January 2023: ಜನವರಿ 13ರಿಂದ ಈ 2 ರಾಶಿಯವರಿಗೆ ಬ್ಯಾಡ್ ಲಕ್, ಕಷ್ಟಗಳು ಹೆಚ್ಚಾಗುತ್ತವೆ
Astrology: ಜ್ಯೋತಿಷ್ಯದ ಪ್ರಕಾರ, ಜನವರಿ 13 ರಂದು ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ಇದೇ ಸ್ಥಾನದಲ್ಲಿ ಎರಡು ತಿಂಗಳ ಕಾಲ ಇರಲಿದೆ. ಇದರ ಪರಿಣಾಮ ಕೆಲ ರಾಶಿಯವರ ಮೇಲೆ ಬೀಳಲಿದೆ.
ಹೊಸ ವರ್ಷ ಬಂದೇ ಬಿಟ್ಟಿದೆ. ಜನವರಿಗೆ ಕಾಲಿಡಲು ದಿನಗಣನೆ ಶುರುವಾಗಿದೆ. ವರ್ಷದ ಆರಂಭದಲ್ಲೇ ಕೆಲ ಗ್ರಹಗಳ ಬದಲಾವಣೆಯಿಂದ 2 ರಾಶಿಗಳಿಗೆ ಸಂಕಷ್ಟ ಎದುರಾಗಲಿದೆ.
2/ 7
ಜ್ಯೋತಿಷ್ಯದ ಪ್ರಕಾರ, ಜನವರಿ 13 ರಂದು ಮಂಗಳ ಗ್ರಹ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ಇದೇ ಸ್ಥಾನದಲ್ಲಿ ಎರಡು ತಿಂಗಳ ಕಾಲ ಇರಲಿದೆ. ಇದರ ಪರಿಣಾಮ ಕೆಲ ರಾಶಿಯವರ ಮೇಲೆ ಬೀಳಲಿದೆ.
3/ 7
ಮಂಗಳ ಗ್ರಹ ವೃಷಭ ರಾಶಿಯಲ್ಲೇ ಮಾರ್ಚ್ 13ರವರೆಗೆ ಇರಲಿದೆ. ನಂತರ ಮಿಥುನ ರಾಶಿಯಲ್ಲಿ ಸಾಗುತ್ತೆ. ಈ ಎರಡು ತಿಂಗಳು ಯಾವ 2 ರಾಶಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತೆ ಎಂದು ತಿಳಿಯೋಣ ಬನ್ನಿ
4/ 7
ಮೇಷ ರಾಶಿ: ಈ ರಾಶಿಯ ಜನರ ಮೇಲೆ ಮಂಗಳನ ಸಂಕ್ರಮಣದಿಂದಾಗಿ ಪ್ರತಿಕೂಲ ಪರಿಣಾಮ ಇರಲಿದೆ. ಹಣದ ನಷ್ಟದ ಜೊತೆಗೆ ಕುಟುಂಬ ಸದಸ್ಯರೊಂದಿಗೆ ವಾದಗಳು ಉಂಟಾಗಬಹುದು. ಮತ್ತೊಂದೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
5/ 7
ಮಿಥುನ ರಾಶಿ: ಮಂಗಳ ಗ್ರಹ ರಾಶಿ ಬದಲಾದಂತೆ, ಈ ರಾಶಿಯವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೌಟುಂಬಿಕ ಕಲಹಗಳಿರಬಹುದು. ಬಜೆಟ್ ಪ್ರಕಾರ ಹಣವನ್ನು ಖರ್ಚು ಮಾಡಿ, ಇಲ್ಲದಿದ್ದರೆ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ವೈವಾಹಿಕ ಜೀವನದಲ್ಲೂ ಕೆಲವು ಸಮಸ್ಯೆಗಳು ಎದುರಾಗಲಿವೆ.
6/ 7
ಕಟಕ ರಾಶಿ: ಮಂಗಳ ಗ್ರಹ ಬದಲಾವಣೆ ಈ ರಾಶಿಚಕ್ರದ ಜನರಿಗೆ ಅದೃಷ್ಟ ತರಲಿದೆ. ನಿಮ್ಮ ಆದಾಯ ಹೆಚ್ಚಾಗಬಹುದು. ಕಚೇರಿಯಲ್ಲಿ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಸಾಮಾಜಿಕ ಪ್ರತಿಷ್ಠೆಯೂ ಹೆಚ್ಚುತ್ತದೆ. ನಿಮ್ಮ ಗುರಿಗಳನ್ನು ಸಹ ನೀವು ಸಾಧಿಸಬಹುದು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)