ಮದುವೆಯ ನಂತರ ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿಯ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ, ಅದರಲ್ಲೂ ಹುಡುಗಿ ಮದುವೆಯಾಗಿ ತನ್ನ ಅತ್ತೆಯ ಮನೆಗೆ ಹೋದ ನಂತರ, ಕುಟುಂಬದ ಆರ್ಥಿಕ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಕುಟುಂಬವು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ. ದಾಯಾದಿಗಳ ಸಮಸ್ಯೆಗಳು ದೂರವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಡುಗಿಯ ಜೀವನ ಚಕ್ರದಲ್ಲಿರುವ ಶುಭ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಇದಕ್ಕೆ ಕಾರಣವಂತೆ.
ಮೇಷ ರಾಶಿ: ಈ ರಾಶಿಯ ಮಹಿಳೆಯರು ತಮ್ಮ ಗಂಡನ ಹಾದಿಯಲ್ಲೇ ಸಾಗುತ್ತಾರೆ.. ಪ್ರತಿಯೊಂದು ಕೆಲಸದಲ್ಲಿಯೂ ತಮ್ಮ ಛಾಪು ಮೂಡಿಸಲು ಬಯಸುತ್ತಾರೆ. ಪತಿ ಮತ್ತು ಕುಟುಂಬದ ಬಗ್ಗೆ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಲಕ್ಷ್ಮಿ ದೇವಿಯು ಈ ರಾಶಿಯ ಹುಡುಗಿಯರಿಗೆ ವಿಶೇಷ ಪ್ರೀತಿಯನ್ನು ತೋರಿಸುತ್ತಾಳೆ ಎನ್ನಲಾಗುತ್ತದೆ. ಮದುವೆಯ ನಂತರ ಪತಿಗೂ ಈ ಮಹಿಳೆಯರು ಅದೃಷ್ಟ ಲಕ್ಷ್ಮಿಯಂತೆ.
ವೃಷಭ: ಜ್ಯೋತಿಷ್ಯ ಶಾಸ್ತ್ರದ ಫಲಿತಾಂಶಗಳ ಪ್ರಕಾರ, ವೃಷಭ ರಾಶಿಯ ಹುಡುಗಿಯರು ಹಣವನ್ನು ಬಹಳ ಬುದ್ಧಿವಂತಿಕೆಯಿಂದ ಖರ್ಚು ಮಾಡುತ್ತಾರೆ. ಅವರು ಬಾಲ್ಯದಿಂದಲೂ ಹಣದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಜ್ಯೋತಿಷಿಗಳ ಪ್ರಕಾರ, ಈ ರಾಶಿಯ ಹುಡುಗಿಯರು ವ್ಯಾಪಾರಕ್ಕೆ ಕೈ ಹಾಕಿದರೆ, ಖಂಡಿತವಾಗಿಯೂ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಹಾಗಾಗಿ ಈ ರಾಶಿಯ ಹೆಣ್ಣು ಮಕ್ಕಳು ಬಹಳ ಅದೃಷ್ಟವಂತರಂತೆ.
ಮಕರ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಈ ರಾಶಿಯ ಅಧಿಪತಿಯಾಗಿದ್ದು, ಶನಿಯು ಇವರನ್ನು ತುಂಬಾ ಇಷ್ಟಪಡುತ್ತಾನೆ. ಈ ರಾಶಿy ಹುಡುಗಿಯರು ಸ್ವಭಾವತಃ ತುಂಬಾ ಶ್ರಮಜೀವಿಗಳು. ಅವರ ಶ್ರಮದ ಆಧಾರದ ಮೇಲೆ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಉನ್ನತ ಸ್ಥಾನವನ್ನು ತಲುಪುತ್ತಾರೆ. ಇವರು ಮನೆಗೆ ಅದೃಷ್ಟ ಲಕ್ಷ್ಮಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.