ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಗುರು ಮತ್ತು ಶುಕ್ರ ಸೇರಿದಂತೆ ಹಲವು ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಅಂದರೆ ಶುಕ್ರವಾರ 14ನೇ ಏಪ್ರಿಲ್ 2023 ರಂದು ಮಧ್ಯಾಹ್ನ 3.12 ಗಂಟೆಗೆ ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಹಾಗೆಯೇ, ಬುಧ ಗ್ರಹ ಏಪ್ರಿಲ್ 21 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಗುರು ಕೂಡ ಏಪ್ರಿಲ್ 22 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತದೆ.
ಧನು ರಾಶಿ: ಬಹಳ ದಿನಗಳಿಂದ ಉದ್ಯೋಗದ ನಿರೀಕ್ಷೆಯಲ್ಲಿದ್ದ ಧನು ರಾಶಿಯವರು ಈ ತಿಂಗಳು ಉದ್ಯೋಗಕ್ಕಾಗಿ ಬಹಳ ದಿನ ಕಾಯಬೇಕಾಗುತ್ತದೆ. ಅಲ್ಲದೇ, ನಿಮ್ಮ ಆರೋಗ್ಯಕ್ಕೆ ವಿಶೇಷ ಗಮನ ಕೊಡುವ ಅಗತ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಹೆಚ್ಚು ಶ್ರಮಪಡಬೇಕಾಗುತ್ತದೆ. ಕುಟುಂಬದೊಂದಿಗೆ ಕೆಲವು ಭಿನ್ನಾಭಿಪ್ರಾಯ ಉಂಟಾಗಬಹುದು. ಆದಾಯದ ವಿಚಾರದಲ್ಲಿ ಸಹ ತೊಂದರೆ ಆಗುತ್ತದೆ.