Astrology: ದೇವರಿಗೆ ಇಷ್ಟದ ನೈವೇದ್ಯ ಅರ್ಪಿಸಿದ್ರೆ ಕಷ್ಟಗಳೆಲ್ಲಾ ಮಾಯವಾಗುತ್ತೆ
Offer These Things To God: ನಾವು ದೇವರಿಗೆ ಪೂಜೆ ಮಾಡಿದಾಗ ನೈವೇದ್ಯ ಮಾಡುವುದು ಸಾಮಾನ್ಯ. ಹಣ್ಣು, ಪಾಯಸ ಹೀಗೆ ವಿವಿಧ ರೀತಿಯ ಆಹಾರಗಳನ್ನು ಮತ್ತು ಹೂವು-ಹಣ್ಣುಗಳನ್ನು ದೇವರ ಮುಂದೆ ಇಡುತ್ತೇವೆ. ಆದರೆ ನಿರ್ದಿಷ್ಟವಾಗಿ ಕೆಲ ದೇವರಿಗೆ ನಿರ್ದಿಷ್ಟವಾದ ವಸ್ತುವನ್ನು ನೈವೇದ್ಯ ಮಾಡಬೇಕು. ಯಾವ ದೇವರಿಗೆ ಏನು ನೈವೇದ್ಯ ಮಾಡಬೇಕು ಎಂಬುದು ಇಲ್ಲಿದೆ.
ಗಣೇಶನಿಗೆ ಗಣೇಶನಿಗೆ ಮೋದಕ ಎಂದರೆ ಬಹಳ ಇಷ್ಟ. ಅಲ್ಲದೇ ನೀವು ಬೂಂದಿ ಲಡೂವನ್ನು ಸಹ ನೈವೇದ್ಯ ಮಾಡಬಹುದು. ಹಾಗೆಯೇ ಗಣಪತಿಗೆ ಕಬ್ಬಿನ ತುಂಡು ಮತ್ತು ಬೆಲ್ಲವನ್ನು ನೀಡಬಹುದು.
2/ 8
ಶ್ರೀರಾಮನಿಗೆ ಶ್ರೀರಾಮನಿಗೆ ಕೇಸರಿಯ ಕಡುಬು ಮತ್ತು ಬಾಳೆಹಣ್ಣಿನ ಪಾಯಸ ಎಂದರೆ ಬಹಳ ಇಷ್ಟ. ಇದರ ಜೊತೆಗೆ ನಿಂಬೆ ಪಾನಕವನ್ನು ಸಹ ರಾಮನಿಗೆ ನೈವೇದ್ಯ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.
3/ 8
ವಿಷ್ಣುವಿಗೆ ಒಣದ್ರಾಕ್ಷಿಯನ್ನು ವಿಷ್ಣುವಿಗೆ ಅರ್ಪಿಸಬೇಕು. ಇದರ ಜೊತೆಗೆ ನೆಲ್ಲಿಕಾಯಿಯನ್ನು ನೈವೇದ್ಯ ಮಾಡುವುದು ತುಂಬಾ ಮಂಗಳಕರ ಎನ್ನಲಾಗುತ್ತದೆ. ನೀವು ಒಣದ್ರಾಕ್ಷಿಯನ್ನು ಹಾಕಿದ ಆಹಾರದ ಮೇಲೆ ತುಳಸಿ ಎಲೆ ಇಟ್ಟು ನೈವೇದ್ಯ ಮಾಡಬೇಕು.
4/ 8
ಮಹಾದೇವನಿಗೆ ಮಹಾದೇವನಿಗೆ ಭಾಂಗ್ ಮತ್ತುಹಾಲು, ಮೊಸರು, ಜೇನುತುಪ್ಪ, ಗಂಗಾಜಲ, ತುಪ್ಪದಿಂದ ಮಾಡಿದ ಪಂಚಾಮೃತ ನೈವೇದ್ಯ ಮಾಡಬೇಕು. ಬೆಲ್ಲ, ಬೇಳೆ ಜೊತೆಗೆ ಹಾಲನ್ನು ಅರ್ಪಿಸಿದರೆ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತವೆ.
5/ 8
ಹನುಮಂತನಿಗೆ ಹನುಮಂಜಿಗೆ ಖೀರ್, ಕೆಂಪು ಮತ್ತು ತಾಜಾ ಹಣ್ಣುಗಳು, ಬೆಲ್ಲ, ಮತ್ತು ತುಳಸಿಯ ಎಲೆಯನ್ನು ನೈವೇದ್ಯ ಮಾಡಲಾಗುತ್ತದೆ. ಹಾಗೆಯೇ, ಶುದ್ಧ ತುಪ್ಪದಿಂದ ಮಾಡಿದ ಬೇಸನ್ ಲಡ್ಡುಗಳು ಸಹ ದೇವರಿಗೆ ಇಷ್ಟ.
6/ 8
ಶ್ರೀ ಲಕ್ಷ್ಮೀ ಗೆ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ನಿಮ್ಮ ನೆಚ್ಚಿನ ಆಹಾರವನ್ನು ನೀಡಿದರೆ ಒಳ್ಳೆಯದಂತೆ. ಆದರೆ, ಲಕ್ಷ್ಮಿ ಬಿಳಿ ಮತ್ತು ಹಳದಿ ಸಿಹಿತಿಂಡಿಗಳು ಎಂದರೆ ಲಕ್ಷ್ಮೀ ದೇವಿಗೆ ಇಷ್ಟ.
7/ 8
ದುರ್ಗಾಮಾತೆಗೆ ದುರ್ಗಾಮಾತೆಯನ್ನು ಶಕ್ತಿ ದೇವತೆ ಎಂದು ಪರಿಗಣಿಸಲಾಗುತ್ತದೆ. ದುರ್ಗಮಾತೆಗೆ ಖೀರ್, ಮಲ್ಪುವಾ, ಬಾಳೆಹಣ್ಣು, ತೆಂಗಿನಕಾಯಿ, ಅಕ್ಕಿ ಮತ್ತು ಸಿಹಿತಿಂಡಿಗಳನ್ನು ನೈವೇದ್ಯ ಮಾಡಬೇಕು. ಬುಧವಾರ ಮತ್ತು ಶುಕ್ರವಾರದಂದು ತಾಯಿಯ ದೇವಸ್ಥಾನಕ್ಕೆ ಭೇಟಿ ನೀಡಿ ಈ ನೈವೇದ್ಯವನ್ನು ಅರ್ಪಿಸಿ.
8/ 8
ಕೃಷ್ಣನಿಗೆ ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇದರ ಜೊತೆಗೆ ಸಕ್ಕರೆಯನ್ನು ಸಹ ಕೃಷ್ಣನಿಗೆ ನೈವೇದ್ಯ ಮಾಡುವುದರಿಂದ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.