ನು ಕೊಡುವುದು ಅವರ ಬೆಳವಣಿಗೆಗೆ ಸಹಾಯ ಮಾಡುವ ಬದಲು, ಇನ್ನೂ ನಷ್ಟಕ್ಕೆ ಕಾರಣವಾಗುತ್ತದೆ.
5/ 8
ಚೂಪಾದ ವಸ್ತುಗಳು ಮನೆಯ ಗೃಹ ಪ್ರವೇಶ ಹಾಗೂ ಮದುವೆ ಸಮಯದಲ್ಲಿ ಅಡುಗೆ ಮನೆಯ ವಸ್ತುಗಳನ್ನು ಕೊಡುತ್ತೇವೆ. ಆದರೆ ಅದರಲ್ಲಿ ಚೂಪಾದ ವಸ್ತುಗಳು ಇರಬಾರದು. ಚಾಕು ಮತ್ತು ಚೂಪಾದ ಚಮಚಗಳನ್ನು ಕೊಡಬಾರದು. ಇದು ನಿಮ್ಮ ಮತ್ತು ಗಿಫ್ಟ್ ಪಡೆದವರ ಮಧ್ಯೆ ಸಂಬಂಧ ಹಾಳು ಮಾಡುತ್ತದೆ.
6/ 8
ಬ್ಯಾಗ್ ಈ ಹುಡುಗಿಯರು ಹೆಚ್ಚಾಗಿ ತಮ್ಮ ಗೆಳತಿಯರಿಗೆ ಗಿಫ್ಟ್ ಆಗಿ ಬ್ಯಾಗ್ಗಳನ್ನು ಕೊಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಬ್ಯಾಗ್ ಕೊಡುವುದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವರಿಗೆ ಕೊಟ್ಟಂತೆ. ಕೇವಲ ಹುಡುಗಿಯರಿಗೆ ಮಾತ್ರ ಅಲ್ಲದೇ, ಹುಡುಗರಿಗೆ ಸಹ ಪರ್ಸ್ ಅನ್ನು ಗಿಫ್ಟ್ ಆಗಿ ನೀಡಬಾರದು.
7/ 8
ಉಪ್ಪಿನಕಾಯಿ ನೀವು ಯಾವುದೇ ಕಾರಣಕ್ಕೂ ಉಪ್ಪಿನಕಾಯಿಯನ್ನು ಗಿಫ್ಟ್ ಆಗಿ ನೀಡಬಾರದು. ಇದರಲ್ಲಿ ಉಪ್ಪು ಇರುತ್ತದೆ. ಉಪ್ಪನ್ನು ಎಂದಿಗೂ ಯಾರಿಗೂ ಉಚಿತವಾಗಿ ನೀಡಬಾರದು. ನೀವು ಉಪ್ಪಿನಕಾಯಿಯನ್ನು ಯಾರಿಗಾದರೂ ಕೊಟ್ಟರೆ ಅವರಿಂದ 1 ರೂಪಾಯಿ ಪಡೆಯುವುದು ಉತ್ತಮ.
8/ 8
ಒಣ ಹೂವು ಹೂವುಗಳನ್ನು ಗಿಫ್ಟ್ ನೀಡುವುದು ಒಂದು ಪದ್ಧತಿ ಎನ್ನುವಂತೆ ಆಗಿದೆ. ಹೂವುಗಳು ಪ್ರೀತಿ, ಆನಂದ, ವೈಭವ ಮತ್ತು ಪರಿಮಳವನ್ನು ಸೂಚಿಸುತ್ತವೆ. ಆದರೆ ಒಣಗಿದ ಹೂವು ಜೀವನದಲ್ಲಿ ನಷ್ಟ ಮತ್ತು ನೋವಿನ ಸಂಕೇತವಾಗಿದೆ. ಹಾಗಾಗಿ ಒಣಗಿದ ಹೂವನ್ನು ಕೊಡಬಾರದು.