ಮೇಷ ರಾಶಿ: ರಾಹು-ಕೇತುವಿನ ಸಂಚಾರದ ಕಾರಣದಿಂದ ಮೇಷ ರಾಶಿಯವರು ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಬಹಳ ಆರ್ಥಿಕ ಸಮಸ್ಯೆಗಳು ಸಹ ಕಾಡುತ್ತದೆ. ಕೆಲಸ ಮತ್ತು ವ್ಯವಹಾರದಲ್ಲಿ ನಷ್ಟ ಆಗುವ ಸಾಧ್ಯತೆ ಇರುತತದೆ. ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ. ಒಮ್ಮೆ ಹಣಕಾಸಿನ ಸಮಸ್ಯೆಗಳು ಬಂದರೆ ಬೇಗ ಮುಗಿಯುವುದಿಲ್ಲ, ಒಂದರ ನಂತರ ಒಂದು ಬರುತ್ತದೆ.