Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

Zodiac Signs: ಬಂಗಾರ ಎಂದರೆ ಎಲ್ಲರಿಗೂ ಬಹಳ ಇಷ್ಟ. ಅದರಲ್ಲೂ ಮಹಿಳೆಯರಿಗೆ ಚಿನ್ನದ ಮೇಲಿನ ಆಸೆ ಎಂದಿಗೂ ಕಡಿಮೆ ಆಗುವುದಿಲ್ಲ. ಈ ಚಿನ್ನ ಕೇವಲ ಅಲಂಕಾರಿ ಮಾತ್ರವಲ್ಲ, ಕಷ್ಟದ ಸಮಯದಲ್ಲಿ ಸಹ ನೆರವಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲವರಿಗೆ ಚಿನ್ನ ಧರಿಸಿದ್ರೆ ಲಾಭವಾಗುತ್ತದೆ, ಇನ್ನೂ ಕೆಲವರಿಗೆ ಈ ಚಿನ್ನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದ್ರೆ ಯಾವ ರಾಶಿಯವರು ಚಿನ್ನ ಧರಿಸಬಾರದು ಹಾಗೂ ಯಾರು ಧರಿಸಿದ್ರೆ ಉತ್ತಮ ಎಂಬುದು ಇಲ್ಲಿದೆ.

First published:

  • 18

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನವನ್ನು ಧರಿಸುವುದು ಬಹಳ ಶುಭ ಎನ್ನಲಾಗುತ್ತದೆ. ಇದನ್ನು ನಾವು ದೈನಂದಿನ ಜೀವನದಲ್ಲಿ ಬಳಸುತ್ತೇವೆ. ನಮ್ಮ ಜೀವನದ ಪ್ರತಿ ಮುಖ್ಯ ಸಮಯದಲ್ಲಿ ಚಿನ್ನ ಇರಲೇಬೇಕು. ಒಂದು ರೀತಿ ಈ ಬಂಗಾರ ನಮ್ಮ ಜೀವನದ ಭಾಗವಾಗಿದೆ.

    MORE
    GALLERIES

  • 28

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    ಈ ಚಿನ್ನವನ್ನು ಕೇವಲ ಅಲಂಕಾರಿಕ ಆಭರಣ ಎಂದು ಹೇಳಲಾಗುವುದಿಲ್ಲ. ಇದು ಕಷ್ಟದ ಸಮಯದಲ್ಲಿ ಕೈ ಹಿಡಿಯುವ ವಸ್ತು ಸಹ ಹೌದು. ಅನಿವಾರ್ಯವಾಗಿ ಹಣ ಬೇಕಾದಾಗ ಇದನ್ನು ಇಟ್ಟು ಹಣ ಪಡೆಯಬಹುದು. ಒಟ್ಟಾರೆ ಚಿನ್ನ ನಮ್ಮ ಬದುಕಿಗೆ ಬಹಳ ಅಗತ್ಯ.

    MORE
    GALLERIES

  • 38

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    ಹಾಗೆಯೇ ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರಿಗೆ ಈ ಚಿನ್ನ ನಿಜಕ್ಕೂ ಅದೃಷ್ಟವಂತೆ. ಆದರೆ ಇನ್ನೂ ಕೆಲ ರಾಶಿಯವರಿಗೆ ಇದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಚಿನ್ನದಿಂದ ಸಮಸ್ಯೆ ಆಗುವ ರಾಶಿಗಳು ಯಾವುದೇ ಕಾರಣಕ್ಕೂ ಚಿನ್ನ ಧರಿಸಲೇಬಾರದು.

    MORE
    GALLERIES

  • 48

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ, ಮಿಥುನ, ವೃಶ್ಚಿಕ ಮತ್ತು ಕುಂಭ ರಾಶಿಯ ಜನರು ಯಾವುದೇ ಕಾರಣಕ್ಕೂ ಚಿನ್ನವನ್ನು ಧರಿಸಬಾರದು. ಇದು ಅವರ ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ, ಈ ಚಿನ್ನದಿಂದ ಬದುಕಿನ ನೆಮ್ಮದಿ ಹಾಳಾಗುತ್ತದೆ.

    MORE
    GALLERIES

  • 58

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    ತುಲಾ ಮತ್ತು ಮಕರ ರಾಶಿಯ ಜನರು ಸಹ ಚಿನ್ನ ಧರಿಸದೇ ಇದ್ದರೆ ಉತ್ತಮವಂತೆ. ಆದರೆ ಅನಿವಾರ್ಯವಾಗಿ ಚಿನ್ನ ಧರಿಸಬೇಕು ಎಂದಿದ್ದರೆ ಅಪರೂಪಕ್ಕೆ ಧರಿಸಬಹುದು. ಆದರೆ ಅತಿಯಾಗಿ ಬಳಸದೇ ಇದ್ದರೆ ಉತ್ತಮ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

    MORE
    GALLERIES

  • 68

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    ಈ ರಾಶಿಗಳ ಜೊತೆಗೆ ನಿಮ್ಮ ಜಾತಕದಲ್ಲಿ ಶನಿಯಿಂದ ಸಮಸ್ಯೆ ಇದ್ದರೆ ಸಾಡೇಸಾತಿ ಹಾಗೂ ಶನಿದಶ ನಡೆಯುತ್ತಿದ್ದರೆ ಸಹ ಚಿನ್ನವನ್ನು ನೀವು ಧರಿಸಬಾರದು ಎನ್ನಲಾಗುತ್ತದೆ. ಆಕಸ್ಮಿಕವಾಗಿ ಚಿನ್ನ ಧರಿಸುವುದರಿಂದ ನಿಮಗೆ ದೊಡ್ಡ ಸಮಸ್ಯೆಗಳು ಬರಬಹುದು ಎನ್ನಲಾಗುತ್ತಿದೆ,

    MORE
    GALLERIES

  • 78

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    ಇನ್ನು ಸಿಂಹ, ಧನಸ್ಸು, ಕನ್ಯಾ ಹಾಗೂ ಮೇಷ ರಾಶಿಯವರು ಚಿನ್ನ ಧರಿಸಿದರೆ ಅವರಿಗೆ ಬಹಳ ಒಳ್ಳೆಯದಂತೆ. ಚಿನ್ನ ಧರಿಸುವುದರಿಂದ ಪ್ರತಿ ಕೆಲಸದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ನಿಮಗೆ ಲಾಭವಾಗಲಿದೆ.

    MORE
    GALLERIES

  • 88

    Gold: ಈ ರಾಶಿಯವರು ಅಪ್ಪಿ-ತಪ್ಪಿ ಚಿನ್ನ ಧರಿಸಬಾರದು, ಮಿಸ್​ ಆದ್ರೆ ಸಮಸ್ಯೆ ಗ್ಯಾರಂಟಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES