Makara Sankranti 2023: ಮಕರ ಸಂಕ್ರಾಂತಿಯ ದಿನ ಈ ರಾಶಿಯವರ ಬದುಕಲ್ಲಿ ಎಲ್ಲವೂ ಸಿಹಿಯಂತೆ
Makara Sankranti 2023: ಮಕರ ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಈ ಸಮಯದಲ್ಲಿ ಸೂರ್ಯ ರಾಶಿಯನ್ನು ಬದಲಾವಣೆ ಮಾಡುವುದರಿಂದ ಕೆಲವೊಂದು ರಾಶಿಗಳಿಗೆ ಒಳ್ಳೆಯದಾಗುತ್ತದೆ. ಯಾವ ರಾಶಿಗೆ ಹಬ್ಬದ ದಿನ ಶುಭ ಫಲಗಳು ಸಿಗುತ್ತದೆ ಎಂಬುದು ಇಲ್ಲಿದೆ.
ಸೂರ್ಯ ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಬಂದಾಗ ಹಾಗೂ ತನ್ನ ರಾಶಿಯನ್ನು ಬದಲಾಯಿಸಿದ ಸಮಯವನ್ನು ಸಂಕ್ರಾಂತಿ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಅಂದರೆ ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶ ಮಾಡುತ್ತದೆ.
2/ 8
ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಮಕರ ಸಂಕ್ರಮಣ ಎಂದು ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅಲ್ಲದೇ ಶನಿ ಮಕರ ರಾಶಿಯ ಅಧಿಪತಿ, ಈ ದಿನ ಸೂರ್ಯನು ಮಗನಾದ ಶನಿಯ ಮನೆಗೆ ಬರುತ್ತಾನೆ ಎನ್ನುವ ನಂಬಿಕೆ ಇದೆ.
3/ 8
ಈ ಬಾರಿ ಶನಿಯು ಮಕರ ರಾಶಿಯಲ್ಲಿ ಇದ್ದಾನೆ, ಹಾಗಾಗಿ ಈ ವರ್ಷದ ಸಂಕ್ರಾಂತಿ ಬಹಳ ವಿಶೇಷ ಎನ್ನಲಾಗುತ್ತದೆ. ಈ ನಡುವೆ ಸೂರ್ಯನ ರಾಶಿ ಬದಲಾವಣೆಯಿಂದ 4 ರಾಶಿಯ ಜನರಿಗೆ ಅದೃಷ್ಟ ಖುಲಾಯಿಸದಂತೆ ಆಗಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 8
ವೃಷಭ ರಾಶಿ: ಈ ರಾಶಿಯವರಿಗೆ ಹಬ್ಬದ ದಿನ ಬಹಳ ಒಳ್ಳೆಯದಾಗಲಿದೆ. ಲಾಭಗಳು ಹೆಚ್ಚಾಗಲಿದೆ, ಉದ್ಯೋಗ ಹಾಗೂ ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ. ಹಾಗೆಯೇ ಈ ದಿನ ಸೂರ್ಯನ ಆಶೀರ್ವಾದ ಪಡೆದು ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಜಯ ಲಭಿಸುತ್ತದೆ.
5/ 8
ಮಿಥುನ ರಾಶಿ: ಸೂರ್ಯ ರಾಶಿ ಬದಲಾವಣೆ ಮಾಡುವುದರಿಂದ ಮಿಥುನ ರಾಶಿಯವರಿಗೆ ಅದೃಷ್ಟ ಹುಡುಕಿ ಬರುತ್ತದೆ. ಕೆಲಸದ ಸ್ಥಳದಲ್ಲಿ, ವೈಯಕ್ತಿಕ ಜೀವನದಲ್ಲಿ ಸಹ ಸಮಸ್ಯೆಗಳು ಬರದೇ ಎಲ್ಲವೂ ಚೆನ್ನಾಗಿರುತ್ತದೆ. ನೀವು ಈ ದಿನ ಯಾವುದೇ ಕೆಲಸ ಮಾಡಿದರೂ ಸಹ ಯಶಸ್ಸು ಸಿಗುತ್ತದೆ.
6/ 8
ಕಟಕ ರಾಶಿ: ಕಟಕ ರಾಶಿಯವರಿಗೆ ಸಹ ಈ ಬಾರಿ ಅದೃಷ್ಟ ಚೆನ್ನಾಗಿದೆ. ಸೂರ್ಯನ ಆಶೀರ್ವಾದದಿಂದ ಮಾಡಿದ ಕೆಲಸಗಳು ಕೈ ಹಿಡಿಯುತ್ತವೆ. ಅಲ್ಲದೇ ನಿಮ್ಮ ಬದುಕಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಸಹ ಅದು ನಿವಾರಣೆಯಾಗುತ್ತದೆ. ಪ್ರೇಮ ವಿವಾಹಕ್ಕೆ ಒಪ್ಪಿಗೆ ಸಿಗಲಿದೆ, ಸಂಗಾತಿಯ ಸಂಪೂರ್ಣ ಬೆಂಬಲ ಸಿಗುತ್ತದೆ,
7/ 8
ಮಕರ ರಾಶಿ: ಮಕರ ರಾಶಿಗೆ ಸೂರ್ಯನ ಆಗಮನವಾಗುವುದರಿಂದ ಈ ರಾಶಿಯ ಜನರಿಗೆ ಎಷ್ಟು ಅದೃಷ್ಟ ಎಂದು ಹೇಳುವುದೇ ಬೆಡ. ಸಮಸ್ಯೆಗಳು ಮಾಯವಾಗಿ, ಎಲ್ಲವೂ ನೆಮ್ಮದಿಯಾಗಿರುತ್ತದೆ. ಈ ರಾಶಿಯವರಿಗೆ ಆರ್ಥಿಕ ಲಾಭಗಳು ಸಹ ಹೆಚ್ಚು ಹಾಗೂ ಮುಟ್ಟೆದ್ದೆಲ್ಲಾ ಚಿನ್ನ ಎನ್ನುವ ಪರಿಸ್ಥಿತಿ ಇರುತ್ತದೆ,
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)