Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

ಸಾಮಾನ್ಯವಾಗಿ ಹೆಚ್ಚಿನವರಿಗೆ ಹೊರಗಡೆ ಇರುವಾಗ, ಬೇರೆ ಎಲ್ಲಾದರು ಹೋಗುವಾಗ ಅಂದವಾಗಿ ಕಾಣ್ಬೇಕು ಅಂತ ಇರುತ್ತೆ. ಆದ್ರೆ ಈ ರಾಶಿಯವರಿಗಂತೂ ತಾವು ನಾಲ್ಕು ಜನರ ಮುಂದೆ ಹೇಗೆ ಕಾಣಿಸುತ್ತೇವೆ ಎಂಬೋದರ ಬಗ್ಗೆ ತುಂಬಾ ಕಾಳಜಿ ಇರುತ್ತಂತೆ.

First published:

  • 18

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ಬಹಳಷ್ಟು ಜನರು ತಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಅಂತ ಸ್ವಲ್ಪವೂ ಯೋಚನೆ ಮಾಡುವುದಿಲ್ಲ, ತಮಗೆ ಹೇಗೆ ಇಷ್ಟವಾಗುತ್ತೋ ಮತ್ತು ತಮಗೆ ಕಂಫರ್ಟ್ ಅನ್ನೋ ಹಾಗೆ ಇದ್ದು ಬಿಡುತ್ತಾರೆ.ಆದರೆ ಇನ್ನೂ ಕೆಲವರು ಮಾತ್ರ ನಾಲ್ಕು ಜನರ ಮಧ್ಯೆ ಹೋದರೆ ತಾವು ಚೆನ್ನಾಗಿ ಕಾಣಬೇಕು ಅಂತ ತುಂಬಾನೇ ತಮ್ಮ ನೋಟದ ಬಗ್ಗೆ ಜಾಗರೂಕರಾಗಿರುತ್ತಾರೆ. ಈ ಜನರು ಬರೀ ತಮ್ಮ ನೋಟದ ಬಗ್ಗೆ ಅಷ್ಟೇ ಅಲ್ಲದೆ, ಅವರು ಹಾಕುವ ಬಟ್ಟೆಗಳು ಬೇರೆಯವರಿಗೆ ಹೇಗೆ ಅನ್ನಿಸುತ್ತಿವೆ ಅಂತಾನೂ ತುಂಬಾನೇ ಯೋಚನೆ ಮಾಡುತ್ತಾರೆ.

    MORE
    GALLERIES

  • 28

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ಸಾರ್ವಜನಿಕವಾಗಿ ಹೊರಗೆ ಹೋಗುವಾಗ ಅವರು ತಮ್ಮ ನೋಟದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ತಮ್ಮನ್ನು ನಾಲ್ಕು ಜನರು ಹೇಗೆ ಗ್ರಹಿಸಬಹುದೆಂಬ ಭಯದಿಂದ ಅಪರಿಚಿತರ ಮುಂದೆ ಕಾಣಿಸಿಕೊಳ್ಳಲು ಅವರು ಕೆಲವೊಮ್ಮೆ ತುಂಬಾನೇ ಹಿಂಜರಿಯುತ್ತಾರೆ. ಈ ಕೆಳಗಿನ ರಾಶಿಚಕ್ರ ಚಿಹ್ನೆಗಳ ಜನರು ಹೀಗೆ ತಮ್ಮ ನೋಟದ ಬಗ್ಗೆ ತುಂಬಾನೇ ಜಾಗರೂಕರಾಗಿರುತ್ತಾರಂತೆ ನೋಡಿ.

    MORE
    GALLERIES

  • 38

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ವೃಷಭ ರಾಶಿ: ಈ ರಾಶಿಯ ಜನರು ತಮ್ಮ ನೋಟದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಅವರು ಗುಣಮಟ್ಟ ಮತ್ತು ಕರಕುಶಲತೆ ಮತ್ತು ಹೆಚ್ಚು ಮೌಲ್ಯಯುತ ಐಷಾರಾಮಿ ಜೀವನದ ಬಗ್ಗೆ ತೀವ್ರ ದೃಷ್ಟಿಯನ್ನು ಹೊಂದಿರುತ್ತಾರೆ. ಅವರು ಜನರ ಮುಂದೆ ಕೀಳಾಗಿ ಕಾಣಲು ಎಂದಿಗೂ ಬಯಸುವುದಿಲ್ಲ, ಆದ್ದರಿಂದ ಅವರು ಉತ್ತಮ ಗುಣಮಟ್ಟದ ಬಟ್ಟೆ ಮತ್ತು ಪರಿಕರಗಳಲ್ಲಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಅವರು ಎಲ್ಲಾ ಸಮಯದಲ್ಲೂ ತುಂಬಾನೇ ಅಚ್ಚುಕಟ್ಟಾಗಿ ಕಾಣಲು ಪ್ರಯತ್ನಿಸುತ್ತಾರೆ.

    MORE
    GALLERIES

  • 48

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ಸಿಂಹ ರಾಶಿ: ಈ ರಾಶಿಯವರು ಅವರದ್ದೇ ಆದ ವಿಶಿಷ್ಟವಾದ ಶೈಲಿಯ ಬಗ್ಗೆ ಸ್ವಾಭಾವಿಕ ಅಭಿರುಚಿಯನ್ನು ಹೊಂದಿರುತ್ತಾರೆ ಮತ್ತು ನಾಲ್ಕು ಜನರ ಗಮನವನ್ನು ಸೆಳೆಯಲು ಇಷ್ಟಪಡುತ್ತಾರೆ. ಆದರೆ ಅದೇ ಸಮಯದಲ್ಲಿ, ಅವರು ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ಅವರು ತುಂಬಾ ಜಾಗೃತರಾಗಿರುತ್ತಾರೆ. ಆದ್ದರಿಂದ ಅವರು ತುಂಬಾನೇ ಫ್ಯಾಶನ್ ಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಅವರು ದಿಟ್ಟ ಮತ್ತು ಗಮನ ಸೆಳೆಯುವ ಫ್ಯಾಷನ್ ಆಯ್ಕೆಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ.

