ಕನ್ಯಾ: ಮೇಷ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ನಿಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮೇಲೆ ಕೆಲಸದ ಹೊರೆ ಹೆಚ್ಚಾಗಬಹುದು ಇದರಿಂದ ಮಾನಸಿಕ ಒತ್ತಡ ಉಂಟಾಗಿ, ಕೆಲವು ತೊಂದರೆಗಳಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ತೊಡಗಿರುವವರು ಲಾಭಕ್ಕಾಗಿ ಶ್ರಮಿಸಬೇಕಾಗುತ್ತದೆ. ನೀವು ವ್ಯವಹಾರದಲ್ಲಿ ನಷ್ಟವನ್ನು ಸಹ ಎದುರಿಸಬಹುದು. ಇದು ಆರ್ಥಿಕ ಪರಿಸ್ಥಿತಿ ಸಹ ಹಾಳಾಗುತ್ತದೆ.
ಮಕರ: ಗ್ರಹಗಳ ರಾಶಿ ಬದಲಾವಣೆಯಿಂದಾಗಿ ನಿಮ್ಮ ವೈವಾಹಿಕ ಜೀವನ ಮತ್ತು ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಯೊಂದಿಗೆ ವಾದಗಳು ಉಂಟಾಗುವ ಸಾಧ್ಯತೆಯಿದೆ. ನೀವು ಎಚ್ಚರಿಕೆಯಿಂದ ಅವರು ಏನು ಹೇಳುತ್ತಾರೆ ಎಂಬುದನ್ನ ಅರ್ಥಮಾಡಿಕೊಂಡರೆ ಇದನ್ನು ತಪ್ಪಿಸಬಹುದು. ವ್ಯಾಪಾರ ಮಾಡುವವರಿಗೆ ನಷ್ಟದ ಪರಿಸ್ಥಿತಿ ಎದುರಾಗಬಹುದು. ಒಂದು ತಿಂಗಳು ತುಂಬಾ ಕಷ್ಟವಾಗುತ್ತದೆ.