ಮಿಥುನ ರಾಶಿ ಪರಿಹಾರ: ಗುರುವಾರದಂದು ಹಳದಿ ಬಟ್ಟೆಯನ್ನು ಧರಿಸಿ, 1.25 ಕೆಜಿ ಕಡಲೆಕಾಯಿ, 11 ರೂಪಾಯಿ, ಗೋಮತಿ ಚಕ್ರ ಮತ್ತು ಶಂಖವನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಐದು ಗಂಟುಗಳನ್ನು ಕಟ್ಟಿ. ನಂತರ ವಿಷ್ಣು-ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ, ಬ್ರಾಹ್ಮಣನಿಗೆ ಇದನ್ನು ದಾನ ಮಾಡಿ. ಇನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪುಸ್ತಕ, ಪೆನ್ನು, ಬ್ಯಾಗ್, ಪೆನ್ಸಿಲ್, ಎರೇಸರ್ ಮುಂತಾದ ಶಾಲಾ ಸಾಮಗ್ರಿಗಳನ್ನು ದಾನ ಮಾಡಿ,
ಕರ್ಕಾಟಕ ರಾಶಿಗೆ ಪರಿಹಾರ: ಗುರುವಾರದಂದು ಒಂದು ವರ್ಷಗಳ ಕಾಲ ಉಪವಾಸ ಮಾಡಿ. ಗುರುವಾರದಂದು ಹಳದಿ ಬಟ್ಟೆಗಳನ್ನು ಧರಿಸಿ, ಹಾಗೆಯೇ ಆ ದಿನ ಉಪ್ಪು ಆಹಾರ ಸೇವಿಸಬೇಡಿ. ಈ ದಿನ ಕೇವಲ ಸಿಹಿ ಮತ್ತು ಹಳದಿ ಪದಾರ್ಥಗಳನ್ನು ಮಾತ್ರ ತಿನ್ನಲು ಪ್ರಯತ್ನಿಸಿ. ಹಾಗೆಯೇ ಈ ದಿನ ಸಂಪೂರ್ಣ ವಿಧಿವಿಧಾನಗಳೊಂದಿಗೆ ವಿಷ್ಣು ಸಹಸ್ರನಾಮವನ್ನು ಪಠಿಸಿ, ನಂತರ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪುಸ್ತಕ, ಪೆನ್ನು, ಬ್ಯಾಗ್, ಪೆನ್ಸಿಲ್, ರಬ್ಬರ್ ಮುಂತಾದ ಶಾಲಾ ಸಾಮಗ್ರಿಗಳನ್ನು ದಾನ ಮಾಡಿ.