    MORE
    GALLERIES

  • 58

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ಕನ್ಯಾ ರಾಶಿ: ಈ ರಾಶಿಯವರು ಸ್ವಭಾವತಃ ಸೂಕ್ಷ್ಮವಾಗಿರುತ್ತಾರೆ ಮತ್ತು ಅವರ ನೋಟ ಸೇರಿದಂತೆ ವಿವರಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ. ಅವರು ತಮ್ಮ ಸಂಘಟಿತ ಮತ್ತು ಪರಿಷ್ಕೃತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕ್ಲಾಸಿಕ್ ಮತ್ತು ಕಾಲಾತೀತ ಬಟ್ಟೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರು ಜನರಿಂದ ಟೀಕೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಜನರ ಮೌಲ್ಯಮಾಪನವನ್ನು ಬಹಳಷ್ಟು ಅವಲಂಬಿಸಿರುತ್ತಾರೆ.

    MORE
    GALLERIES

  • 68

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ತುಲಾ ರಾಶಿ: ತುಲಾ ರಾಶಿಯ ಜನರು ಸಮತೋಲನ ಮತ್ತು ಸೌಂದರ್ಯದ ಸಹಜ ಪ್ರಜ್ಞೆಯನ್ನು ಹೊಂದಿರುತ್ತಾರೆ, ಇದು ಅವರ ನೋಟದ ಬಗ್ಗೆ ಹೆಚ್ಚು ಜಾಗೃತರನ್ನಾಗಿ ಮಾಡುತ್ತದೆ. ಅವರು ಪರಿಷ್ಕೃತ ಅಭಿರುಚಿಯನ್ನು ಹೊಂದಿರುತ್ತಾರೆ ಮತ್ತು ಅವರ ವೈಯಕ್ತಿಕ ಶೈಲಿ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸೊಬಗು ಮತ್ತು ಸೌಂದರ್ಯವನ್ನು ಮೆಚ್ಚುತ್ತಾರೆ. ಅವರು ತಮ್ಮ ಉಡುಗೆಗಳು ಎಲ್ಲರಿಗಿಂತ ಭಿನ್ನವಾಗಿ ಕಾಣಬೇಕು ಅಂತ ತುಂಬಾನೇ ಶ್ರಮಿಸುತ್ತಾರೆ.

    MORE
    GALLERIES

  • 78

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ಮಕರ ರಾಶಿ: ಇವರು ತಮ್ಮ ವೈಯಕ್ತಿಕ ನೋಟದ ಬಗ್ಗೆ ಬಹಳ ನಿರ್ದಿಷ್ಟರಾಗಿರುತ್ತಾರೆ. ಅವರು ತಮ್ಮ ನೋಟದ ಮಹತ್ವವನ್ನು ಅರ್ಥ ಮಾಡಿಕೊಂಡಿದವರಾಗಿರುತ್ತಾರೆ. ಅವರು ಅತ್ಯಾಧುನಿಕ ಬಟ್ಟೆಗಳನ್ನು ಹಾಕಿಕೊಳ್ಳಲು ತುಂಬಾನೇ ಇಷ್ಟಪಡುತ್ತಾರೆ. ಅವರು ತಮ್ಮ ನೋಟದ ಬಗ್ಗೆ ತುಂಬಾ ಅಸುರಕ್ಷಿತ ಭಾವನೆಯನ್ನು ಸಹ ಹೊಂದಿರುತ್ತಾರೆ. ಇದೇ ಕಾರಣಕ್ಕೆ ಅವರು ತಮ್ಮ ಡ್ರೆಸ್ಸಿಂಗ್ ಆಯ್ಕೆಗಳಿಂದ ಆ ಅಸುರಕ್ಷಿತ ಭಾವನೆಯನ್ನು ಮರೆಮಾಚಲು ಪ್ರಯತ್ನಿಸುತ್ತಾರೆ.

    MORE
    GALLERIES

  • 88

    Zodiac Signs: ಈ ರಾಶಿಯವ್ರಿಗೆ ತಮ್ಮ ಅಂದ-ಚೆಂದದ ಬಗ್ಗೆ ತುಂಬಾ ಕಾಳಜಿಯಂತೆ!

    ಈ ರಾಶಿಯ ಜನರಿಗೆ ತಮ್ಮ ನೋಟದ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲವಂತೆ: ಮೇಷ, ಮಿಥುನ, ಕರ್ಕ, ವೃಶ್ಚಿಕ, ಧನು, ಕುಂಭ ಮತ್ತು ಮೀನ ರಾಶಿಯವರು ಜನರ ಮುಂದೆ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲ. ಹಾಗಾಗಿ ಅವರು ತಮ್ಮ ಬಗ್ಗೆ ತುಂಬಾನೇ ವಿಶ್ವಾಸವನ್ನು ಹೊಂದಿರುತ್ತಾರೆ ಮತ್ತು ಜನರನ್ನು ಮೆಚ್ಚಿಸಲು ಅಥವಾ ತಮ್ಮ ಅಭದ್ರತೆಯನ್ನು ಮರೆಮಾಚಲು ತಮ್ಮ ನೋಟವನ್ನು ಹೆಚ್ಚಿಸುವ ಅಗತ್ಯತೆ ಇವರಿಗೆ ಬೇಕಾಗುವುದಿಲ್ಲ.

    MORE
    GALLERIES