Love Breakup: ಈ ರಾಶಿಗಳಿಗೆ ಪ್ರೀತಿಯಲ್ಲಿ ಸಕ್ಸಸ್ ಸಿಗೋದೇ ಇಲ್ವಂತೆ, ಬ್ರೇಕಪ್ ಗ್ಯಾರಂಟಿ
Relationship Tips: ಪ್ರೀತಿಯಲ್ಲಿ ಬೀಳುವುದು ಮನುಷ್ಯನ ಸಹಜ ಗುಣ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಕೆಲವೊಮ್ಮೆ ಪ್ರತಿಯೊಬ್ಬರ ಪ್ರೀತಿ ಸಕ್ಸಸ್ ಆಗುವುದಿಲ್ಲ. ಕಾರಣಾಂತರಗಳಿಂದ ಜೋಡಿ ದೂರವಾಗಬೇಕಾಗುತ್ತದೆ. ಈ ರೀತಿ ಪ್ರೀತಿಯಲ್ಲಿ ನೋವನ್ನು ಅನುಭವಿಸುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಬ್ರೇಕಪ್ ಎನ್ನುವುದು ಕೇವಲ ಪದವಲ್ಲ, ಅದು ಸಾವಿರಾರು ಭಾವನೆಗಳ ಮಿಶ್ರಣ ಎನ್ನಬಹುದು. ಒಂದು ಜೋಡಿ ದೂರಾಗಲು ಸಾವಿರ ಕಾರಣಗಳಿರುತ್ತದೆ. ಆದರೆ ಅನುಭವಿಸಲು ನೋವು ಮಾತ್ರ ಒಂದೇ ರೀತಿ ಎನ್ನಬಹುದು. ಈ ಬ್ರೇಕಪ್ ನೋವಿನಿಂದ ಹೊರಬರುವುದು ಸುಲಭವಲ್ಲ. ಅದನ್ನು ಅರಗಿಸಿಕೊಳ್ಳುವುದು ಮುಖ್ಯ.
2/ 7
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೂಡ ಕೆಲವು ರಾಶಿಯವರು ಈ ಬ್ರೇಕಪ್ ನೋವನ್ನು ಅನುಭವಿಸುತ್ತಾರಂತೆ. ಮಾತ್ರವಲ್ಲದೇ ಈ ರಾಶಿಯವರಿಗೆ ಆ ನೋವಿನಿಂದ ಹೊರಬರಲು ಸಹ ಬಹಳ ಸಮಯ ಬೇಕಾಗುತ್ತಂತೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 7
ವೃಷಭ ರಾಶಿ: ಈ ರಾಶಿಯವರು ತುಂಬಾ ಹಠಮಾರಿಗಳು ಎನ್ನಬಹುದು. ಅವರಿಗೆ ತಮ್ಮ ಹಠ ಹಾಗೂ ಸ್ವಾಭಿಮಾನದ ಮುಂದೆ ಯಾವುದೂ ಕಾಣುವುದಿಲ್ಲ. ಹಾಗಾಗಿ ಈ ರಾಶಿಯವರಿಗೆ ಬ್ರೇಕಪ್ ನೋವು ಸಹ ಹೆಚ್ಚು ದಿನ ಕಾಡುತ್ತದೆ. ಅಲ್ಲದೇ, ಇವರ ಈ ಗುಣವೇ ಅವರ ಸಂಬಂಧದಲ್ಲಿ ಸಮಸ್ಯೆ ತಂದು, ಬ್ರೇಕಪ್ಗೆ ಕಾರಣ ಎನ್ನಬಹುದು.
4/ 7
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಪ್ರೀತಿಯಲ್ಲಿ ಮೋಸ ಆಗುವುದು ಜಾಸ್ತಿಯಂತೆ. ಇವರು ಮನಸಾರೇ ಪ್ರೀತಿಸಿದ ವ್ಯಕ್ತಿ ಮೋಸ ಮಾಡುವ ಸಾಧ್ಯತೆಯಿದೆಯಂತೆ. ಅಲ್ಲದೇ ಇವರು ಬಹಳ ಸೂಕ್ಷ್ಮ ಸ್ವಭಾವದಾಗಿರುವ ಕಾರಣ, ಈ ನೋವಿನಿಂದ ಹೊರಬರಲು ಸಮಯ ಬೇಕಾಗುತ್ತದೆ.
5/ 7
ಧನಸ್ಸು ರಾಶಿ: ಈ ರಾಶಿಯವರಿಗೆ ಯಾರಾದರೂ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಿದರೆ ಆಗುವುದಿಲ್ಲ, ಹಾಗಾಗಿ ಸಂಗಾತಿಯ ಜೊತೆ ಜಗಳ ಜಾಸ್ತಿ ಹಾಗೂ ಬ್ರೇಕಪ್ ಸಹ ಇದೇ ಕಾರಣಕ್ಕೆ ಆಗುತ್ತದೆ. ಆದರೆ ಹೆಚ್ಚು ದಿನಗಳ ಕಾಲ ನೋವನ್ನು ಸಹ ಇವರೇ ಅನುಭವಿಸುತ್ತಾರೆ.
6/ 7
ಮೇಷ ರಾಶಿ: ಈ ರಾಶಿಯವರ ಗುಣ ಬಹಳ ಜನರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇವರಿಗೆ ಬಹಳ ಕೋಪ, ಸಣ್ಣ ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಬ್ರೇಕಪ್ ಗ್ಯಾರಂಟಿ ಎನ್ನಬಹುದು. ಹಾಗೆಯೇ, ಈ ನೋವಿನಿಂದ ಹೊರಬರಲು ಸಹ ಇವರಿಗೆ ಹೆಚ್ಚು ಸಮಯ ಬೇಕಾಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)